AIDSO condemns the state government’s move to cut incentives for Scheduled Caste children
ಕೊಪ್ಪಳ: ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಅವರು ಈ ಕೆಳಕಂಡತೆ ಪತ್ರಿಕಾ ಹೇಳಿಕೆ ನೀಡಿ
ರಾಜ್ಯ ಸರ್ಕಾರ ನೀಡುತ್ತಿದ್ದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕುವ ಮೂಲಕ ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳ ಬೆನ್ನಿಗೆ ಚೂರಿ ಹಾಕಿದೆ. ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ಬರಬೇಕಾದ ಪ್ರೋತ್ಸಾಹ ಧನ ಸಹ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮೊದಲ ಪ್ರಯತ್ನದಲ್ಲಿ ಎಸ್ಎಸ್ಎಲ್ ಸಿ ಪ್ರಥಮ ದರ್ಜೆಯಲ್ಲಿ ಪಾಸ್ ಆದ ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು 6ಲಕ್ಷ ಆದಾಯ ಮಿತಿಯ ಷರತ್ತು ಹೇರಿದ್ದನ್ನು ಎಐಡಿಎಸ್ಓ ಖಂಡಿಸುತ್ತದೆ. ಸರ್ಕಾರ ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ SC/ST ವಿದ್ಯಾರ್ಥಿಗಳ ನಿಧಿಯನ್ನು ಬಳಸಿ, ಇನ್ನೊಂದೆಡೆ ವಿದ್ಯಾರ್ಥಿಗಳ ವೇತನವನ್ನು ಕಿತ್ತು ಕೊಳ್ಳುತ್ತಿದೆ. ಇದು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಕುರಿತು ರಾಜ್ಯ ಸರ್ಕಾರಕ್ಕಿರುವ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಈ ಕೂಡಲೇ ಸರ್ಕಾರ ನೀಡುತ್ತಿದ್ದ ಅಲ್ಪ ಮೊತ್ತದ ಪ್ರೋತ್ಸಾಹಧನವನ್ನು ಮುಂದುವರೆಸಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ.