Breaking News

ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. -ಶ್ರೀ ಮತಿ ಡಿ. ನಾಗಲಕ್ಷ್ಮಿ

ASHA workers should be treated as government employees. – Mr. Mati D. Nagalakshmi

ಜಾಹೀರಾತು



ಹುಲಿಗಿ:ಕೊಪ್ಪಳ ತಾಲ್ಲೂಕ ಮಟ್ಟದ ಆಶಾ ಕಾರ್ಯಕರ್ತೆಯರ  ಪ್ರಥಮ ಸಮ್ಮೇಳನ ಯಸಶ್ವಿಯಾಗಿ ಜರುಗಿತು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ  ಕಾರ್ಯಕರ್ತೆಯರ ಸಂಘ (ರಿ ) (AIUTUC)
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಿ.ನಾಗಲಕ್ಷ್ಮಿ ಸಮ್ಮೇಳನ ಉದ್ದೇಶಿಸಿ ಮಾತನಾಡಿ
ಆಶಾ ಕಾರ್ಯಕರ್ತೆಯರು ಇಂದು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ತಾಯಿ ಮಕ್ಕಳ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು, ಆಶಾಗಳಿಂದಲೇ ಎನ್ನುವುದು ಎಲ್ಲರೂ ಒಪ್ಪಲೇಬೇಕು. ಕೋವಿಡ್ ಸಂದರ್ಭದಲ್ಲಿ ಆಶಾಗಳು ತಮ್ಮ ಜವಾಬ್ದಾರಿ ನಿಭಾಯಿಸಿದ ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹಾಗಾಗಿಯೇ ಅವರಿಗೆ ಆರೋಗ್ಯದ ಜಾಗತಿಕ ನಾಯಕರು ಎಂಬ ಬಿರುದು ಕೂಡ ಲಭಿಸಿದೆ. ಆದರೆ ಏನೇ ಬಿರುದು, ಸನ್ಮಾನ ಲಭಿಸಿದರೂ, ಅವರ ಜೀವನ ನಿರೀಕ್ಷಿತ ಮಟ್ಟದಲ್ಲಿ  ಸುಧಾರಣೆಯಾಗಿಲ್ಲ. ಅತ್ಯಂತ ಕನಿಷ್ಟ ವೇತನಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ.  ಪ್ರೋತ್ಸಾಹ ಧನದ ಹೆಸರಲ್ಲಿ ಅವರ ಶೋಷಣೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. 10-15 ವರ್ಷಗಳಿಂದ ದುಡಿಯುತ್ತಿದ್ದರೂ, ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ತಯಾರಿಲ್ಲ.ಕನಿಷ್ಟ ಪಕ್ಷ ಕಾರ್ಮಿಕರೆಂದೂ ಪರಿಗಣಿಸಲು ಸಹ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹಾಗಾಗಿ ಅವರು ಜೀವನ ಪೂರ್ತಿ ಅಭದ್ರತೆಯಲ್ಲಿ ಕಳೆಯುವಂತಾಗಿದೆ. ಇದು ಕೇಂದ್ರ ರಾಜ್ಯ ಸರ್ಕಾರಗಳ ಕಡು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದರೆ ತಪ್ಪಾಗಲಾರದು.


