Breaking News

ಹಣೆಯ ಮೇಲಿನ ವಿಭೂತಿಯು ಒಂದು ಕಾಲದಲ್ಲಿ ನಿಮ್ಮ ಧರ್ಮದ ಗುರುತಾಗಿತ್ತು ಲೇಖನದ ಮೂಲಕ ಲಿಂಗಾಯತಸಮುದಾಯಕ್ಕೆ ಕಪಾಳಮೋಕ್ಷ ಮಾಡಿದ್ದಾರೆ !

Vibhuti on the forehead was once a mark of your religion and slapped the Lingayat community through the article.

ಜಾಹೀರಾತು


ನಮ್ಮತನ ಹಾಳಾಗಲು ನಾವುಗಳು ಹಾಕಿಕೊಂಡ ದಾರಿಗಳು

ಲಿಂಗಾಯತರು ಇದನ್ನು ಒಬ್ಬ ಬ್ರಾಹ್ಮಣನಿಂದ ಕೇಳಬೇಕಾದ ಪರಿಸ್ಥಿತಿ.
ತೀರಾ ನಾಚಿಕೆಗೇಡಿನ ವಿಚಾರವಲ್ಲವೆ?
ಅನ್ಯ ಧರ್ಮದವರಿಂದ ಲಿಂಗಾಯತರು ಕಲಿಯಬೇಕೆ?
ಮಧ್ಯ ಏಷಿಯಾ ಮೂಲದ ಧಾರ್ಮಿಕ ಮೂಲಭೂತವಾದಿಗಳಾಗಿರುವ ಬ್ರಾಹ್ಮಣರು ಈ ಲೇಖನದ ಮೂಲಕ ಲಿಂಗಾಯತ ಸಮುದಾಯಕ್ಕೆ ಕಪಾಳಮೋಕ್ಷ ಮಾಡಿದ್ದಾರೆ.
೧. ನಿಮ್ಮ ಹಣೆಯ ಮೇಲಿನ ವಿಭೂತಿಯು ಒಂದು ಕಾಲದಲ್ಲಿ ನಿಮ್ಮ ಧರ್ಮದ ಗುರುತಾಗಿತ್ತು. ನೀವು ಖಾಲಿ ಹಣೆಯನ್ನು ಧರ್ಮಹೀನತೆಯ ಸಂಕೇತವೆಂದು ಪರಿಗಣಿಸುತ್ತೀರಿ. ಆದರೆ ಇಂದು ನೀವು ಮನೆಯಿಂದ ಹೊರಡುವ ಮೊದಲು ವಿಭೂತಿಯನ್ನು ಧರಿಸುವುದು ನಿಲ್ಲಿಸಿದ್ದೀರಿ ಮಾತ್ರವಲ್ಲ, ನಿಮ್ಮ ಮನೆಯ ಮಹಿಳೆಯರು ಮತ್ತು ಮಕ್ಕಳು ಫ್ಯಾಷನ್ ಮತ್ತು ಆಧುನಿಕತೆಯ ಹೆಸರಿನಲ್ಲಿ ಹಣೆಗೆ ವಿಭೂತಿ ಹಚ್ಚುವ ಸಾಂಪ್ರದಾಯವನ್ನು ಬಿಟ್ಟಿದ್ದಾರೆ.


ನಮ್ಮ ಬ್ರಾಹ್ಮಣ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಧಾರ್ಮಿಕ ಸಂಸ್ಕಾರವಿಲ್ಲ ಎಂದು ನೀವು ಟೀಕಿಸುತ್ತೀರಿˌ ಆದರೆ ಧಾರ್ಮಿಕ ಸಂಸ್ಕಾರವಿರುವ ನಿಮ್ಮ ಮನೆಯ ಹೆಣ್ಣು ಮಕ್ಕಳು ಲಿಂಗಧಾರಣೆ ಮಾಡುವುದಿಲ್ಲ/ಹಣೆಗೆ ವಿಭೂತಿ ಧರಿಸುವುದಿಲ್ಲ. ನಿಮ್ಮ ಮಕ್ಕಳು ಕೂಡ ಅಷ್ಟೆ. ಆದರೆ ನಮ್ಮ ಮನೆಯ ಮಕ್ಕಳು ಜನಿವಾರ ಮತ್ತು ಗಂಧ ಧರಿಸುವುದು ಮರೆಯುವುದಿಲ್ಲ. ನಾವು ನಮ್ಮ ಧರ್ಮವನ್ನು ಪಾಲಿಸುತ್ತಿದ್ದೇವೆ ಮತ್ತು ನಮ್ಮ ದೇವತೆಗಳಾಗ ತಿರುಪತಿˌ ಮಂತ್ರಾಲಯಕ್ಕೆ ನಿಮ್ಮ ಸಮುದಾಯದವರೂ ಬರುವಂತೆ ಮಾಡಿದ್ದೇವೆ. ನಿಮ್ಮ ಸಮುದಾಯದ ಸ್ತ್ರೀಯರುˌ ಯುವಕರು ಹಾಗು ಮಕ್ಕಳು ನಿಮ್ಮ ಧರ್ಮವನ್ನು ಮರೆತರೆ ಅದಕ್ಕೆ ನೀವೇ ಕಾರಣರು ಹೊರತು ನಾವು ಕಾರಣವಲ್ಲ.
೨. ನಾವು ನಮ್ಮ ಬ್ರಾಹ್ಮಣ ಸಂಪ್ರದಾಯದಂತೆ ಲಲಿತಾ ಸಹಸ್ರನಾಮ ಪಠಣˌ ಗಾಯಿತ್ರಿ ಮಂತ್ರ ಜಪˌ ವೇದ ಪಾರಾಯಣ ತಪ್ಪದೆ ಮಾಡುತ್ತೇವೆ ಅದನ್ನು ನಿಮ್ಮ ಜನರೂ ಮಾಡುತ್ತಿರುವರು.
ಅದರಲ್ಲಿ ನಮ್ಮ ತಪ್ಪೇನಿದೆ?
ಆದರೆ ನಾವೆಂದೂ ನಿಮ್ಮ ಆಚರಣೆಗಳನ್ನು ಮಾಡುವುದಿಲ್ಲ. ನೀವು ನಿಮ್ಮ ಸಂಪ್ರದಾಯದಂತೆ ವಚನ ಪಠಣ ಮಾಡುವದಿಲ್ಲ. ಬದಲಾಗಿ ನಮ್ಮ ಸಾಂಪ್ರದಾಯದ ಸತ್ಯನಾರಾಯಣ/ವರದಾ ಶಂಕರ ಪೂಜೆ ಮಾಡುತ್ತೀರಿ. ಅದಕ್ಕೆ ನಾವು ಜವಾಬ್ಧಾರರಲ್ಲ.
೩. ನಮ್ಮ ಸಮುದಾಯದಲ್ಲಿ ಮಗು ನಡೆಯಲು ಕಲಿತಾಗ ಅನ್ನ ಪ್ರಾಸನˌ ಅಕ್ಷರ ಕಲಿಕಾ ಶಾಸ್ತ್ರ ˌ ಮುಂಜಿವೆಗಳುˌ ಮುದ್ರಾ ಧಾರಣೆ ಮುಂತಾದ ಧಾರ್ಮಿಕ ಸಂಸ್ಕಾರಗಳನ್ನು ಕಲಿಸುತ್ತೇವೆ. ಆ ಮಗು ತನ್ನ ತಂದೆಯ ಕೈಬೆರಳುಗಳನ್ನು ಹಿಡಿದುಕೊಂಡು ಸಂಧ್ಯಾವಂದನೆˌ ರಾಯರ ಗುಡಿ ದರ್ಶನ ಮಾಡುತ್ತದೆ. ಮತ್ತು ಈ ಆಚರಣೆಗಳು ತನ್ನ ಜೀವಮಾನದ ಕರ್ತವ್ಯವೆಂದು ಪರಿಗಣಿಸುತ್ತಾನೆ
ಆದರೆ ನೀವು ನಿಮ್ಮ ಲಿಂಗ ದೀಕ್ಷೆˌ ಲಿಂಗಧಾರಣೆˌ ಲಿಂಗಪೂಜೆಗಳನ್ನು ಮಾಡುವುದು ನಿಲ್ಲಿಸಿದ್ದೀರಿ. ಈಗ ನಿಮ್ಮ ಮಕ್ಕಳಿಗೆ ನಿಮ್ಮ ಧರ್ಮದ ಸಂಸ್ಕಾರಗಳೆ ಇಲ್ಲ. ಅವು ಜೈ ಬಸವಣ್ಣ ಅನ್ನಬೇಕಾದವು ಜೈ ಶ್ರೀರಾಮ ಅನ್ನುತ್ತಿವೆ ನೀವು ನಿಮ್ಮ ಧರ್ಮದ ಬಗ್ಗೆ ನಿಮ್ಮ ಮಕ್ಕಳಿಗೆ ತಿಳಿ ಹೇಳದೆ ನಮ್ಮ ಧರ್ಮದ ಆಚರಣೆಗಳು ಮಾಡುತ್ತಾ ಇದ್ದರೆ ಅದರಲ್ಲಿ ನಮ್ಮ ತಪ್ಪೇನಿದೆ?
