Breaking News

ಸ್ವಾಭಿಮಾನದಿಂದ ಸಂಘಟನೆ ನಡೆಸಿ : ಹಳ್ಳಿ

Run an organization with self-respect: Halli

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ ( ಯಲಬುರ್ಗಾ) : ನಮ್ಮ ಸಂಘಟನೆಯ ಪದಾಧಿಕಾರಿಗಳು ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಉಳಿವಿಗಾಗಿ ಸ್ವಾಭಿಮಾನದ ಬದುಕನ್ನು ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಹೇಳಿದರು.

ಸೋಮವಾರದಂದು ಯಲಬುರ್ಗಾ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನೂತನ ತಾಲೂಕಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಯಾವ ಸದಸ್ಯರು ಬೇರೆಯವರ ಮಾತಿಗೆ ಕಿವಿಗೊಡದೇ ಸಂಘಟನೆಯನ್ನು ಗ್ರಾಮೀಣ ಮಟ್ಟದಿಂದ ತಾಲೂಕ ಮಟ್ಟದವರೆಗೆ ಬಲಿಷ್ಠಗೊಳಿಸಬೇಕು ಎಂದರು.

ನಂತರದಲ್ಲಿ ಯಲಬುರ್ಗಾ ನೂತನ ತಾಲೂಕಾಧ್ಯಕ್ಷ ರುದ್ರಪ್ಪ ಬೇವೂರ ಮಾತನಾಡಿ ಸಂಘಟಕರಲ್ಲಿ ಯಾವುದೇ ಬಿನ್ನಾಭಿಪ್ರಾಯವಿರದೇ, ಸಮಾನ ಮನಸ್ಕರಾಗಿ ಸಂಘಟಿಸಲು ಮುಂದಾಗಬೇಕು.

ಭಷ್ಟ ಅಧಿಕಾರಿಗಳ ವಿರುದ್ದ ಹಾಗೂ ಭ್ರಷ್ಟ ವ್ಯವಸ್ಥೆ ವಿರುದ್ದ ಯಾವುದೇ ಭಯವಿಲ್ಲದೇ ಯಾವ ಮುಲಾಜೀಗೂ ಒಳ ಪಡದೇ ನಿರ್ಭಯವಾಗಿ ಹೋರಾಟ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳ ಕೂಗಿಗೆ ಸ್ಪಂದಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹೇಶ ನೆರೆಗಲ್ ಕುಕನೂರ ತಾಲೂಕಾಧ್ಯಕ್ಷ ಮರಿಯಪ್ಪ ಕನಕಗಿರಿ, ಯುವ ಘಟಕದ ಮಂಜುನಾಥ ತಳವಾರ, ಶರಣು ಕಾಳಿ, ಸುಕಮುನಿ ನಾಯಕ, ಬಸವರಾಜ ಹುಲಿ, ಅಮರೇಶ್ ಗೌಡ್ರ, ಹನುಮಂತ ಸಣ್ಣಮನಿ, ರಮೇಶ ರಾವಣಕಿ, ಬಸವರಾಜ ಹುಲಿ, ಪ್ರವೀಣ ಲಿಂಗನಬಂಡಿ ಇನ್ನಿತರ ಪದಾಧಿಕಾರಿಗಳು ಇದ್ದರು.

About Mallikarjun

Check Also

ಕಲ್ಯಾಣ ಕರ್ನಾಟಕ ಉತ್ಸವ ದಿನ: ನಿವೇಶನ ಹಕ್ಕು ಪತ್ರ ವಿತರಣೆ

Kalyan Karnataka Festival Day: Land Title Deed Distribution ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸೆ.17ರಂದು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.