ದೇಶವನ್ನಾಳಿದ ಎಲ್ಲಾ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟು ದೊಡ್ಡ ದೊಡ್ಡ ಉದ್ಯಮ ಪತಿಗಳ ಸೇವೆ ಮಾಡುತ್ತಾ ಬಂದಿವೆ. ಹೋರಾಟದಿಂದ ಗಳಿಸಿಕೊಂಡ ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಾ, ಕಾರ್ಮಿಕರ ಹಾಗೂ ದುಡಿಯುವ ಜನರ ಬದುಕನ್ನು ಮೂರಾಬಟ್ಟೆ ಮಾಡಿವೆ. 1991ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳು ಗುತ್ತಿಗೆ ಹೊರಗುತ್ತಿಗೆ ಪದ್ಧತಿಯನ್ನು ಕಾನೂನುನಾತ್ಮಕಗೊಳಿಸಿತು. ಇದೇ ನೀತಿಗಳನ್ನು ಬಿಜೆಪಿ ಸರ್ಕಾರ ಮುಂದುವರೆಸಿ, ಮತ್ತಷ್ಟು ವೇಗವಾಗಿ ಜಾರಿಗೆ ತರುತ್ತಿದೆ .’ಕಾರ್ಯಕರ್ತೆಯರು’ ಎಂದು ನಾಮಕರಣ ಮಾಡುತ್ತಾ, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರನ್ನು  ನ್ಯಾಯ ಬದ್ಧ ಕಾರ್ಮಿಕ ಹಕ್ಕುಗಳಿಂದ ಎಲ್ಲಾ ಸರ್ಕಾರಗಳು ವಂಚಿತರನ್ನಾಗಿ ಮಾಡಿವೆ.
ಮತ್ತೊಂದೆಡೆ ಆರೋಗ್ಯ ಕ್ಷೇತ್ರಕ್ಕೆ ಅವಶ್ಯಕ ಬಜೆಟ್ ನೀಡದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುಸಿಯುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಗಳು ನೀತಿಗಳನ್ನು ಜಾರಿಗೊಳಿಸಿವೆ. ಕಾರ್ಪೊರೇಟ್ ಕಪಿಮುಷ್ಠಿಗೆ ಒಳಪಡಿಸಿ, ಆರೋಗ್ಯ ಕ್ಷೇತ್ರವನ್ನೂ ವ್ಯಾಪಾರದ ಸರಕನ್ನಾಗಿ ಮಾಡಿವೆ. ಹಾಗಾಗಿ ಆರೋಗ್ಯ ಸೌಲಭ್ಯ ಈಗ ಅತ್ಯಂತ ದುಬಾರಿಯಾಗಿ ಮಾರ್ಪಟ್ಟಿದೆ.
ಇಂತಹ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಇಡೀ ಕಾರ್ಮಿಕ ವರ್ಗ ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಕಟ್ಟುತ್ತಾ, ಬಂಡವಾಳಶಾಹಿ ಪರವಾದ ನೀತಿಗಳ ವಿರುದ್ಧವೂ ಧ್ವನಿಯೆತ್ತಬೇಕಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉಳಿಸಲು ಹೆಚ್ಚಿನ ಬಜೆಟ್ ನೀಡುವಂತೆ ಒತ್ತಾಯಿಸುತ್ತಲೇ, ಆರೋಗ್ಯ ಕ್ಷೇತ್ರದ ವ್ಯಾಪಾರೀಕಣವನ್ನೂ ವಿರೋಧಿಸಬೇಕಿದೆ.
ಇದರ ಜೊತೆಗೆ ಜಾತಿ ಧರ್ಮದ ಹೆಸರಲ್ಲಿ ಜನರನ್ನು ಒಡೆದಾಳುವ ಪಿತೂರಿಗಳನ್ನು ಸೋಲಿಸುತ್ತಾ, ಕಾರ್ಮಿಕರು, ಆಶಾ ಕಾರ್ಯಕರ್ತೆಯರ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕಿದೆ.
ಈಗಾಗಲೇ ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಅಶೋ ಕಾರ್ಯಕ್ರಮ ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಸಂಘವು ಯಶಸ್ವಿಯಾಗಿದೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಕೊಪ್ಪಳ, ಯಲಬುರ್ಗಾ, ಗಂಗಾವತಿ ತಾಲೂಕ ಅಧ್ಯಕ್ಷರುಗಳಾದ  ಜ್ಯೋತಿ ಲಕ್ಷ್ಮಿ, ವಿಜಯಲಕ್ಷ್ಮಿ, ಸುನೀತಾ, ಶೋಭಾ, ಮುಖಂಡರಾದ  ಶಂಕ್ರಮ್ಮ, ಶಿವಮ್ಮ,  ಅನ್ನಪೂರ್ಣ, ನಿರ್ಮಲ,  ರತ್ನಮ್ಮ ಉಪಸ್ಥಿತರಿದ್ದರು. ಸಮ್ಮೇಳನ ಮುಖಾಂತರ ಹೊಸ ಕಮಿಟಿಯನ್ನು ಕೂಡ  ರಚಿಸಲಾಯಿತು.
ಗೌರವಾಧ್ಯಕ್ಷರು ಗಿರಿಜಬಾಯಿ  ಹುಲಿಗಿ  ಅಧ್ಯಕ್ಷರು ಶ್ರೀಮತಿ ಸುನಿತಾ ಆಚಾರ್ ಉಪಾಧ್ಯಕ್ಷರು ಶ್ರೀಮತಿ ಶಕುಂತಲಾ, ಶ್ರೀಮತಿ ಶನಮೀಮ ಬೇಗಂ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಹುಲಿಗೆಮ್ಮ, ಶ್ರೀಮತಿ ಲಲಿತಾ, ಶ್ರೀಮತಿ ಬಸ್ಸಮ್ಮ, ಶ್ರೀಮತಿ ದೇವಕ್ಕ, ಶ್ರೀಮತಿ ಕಲಾವತಿ, ಶ್ರೀಮತಿ ಹುಲಿಗೆಮ್ಮ, ಶ್ರೀಮತಿ ಮರಿಯಮ್ಮ, ರಜಿಯಾಬೇಗಂ, ಶಾರದ ಕಾರ್ಯದಶಿ೯ಗಳು ರತ್ನಮ್ಮ ಬಹದ್ದೂರ್ ಬಂಡಿ ಜಂಟಿ ಕಾರ್ಯದರ್ಶಿಗಳು ನಿರ್ಮಲ ಇರಕಲ್ ಗಡ ಕಾರ್ಯದರ್ಶಿ ಮಂಡಳಿ ಸದಸ್ಯರು ಶಬನಾಜ್ ಬಿ, ಶಾರದಾ, ಪುಷ್ಪವತಿ , ಲಕ್ಷ್ಮಿ ಅಳವಂಡಿ, ಅನ್ನಪೂರ್ಣ,
ಈ ಸಮ್ಮೇಳನದ ಬೇಡಿಕೆಗಳು
* ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು.
* ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು.
* ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಅಗತ್ಯವಿರುವಷ್ಟು ಬಜೆಟ್ ನ್ನು ಒದಗಿಸಬೇಕು

About Mallikarjun

Check Also

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮಕ್ಕೆಕೊಪ್ಪಳದಿಂದ 100 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ

More than 100 people from Koppal will participate in the closing ceremony of the founder …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.