೪. ಕಾನ್ವೆಂಟ್ ಶಾಲೆಗಳಲ್ಲಿ ಓದಿದ ನಂತರ ನಿಮ್ಮ ಮಕ್ಕಳು ಲಿಂಗಧಾರಣೆಯನ್ನೇ ಮರೆಯುತ್ತಾರೆ. ಆದರೆ ನಮ್ಮ ಮಕ್ಕಳು ವಿದೇಶಕ್ಕೆ ಹೋದರೂ ಗೀತಾ ಶ್ಲೋಕಗಳನ್ನು ಪಠಿಸುವˌ ಸಂಧ್ಯಾವಂದನೆ ಮಾಡುವ ಅಥವಾ ಜನಿವಾರ ಧರಿಸುವುದನ್ನು ಎಂದಿಗೂ ಮರೆಯುವುದಿಲ್ಲ ನಮ್ಮ ಮನೆಯಲ್ಲಿ ಒಂದು ಮಗು ನಮ್ಮ ಸಂಬಂಧಿಕರ ಮುಂದೆ ವೇದ ಪಠಣ ಮಾಡಲು ಸಾಧ್ಯವಾಗದಿದ್ದರೆ ನಾವು ನಾಚಿಕೆಪಡುತ್ತೇವೆ. ಆದರೆ ನಿಮ್ಮ ಮಗು ವಚನ ಪ್ರಾರ್ಥನೆಯನ್ನು ಮಾಡುವುದೇಯಿಲ್ಲ *ನಮ್ಮ ಮನೆಗಳಲ್ಲಿ ಮಗು ಮಾತನಾಡಲು ಪ್ರಾರಂಭಿಸಿದಾಗ, ನಾವು ಹಿರಿಯರಿಗೆ “ರಾಮ್ ರಾಮ್” ಹೇಳಲು ಕಲಿಸುತ್ತೇವೆ. ಆದರೆ *ನೀವು ಶರಣು ಶರಣಾರ್ಥಿಯ ಬದಲಿಗೆ ಹಲೋ, ಹಾಯ್ ಎಂದು ಹೇಳಲು ಕಲಿಸುತ್ತೀರಿ* ಹಾಗಾದರೆ ಇದಕ್ಕೆ ನಾವು ಹೇಗೆ ಹೊಣೆಯಾಗುತ್ತೇವೇ?
೫. *ನಮ್ಮ ಮಕ್ಕಳು ಕಾನ್ವೆಂಟ್‌ನಿಂದ ಹಿಂತಿರುಗಿದ ನಂತರ ಸಂಸ್ಕೃತ ಕಲಿಯುತ್ತಾರೆ ಮತ್ತು ನಮ್ಮ ಧಾರ್ಮಿಕ ಪುಸ್ತಕಗಳನ್ನು ಓದಲು ಪ್ರಾರಂಭಿಸುತ್ತಾರೆ. *ನಿಮ್ಮ ಮಕ್ಕಳು ವಚನಗಳನ್ನು ಓದುವುದಿಲ್ಲ. ಅವರಿಗೆ ಶರಣ ಸಂಸ್ಕೃತಿ ಗೊತ್ತಿಲ್ಲ, ಅವನ ಸ್ವಂತ ಮಾತೃಭಾಷೆಯಲ್ಲಿಯೂ ಅವನು ಪರಿಣತನಲ್ಲ.* ಇದರಲ್ಲಿ ನಮ್ಮ ತಪ್ಪೇನಿದೆ?
೬. ನೀವು ನಾಗರಿಕತೆ, ಇತಿಹಾಸ, ಸಂಪ್ರದಾಯಗಳು ಇತ್ಯಾದಿ ಎಲ್ಲವನ್ನೂ ಹೊಂದಿದ್ದೀರಿ. ಆದರೆ ನೀವು ಅವುಗಳನ್ನೆಲ್ಲಾ ಕುರುಡು ಆಧುನಿಕತೆಯ ಹೆಸರಿನಲ್ಲಿ ತ್ಯಾಗ ಮಾಡಿದ್ದೀರಿ. ಆದರೆ ನಾವು ಅವನ್ನು ಮರೆತಿಲ್ಲ. ಅದೇ ನಮ್ಮ ನಿಮ್ಮ ನಡುವಿನ ವ್ಯತ್ಯಾಸ. ನಿಮ್ಮ ಬೇರುಗಳೊಂದಿಗಿನ ಸಂಬಂಧವನ್ನು ನೀವು ಮುರಿದಿದ್ದೀರಿ. ಆದರೆ ನಾವು ನಮ್ಮ ಬೇರುಗಳನ್ನು ಬಿಡಲು ಯಾವಾಗಲೂ ಬಯಸುವುದಿಲ್ಲ ಅದರಲ್ಲಿ ನಮ್ಮ ತಪ್ಪೇನಿದೆ?
೭ *ಒಂದು ಸಮುದಾಯವು ತನ್ನ ಗುರುತನ್ನು ರಕ್ಷಿಸಿಕೊಳ್ಳಲು ಸ್ವಾಭಾವಿಕವಾಗಿ ಎಚ್ಚರವಾಗಿರಬೇಕು. ಆದರೆ ದುರದೃಷ್ಟವಶಾತ್ *ನೀವು ಈಗ ನಿಮ್ಮ ಧರ್ಮವನ್ನೆ ಮನವರಿಕೆ ಮಾಡಿಕೊಳ್ಳದ ದಯನೀಯ ಸ್ಥಿತಿಯಲ್ಲಿದ್ದೀರಿ.* ನಿಮ್ಮ ಸಂಪ್ರದಾಯಗಳನ್ನು ಮರೆತು ನೀವು ವೈದಿಕ ಸಂಪ್ರದಾಯಗಳ ದಾಸರಾಗಿದ್ದಿರಿ ನಿಮ್ಮ ನಾಗರಿಕತೆಯ ನಾಶದ ಭಯ ಮತ್ತು ಅಭದ್ರತೆಯ ಭಾವನೆಗೆ ನಿಜವಾದ ಕಾರಣಗಳು ಯಾವುವು ಎಂದು ಯೋಚಿಸಿ. ಅದಕ್ಕೆ ಖಂಡಿತ ಕಾರಣ ನಾವಲ್ಲ.
೮. ನಾವು ನಮ್ಮ ದೇವರನ್ನು ಬಿಟ್ಟು ಬೇರೆ ಧರ್ಮದ ದೇವರುಗಳಿಗೆ ಹೋಗುವುದಿಲ್ಲ. ನಾವು ನಮ್ಮ ಸಾಂಪ್ರದಾಯದಂತೆ ಮದುವೆˌ ಮುಂಜಿ ಮಾಡುತ್ತೇವೆ. ನಾವು ನಿಮ್ಮ ಧರ್ಮದ ಬಸವರಾಜˌ ಸಿದ್ಲಿಂಗ್ ಮುಂತಾದ ಹೆಸರುಗಳನ್ನು ನಮ್ಮ ಮಕ್ಕಳಿಗೆ ಇಡುವುದಿಲ್ಲ ಆದರೆ ನೀವು ನಿಮ್ಮ ಧರ್ಮದ ದೇವರುಗಳನ್ನು ಮರೆತು ನಮ್ಮ ಧರ್ಮದ ದೇವರುಗಳನ್ನು ನಡೆದುಕೊಳ್ಳುತ್ತೀರಿ. ನಮ್ಮ ಸಾಂಪ್ರದಾಯಗಳನ್ನು ಪಾಲಿಸುತ್ತಿರಿ. ನಮ್ಮ ದೇವರ ಹೆಸರುಗಳಾದ ಶ್ರೀನಿವಾಸˌ ರಾಮˌ ಕೃಷ್ಣ ˌ ರಾಘವೇಂದ್ರ ಮುತಾದ ಹೆಸರುಗಳನ್ನು ಇಡುತ್ತೀರಿ ಅದರಲ್ಲಿ ನಮ್ಮ ತಪ್ಪೇನಿದೆ?
