Breaking News

ಬಡವರ ಪಾಲಿನ ವರದಾನವಾದ ಇಂದಿರಾ ಕ್ಯಾಂಟಿನ್

Indira Canteen, a boon for the poor



ಜಾಹೀರಾತು


( ಕುಕನೂರು ಪಟ್ಟಣದಲ್ಲಿ ಲೋಕಾರ್ಪಣೆ ದಿನ ಗಣನೆ,,,,,, )

ವರದಿ : ಪಂಚಯ್ಯ ಹಿರೇಮಠ

ಕೊಪ್ಪಳ : ಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಇದೇ ಅಗಸ್ಟ್ 15ರಂದು ಲೋಕರ್ಪಣೆಗೊಳ್ಳಲಿರುವ ಇಂದಿರಾ ಕ್ಯಾಂಟಿನ್,,,,

ಭರದಿಂದ ಸಾಗಿರುವ ಕಾಮಗಾರಿ, ಇನ್ನೇನು ನೆಲ ಹಾಸು, ಸುತ್ತ ತಡೆಗೊಡೆ, ಸುಣ್ಣ, ಬಣ್ಣ, ನೀರಿನ ಸೌಕರ್ಯ ಒದಗಿಸಿದರೆ ಕಾಮಗಾರಿ ಸಂಪೂರ್ಣ,,,

ರಾಜ್ಯದ ಬಹುತೇಕ ಕಡೆಗಳಲ್ಲಿ ಇರುವ ಇಂದಿರಾ ಕ್ಯಾಂಟಿನ್ ಕಡು ಬಡವರ, ದಿನಗೂಲಿ ಕಾರ್ಮಿಕರ, ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿವೆ.

ಪ್ರಾರಂಭದಲ್ಲಿ ರಾಜ್ಯದ ಕೆಲವೊಂದಿಷ್ಟು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಇದ್ದ ಇಂದಿರಾ ಕ್ಯಾಂಟಿನ್, ಈಗ ಹಲವಾರು ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವದರಿಂದ ಬಡ ಕೂಲಿ ಕಾರ್ಮಿಕರಿಗೆ ಅನೂಕೂಲವಾಗಲಿದೆ.

ಒಬ್ಬ ಕೂಲಿ ಕಾರ್ಮಿಕ ಬೆಳಗ್ಗೆಯಿಂದ ಸಾಯಂಕಾಲದ ವರೆಗೂ ದುಡಿದು ಇನ್ನೂರು, ಮುನ್ನೂರು ರೂಪಾಯಿಗಳನ್ನು ದುಡಿದು ಮಧ್ಯಾಹ್ನ ಊಟದ ಸಮಯಕ್ಕೆ ಖಾನಾವಳಿ ಇಲ್ಲವೇ ಹೋಟೆಲಗಳಿಗೆ ಹೋಗಿ ಊಟ ಇಲ್ಲವೇ ಉಪಹಾರ ಮಾಡಲು 60 ರಿಂದ 100 ರೂಪಾಯಿಯಾದರು ವ್ಯಯಿಸಬೇಕಿತ್ತು.

ಇನ್ನೂ ದುಡಿದ ದುಡ್ಡಿನಲ್ಲಿ ನೂರಾರು ರೂಪಾಯಿಗಳನ್ನು ಈ ರೀತಿ ಊಟಕ್ಕೆ ವಿನಿಯೋಗಿಸಿದಾಗ ಆತನ ದುಡಿಮೆಯ ಅರ್ಧ ಪಾಲು ಅಲ್ಲಿಯೇ ಹೋಗುತಿತ್ತು, ಇದರಿಂದ ಬೆಸತ್ತು ಚಿಂತಿತರಾದ ಕುಕನೂರು ಪಟ್ಟಣದ ಬಡ ಜನತೆಗೆ ಇಂದಿರಾ ಕ್ಯಾಂಟಿನ್ ಆಗುತ್ತಿದ್ದು ಜನರು ನಿರಾಳರಾಗಿದ್ದರೇ.

ಈ ಹಿಂದಿನ ಸರಕಾರದ ಮಹತ್ವ ಯೋಜನೆಗಳಲ್ಲೊಂದಾದ ಈ ಇಂದಿರಾ ಕ್ಯಾಂಟಿನ್ ಗಳು ಇಂದು ಬಡವರ ಪಾಲಿನ ಕಾಮಧೇನು ಕೇಂದ್ರವಾಗಿ ಹಸಿದ ಒಡಲಿಗೆ ಕಡಿಮೆ ದರದಲ್ಲಿ ಭೋಜನ ಶಾಲೆಗಳಾಗಿವೆ.

ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಆಡಳಿತ ನಡೆಸಲಿ, ಪ್ರಜೆಗಳ ಹಾಗೂ ದೇಶದ ಹಿತ ಕಾಪಾಡುವ ಮಹತ್ವದ ಯೋಜನೆಗಳನ್ನು, ಅಭಿವೃದ್ದಿ ಯೋಜನೆಗಳನ್ನು ಜಾರಿ ಮಾಡಲಿ.

ಕೇವಲ ಚುನಾವಣೆಯ ಭರವಸೆಗಳು, ಭರವಸೆಯಾಗಿ ಉಳಿಯದೇ ಅನುಷ್ಠಾನದ ಜೊತೆಗೆ ಶಾಶ್ವತ ಯೋಜನೆಗಳಾಗಿ, ರೈತರ, ಬಡವರ, ದೀನ, ದಲಿತರ, ಮಹಿಳೆಯರ ಕೂಗಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ನೀಡಬೇಕು. ಚುನಾವಣೆಗೆ ಮುನ್ನ ನೀಡಿದ ಭರವಸೆಗಳು ಕೇವಲ 5 ವರ್ಷದ ಯೋಜನೆಗಳಾಗಿ ಉಳಿಯದೇ ಪಕ್ಷಾತೀತ ಯೋಜನೆಗಳನ್ನು ನೀಡಲಿ.

ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರು ನಿತ್ಯ ನಿರಂತರ ಯೋಜನೆಯನ್ನು ನೀಡಲಿ ಎನ್ನುವದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

About Mallikarjun

Check Also

ಕಲ್ಯಾಣ ಕರ್ನಾಟಕ ಉತ್ಸವ ದಿನ: ನಿವೇಶನ ಹಕ್ಕು ಪತ್ರ ವಿತರಣೆ

Kalyan Karnataka Festival Day: Land Title Deed Distribution ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸೆ.17ರಂದು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.