Breaking News

ತಾಲೂಕಿನ ವಿವಿಧಡೆ ಜಲಾಶಯದ ನಾಲೆಗಳ ಪರಿಶೀಲನೆ ನಡೆಸಿದ ಶಾಸಕ ಎಮ್ ಆರ್ ಮಂಜುನಾಥ್,

IMG 20240713 WA0244 300x134


ವರದಿ : ಬಂಗಾರಪ್ಪ .ಸಿ .
ಹನೂರು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮನ ಗುಡ್ಡೆ ಬಳಿಯಿರುವ ನಾಲೆಗಳು ಸೇರಿದಂತೆ ಅಜಿಪುರ ಬಳಿಯಲ್ಲಿನ ಉಡುತೊರೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .
ನಂತರ ಮಾತನಾಡಿದ ಅವರು
ತಾಲೂಕಿನಲ್ಲಿರುವ ಜಲಾಶಯದ ಕಾಲುವೆಗಳು ರಾಡಿ ಹಾಗೂ ಗಿಡ ಗಂಟೆಗಳು ಬೆಳಗು ನಿಂತಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳುವ ನಾಲೆಗಳನ್ನು ಸ್ವಚ್ಛಗೊಳಿಸಲು ಕ್ರಿಯಾಯೋಜನೆ ತಯಾರಿಸಿ ತಕ್ಷಣ ದುರಸ್ತಿಯಾಗಿರುವ ನಾಲೆಗಳನ್ನು ಸರಿಪಡಿಸಿ ರೈತರ ಜಮೀನುಗಳಿಗೆ ನೀರನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಜೊತೆಗೆ ನಾಳೆಗಳಲ್ಲಿ ಬರುವ ರೈತರ ಜಮೀನಿಗೆ ತೆರಳುವ ಕಿರು ಸೇತುವೆಗಳು ಸಹ ದುರಸ್ತಿಗೆ ಒಳಗಾಗಿ ರಾಡಿ ಮತ್ತು ಮಣ್ಣು ಮುಚ್ಚಿದ್ದು ಕೂಡಲೇ ಅದನ್ನು ಸರಿಪಡಿಸಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಡಿ ಮತ್ತು ಮಣ್ಣನ್ನು ತೆಗೆದು ಕಿತ್ತು ಬಂದಿರುವ ನಾಲೆಗಳನ್ನು ದುರಸ್ತಿಪಡಿಸಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ

ಜಾಹೀರಾತು

ವೀಕ್ಷಣೆ ; ರಾಮನ ಗುಡ್ಡೆ ಹಾಗೂ ಉಡುತೊರೆ ಜಲಾಶಯದ ರೈತರ ಜಮೀನಿಗೆ ತೆರಳುವ ನಾಲೆಗಳನ್ನು ಪರಿಶೀಲಿಸಲು ಬಸಪ್ಪನ ದೊಡ್ಡಿ ಅಜ್ಜಿಪುರ ಗಂಗನದೊಡ್ಡಿ ಕೆ.ಗುಂಡಾಪುರ ಮಂಚಾಪುರ ಕಿರೇಪತಿ ಹಳ್ಳ, ಯಾರಂಬಾಡಿ, ಸೇರಿದಂತೆ ರಾಮಪುರ ಇನ್ನಿತರ ಗ್ರಾಮಗಳಲ್ಲಿ ಶಾಸಕರು ಅಧಿಕಾರಿಗಳ ಜೊತೆ ತೆರಳಿ ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು..
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಏ.ಇ.ಇ ನಿರಂಜನ್ ಏ.ಇ ಅಭಿಲಾಷ್ ಹಾಗೂ ಲ್ಯಾಂಡರ್ಮಿ ಎ ಇ.ಇ ಚಿಕ್ಕವೀರಯ್ಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚಿನ್ನಣ್ಣ ಹಾಗೂ ಮುಖಂಡರುಗಳಾದ ಚಿಂಚಳ್ಳಿ ಗುರುಮಲ್ಲಪ್ಪ ಚಿನ್ನವೆಂಕಟಾ,ಮಣಗಳ್ಳಿ ಶಿವಪ್ಪ ಶಾಗ್ಯ ಬಾಬಣ್ಣ,ಉದ್ದನೂರು ಗ್ರಾಮದ ಯುವ ನಾಯಕ ಗಿರೀಶ್,ಎಸ್.ಆರ್ ಮಹಾದೇವ್,ಬಸಪ್ಪನ ದೊಡ್ಡಿ ರಫೀಕ್, ಷಣ್ಮುಗಿ,ರವಿ,ಬಾಬು, ಶ್ರೀರಂಗ,ಚನ್ನಲಿಂಗನಹಳ್ಳಿ ವೆಂಕಟೇಶ್, ಇನ್ನಿತರರು ಹಾಜರಿದ್ದರು.

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.