೯. ನಾವು ನಿಮ್ಮ ಧರ್ಮದ ಆಚರಣೆಗಳಾದ ಲಿಂಗಪೂಜೆ ಮುಂತಾದವುಗಳನ್ನು ಮಾಡುವುದಿಲ್ಲ ಆದರೆ ನೀವು ನಮ್ಮ ಸಾಂಪ್ರದಾಯಗಳಾದ ಲಕ್ಷ್ಮಿ ಪೂಜೆˌ ಗಣಪತಿ ಪೂಜೆˌ ಹೋಮ-ಹವನ ಮುಂತಾವ ವೈದಿಕ ಆಚರಣೆಗಳು ಮಾಡುತ್ತೀರಿ ಅದರಲ್ಲಿ ನಮ್ಮ ತಪ್ಪೇನಿದೆ?
೧೦. ನಿಜವಾದ ಸಮಸ್ಯೆ ಏನೆಂದರೆ ನಿಮ್ಮ ಸಮುದಾಯವು ಜಾಗೃತಗೊಳ್ಳಬೇಕೆಂದು ನೀವು ಬಯಸುತ್ತೀರಿ, ಆದರೆ ನೀವೇ ಆ ಸಂಪ್ರದಾಯವನ್ನು ಪಾಲಿಸುವುದಿಲ್ಲ. ಆದ್ದರಿಂದ ನಿಮ್ಮ ಸ್ವಂತ ಕುಟುಂಬದ ಸದಸ್ಯರು ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವುದಿಲ್ಲ. ನಿಮ್ಮ ಸಮುದಾಯದ ಜನರಿಗೆ ನಿಮ್ಮ ಲಿಂಗಾಯತ ಧರ್ಮ ವೈದಿಕ ಧರ್ಮವನ್ನು ವಿರೋಧಿಸಿ ಹುಟ್ಟಿದ್ದು ಎನ್ನುವ ಅರಿವೆ ಇಲ್ಲ ಇದರಲ್ಲಿ ನಮ್ಮ ತಪ್ಪೇನಿದೆ?
೧೧. ನೀವಾಗಲಿ ನಿಮ್ಮ ಮಠಾಧೀಶರಾಗಲಿ ನಮ್ಮ ಮಠಕ್ಕೆ ಬರಲಿ ಇಲ್ಲವೆ ನಮ್ಮ ಮನೆಗೆ ಬರಲಿ ನಾವು ಅವರೊಂದಿಗೆ ಸಹ ಪಂಕ್ತಿ ಭೋಜನ ಮಾಡುವುದಿಲ್ಲ. ಆದರೂ ನಿಮಗೆ ಸ್ವಾಭಿಮಾನ ಕಾಡುವುದಿಲ್ಲ ನಿಮ್ಮ ಮಠಾಧೀಶರಿಗಂತೂ ನಿಮ್ಮ ಧರ್ಮದ ಬಗ್ಗೆ ಅಭಿಮಾನವೇ ಇಲ್ಲ. ಅವರು ತಮ್ಮ ಮಠಗಳಲ್ಲಿ ನಿಮ್ಮ ಧರ್ಮದ ಸಾಂಪ್ರದಾಯ ಆಚರಿಸದೆ ನಮ್ಮ ವೈದಿಕ ಸಾಂಪ್ರದಾಯ ಆಚರಿಸುತ್ತಾರೆ. ನಿಮ್ಮ ಮಠಾಧೀಶರನ್ನು ನೀವು ಹದ್ದುಬಸ್ತಿನಲ್ಲಿಡಬೇಕು. ಅವರ ಅಜ್ಞಾನಕ್ಕೆ ನಾವು ಹೇಗೆ ಕಾರಣ?
