To meet the demands of students: SFI insists


ವರದಿ :ಪಂಚಯ್ಯ ಹಿರೇಮಠ,,,
ಕೊಪ್ಪಳ :(ಕನಕಗಿರಿ) ಮೂಲ ಸೌಲಭ್ಯಗಳ ಕೊರತೆಯಿಂದ ಶಾಲಾ ಕಾಲೇಜುಗಳಲ್ಲಿ ದಿನ ನಿತ್ಯ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ ಹೇಳಿದರು.
ಪಟ್ಟಣದ ಹನುಮಪ್ಫ ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಮಾತನಾಡಿ ಪಿಯುಸಿ ಹೖಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುವ ನೂರಾರು ವಿದ್ಯಾರ್ಥಿಗಳು ಹಾಸ್ಟೇಲ್ ಗೆ ಅರ್ಜಿ ಸಲ್ಲಿಸಿ ಆಯ್ಕೆಪಟ್ಟಿಗೆ
ಕಾಯುತ್ತಿದ್ದಾರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರುಗಳು ಇಲ್ಲಿಯವರೆಗೂ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ತೀವ್ರ ಆಯ್ಕೆ ಪಟ್ಟಿ ಪ್ರಕಟಿಸದೇ ತೊಂದರೆಯಾಗಿದೆ.

ರಾಜ್ಯದಲ್ಲಿ ಶಾಲಾ ಕಾಲೇಜು ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೇ ಪರದಾಡುವಂತಾಗಿದ್ದು, ಗಂಗಾವತಿಯಿಂದ ಕನಕಗಿರಿಗೆ ಬೆಳಗ್ಗೆ 6 ಗಂಟೆಯಿಂದ ಅರ್ದ ಗಂಟೆಗೊಂದರಂತೆ ಬಸ್ ಬೀಡಬೇಕು.
ಕನಕಗಿರಿಯಲ್ಲಿ ಬಿಸಿಎಂ ಹಾಸ್ಟೇಲ್ ಆರಂಭ ಮಾಡಬೇಕು, ಎಲ್ಲಾ ಕಾಲೇಜುಗಳ ಸಮಯಕ್ಕೆ ಬಸ್ ವ್ಯವಸ್ಥೆ, ಮೂಲ ಸೌಲಭ್ಯ, ಗ್ರಾಮೀಣ ಪ್ರದೇಶಗಳಿಗೆ ಡಾಂಬರೀಕರಣ ಮಾಡಬೇಕು, ಎಂದು ಆಗ್ರಹಿಸಿದರು.
ನಂತರದಲ್ಲಿ ಎಸ್ಎಫ್ಐ ಉಪಾಧ್ಯಕ್ಷ ಮಾತನಾಡಿ, ಸರಕಾರಿ ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮಾಡಬೇಕು, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿರುವ ಸರಕಾರ ಹಿಂದುಳಿದ, ಬಡ, ದಲಿತರ, ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆಉಚಿತ ಬಸ್ ಪಾಸ್ ನೀಡಲು ಮೀನಾಮೇಷ ಮಾಡುತ್ತಿರುವುದು ಸರಿಯಾದ ಕ್ರಮವಲ್ಲಾ ಎಂದರು.
ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಎಸ್ಎಫ್ಐ ಸಂಘಟನೆಯಿಂದ ತಹಶೀಲ್ದಾರ ವಿಶ್ವನಾಥ ಮುರಡಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕ ಕಾರ್ಯದರ್ಶಿ ಶಿವಕುಮಾರ, ಪದಾಧಿಕಾರಿಗಳಾದ ನೀಲಕಂಠ ಬಡಿಗೇರ, ಹನುಮಂತ ಮುಕ್ಕುಂಪಿ, ಸಹ ಕಾರ್ಯದರ್ಶಿ ಶರಣ್, ಬಾಲಾಜಿ, ನಾಗರಾಜ, ಕನಕರಾಯ, ಶರೀಫ್, ರಮೇಶ, ಯಶವಂತ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಇದ್ದರು.


