
ಕೊಪ್ಪಳ : 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಇದೇ 25ರ ಗುರುವಾರದಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.
ಕಾರ್ಯಕ್ರಮವು ವಿದ್ಯಾನಂದ ಗುರುಕುಲದ ಹುತಾತ್ಮ ಭವನದಲ್ಲಿ ಜರುಗಲಿದ್ದು ಉದ್ಘಾಟಕರಾಗಿ ವಿಶ್ವಸ್ತ ಮಂಡಳಿಯ ರವಿಕುಮಾರ್ ಸರಮೊಕದಂ, ಅಧ್ಯಕ್ಷತೆಯನ್ನು ಪ್ರಾಚಾರ್ಯ ಎನ್ ಪಾಂಡುರಂಗ ವಹಿಸುವರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ದೈನಂದಿನ ಚಟುವಟಿಕೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು 2024ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಯೋ ನಿವೃತ್ತಿ ಹೊಂದಿದ ಉಪನ್ಯಾಸಕ ನಜೀರ್ ಅಹ್ಮದ್, ಹಾಗೂ ಪರಿಚಾರಕ ಹುಸೇನ್ ಸಾಬ್ ನೂರ್ ಬಾಷಾ ಇವರಿಗೆ ಬೀಳ್ಕೊಡುಗೆ ಸಮಾರಂಭ ಜಗದಲಿದೆ.
ಕಾರ್ಯಕ್ರಮದಲ್ಲಿ ಗಣ್ಯ ಮಹನೀಯರು, ವಿಶೇಷ ಆಹ್ವಾನಿತರು, ಮುಖ್ಯ ಅಥಿತಿಗಳು ಭಾಗವಹಿಸಲಿದ್ದಾರೆ ಎಂದು ವಿದ್ಯಾನಂದ ಗುರುಕುಲ ಶಿಕ್ಷಣ ವಿಶ್ವಸ್ತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