೧೨. ಹಲವು ದಶಕಗಳಿಂದ ನಿಮ್ಮ ಲಿಂಗಾಯತ ಧರ್ಮದ ಅಸ್ಮಿತೆಯನ್ನು ನಾಶಪಡಿಸುವಲ್ಲಿ ನೀವೇ ಪೈಪೋಟಿ ನಡೆಸುತ್ತಿದ್ದೀರಿ. ಈಗಂತೂ ಅದನ್ನೇ ಮಾಡುತ್ತಿದ್ದೀರಿ. ಆದರೆ *ನಾವು ನಮ್ಮ ಸಾಂಪ್ರದಾಯ, ಆಚರಣೆˌ ಉಡುಗೆˌ ನಮ್ಮ ಗುರುತನ್ನು ಉಳಿಸಿಕೊಳ್ಳುವಲ್ಲಿ ನಾವು ಈಗಲೂ ಯಶಸ್ವಿಯಾಗಿದ್ದೇವೆ. ನೀವು ನಮ್ಮನ್ನು ನೋಡಿ ಕೆಟ್ಟದಾಗಿ ಭಾವಿಸುತ್ತೀರಿ! ನೀವು ನಮ್ಮ ಬಗ್ಗೆ ಅಸೂಯೆಪಡುತ್ತೀರಿ! ಆದರೆ *ನಿಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ನೀವು ವಿಫಲರಾಗಿದ್ದರೆ ಅದಕ್ಕೆ ಕಾರಣ ನಿಮ್ಮ ಮೂರ್ಖತನˌ ವೈಫಲ್ಯ ಮತ್ತು ನಿರ್ಲಕ್ಷ್ಯಗಳೆ ಕಾರಣ* ನಮ್ಮ ಮೇಲೆ ಏಕೆ ಕೋಪವನ್ನು ತೋರಿಸುತ್ತೀರಿ?
೧೩. ಇತರ ಸಮುದಾಯಗಳನ್ನು ನೋಡಿ ವಿಚಲಿತರಾಗುವ ಬದಲು, ನಿಮ್ಮ ಸಂಪ್ರದಾಯಗಳಲ್ಲಿ ನಂಬಿಕೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಅವುಗಳಲ್ಲಿ ಹೇಗೆ ಹೆಮ್ಮೆ ಪಡಬೇಕು ಮತ್ತು ಎಚ್ಚರದಿಂದ ಅವುಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ನೀವು ಕಲಿಯುವುದು ಅವಶ್ಯಕ. *ನಿಮ್ಮ ಐಡೆಂಟಿಟಿ ನೀವು ಕಾಪಾಡಿಕೊಳ್ಳುವಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ *ನೀವು ಅದನ್ನು ರಕ್ಷಿಸಿಕೊಳ್ಳುವ ಬದಲಿಗೆ ನಮ್ಮ ವೈದಿಕ ಸಾಂಪ್ರದಾಯಗಳ ದಾಸರಾಗಿ ನಿಮ್ಮ ಲಿಂಗಾಯತ ಸಾಂಪ್ರದಾಯಗಳನ್ನು ನಾಶಮಾಡಲು ಹೊರಟಿದ್ದೀರಿ.*
೧೪. ನಿಮ್ಮ ಧರ್ಮದ ಗುರುತಿಗಳಾದ ವಿಭೂತಿˌ ರುದ್ರಾಕ್ಷಿ ˌ ಲಿಂಗಪೂಜೆಗಳ ಬಗ್ಗೆ ಹೆಮ್ಮೆಪಡಿ. ನಮ್ಮ ವೈದಿಕ ಸಾಂಪ್ರದಾಯಗಳನ್ನು ಮರೆತು ನಿಮ್ಮ ಸಮುದಾಯದಲ್ಲಿ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ.
೧೫. ನೀವು ಮತ್ತು ನಿಮ್ಮ ಸಮುದಾಯ ಬುದ್ಧಿವಂತರು ಎಂದು ನೀವು ಪರಿಗಣಿಸಿದರೆ, ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಮತ್ತು ಅದರ ಉಪಸ್ಥಿತಿಯನ್ನು ಪ್ರದರ್ಶಿಸಿ.*
🙏*🙏
👆ಲಿಂಗಾಯತರಿಗೆ ಇದೊಂದು ಚಾಟಿ ಏಟು ಇದನ್ನು ಒಂದು ಪಾಠವೆಂದು ನಾವು ತಿಳಿದುಕೊಳ್ಳಬೇಕು. ಅಲ್ಲದಿದ್ದಲ್ಲಿ ನಮ್ಮ ಸರ್ವನಾಶಕ್ಕೆ ನಾವೇ ಹಾಕಿಕೊಂಡ ದಾರಿ.

(ಲಿಂಗಾಯತ ಧರ್ಮ ಮಹಾಸಭಾ ವಾಟ್ಸಪ್ ಗೃಪ್ ನಿಂದ)

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.