Sai Mandir 6th Anniversary and Guru Poornima

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಗವಿಶ್ರೀ ನಗರದಲ್ಲಿರುವ ಶಿರಡಿ ಸಾಯಿ ಬಾಬಾ ದೇವಸ್ಥಾನದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇದೇ ದಿ.21ರ ರವಿವಾರ ಗುರು ಪೂರ್ಣಿಮಾದಂದು ನಡೆಯಲಿದೆ.
ಬೆಳಗ್ಗೆ 5.15 ಕ್ಕೆ ಸಾಯಿಬಾಬಾರಿಗೆ ಕಾಕಡಾರತಿ, 6 ಗಂಟೆಗೆ ಸುಪ್ರಭಾತ, 7ಗಂಟೆಗೆ ಸಾಯಿ ಬಾಬಾ ಮೂರ್ತಿಗೆ ಅಭೀಷೇಕ, 8ಗಂಟೆಗೆ ಸ್ತೋತ್ರ ಪಠಣ, 10ಗಂಟೆಗೆ ಸಾಯಿ ಬಾಬಾ ಭಕ್ತರಿಂದ ಗುರು ಪೂರ್ಣಿಮಾ ವಿಶಿಷ್ಟ, ಭಜನೆ, ಅಮ್ಮುಲ ಸಾಂಬಶಿವರಾವ್ ರಚಿಸಿದ ಅಮ್ಮುಲ ಶಿರಡಿ ಸಾಯಿ ತತ್ವಭೋಧಾಮೃತಂ ಪುಸ್ತಕಗಳಿಂದ ಸತ್ಸಂಗ ಪ್ರಸಂಗಗಳು ನಡೆಯುವವು.
ಮಧ್ಯಾಹ್ನ 12 ಗಂಟೆಗೆ ಕಾಕಡಾರತಿ, 1 ಗಂಟೆಯಿಂದ ಪ್ರಸಾದ ವಿತರಣೆ, ಸಂಜೆ 6.15ಕ್ಕೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವವು ಎಂದು ಶಿರಡಿ ಸಾಯಿ ಸೇವಾ ಟ್ರಸ್ಟ್ ನ ವ್ಯವಸ್ಥಾಪಕರಾದ ಅಮ್ಮುಲ ಸಾಂಬಶಿವರಾವ್ ಗುರುಗಳು ತಿಳಿಸಿದ್ದಾರೆ.