ಕನಕಗಿರಿಯ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜಶೇಖರ್ ಮಾತನಾಡಿ ಪಿಡಿಒಗಳು ಆರೋಗ್ಯ ಇಲಾಖೆಯೊಂದಿಗೆ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಡೆಂಗ್ಯೂ ನಿಯಂತ್ರಣ ಮಾಡಲು ಸಾಧ್ಯ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗುರುರಾಜ್ ಹಿರೇಮಠ ಮಾತನಾಡಿ ತಾಲೂಕಿನಲ್ಲಿ ಕಳೆದ ಹತ್ತು ದಿನಗಳಿಂದ ಡೆಂಗ್ಯೂ ಕಾಯಿಲೆ ದಾಖಲೆ ರೀತಿಯಲ್ಲಿ ಏರಿಕೆಗೊಳ್ಳುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ಪ್ರತಿಯೊಂದು ರೋಗಿಯಾಗಿ ಕನಿಷ್ಠ ಪಕ್ಷ 50,000 ಖರ್ಚು ಆಗುತ್ತದೆ ಆದ್ದರಿಂದ,
ಎಲ್ಲರೂ ಡಿಂಗು ನಿಯಂತ್ರಣದಲ್ಲಿ ಭಾಗವಹಿಸಬೇಕು ನಮ್ಮ ಮನೆಯಲ್ಲಿರುವ ಕಿಟಕಿಗಳಿಗೆ ಮೆಸ್ಸುಗಳ ಹಾಕಿಸಿಕೊಳ್ಳಬೇಕು, ಸಣ್ಣ ಮಕ್ಕಳಿಗೆ ಮೈತುಂಬ ಬಟ್ಟೆಗಳನ್ನು ಹಾಕಬೇಕು, ಮನೆಯ ನೀರಿನ ಸಲಕರಣೆಗಳಲ್ಲಿ ಕಂಡುಬರುವ ಲಾರ್ವಗಳನ್ನ ಕೂಡಲೇ ಚೆಲ್ಲಿ ಲಾರ್ವ ನಾಶ ಮಾಡಬೇಕು ಮನೆ ಹತ್ತಿರ ಬಂದು ಆರೋಗ್ಯ ಕಾರ್ಯಕರ್ತರ ಹೇಳುವ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು..