Third Annual Padayatra to Muntralaya by Arya Vaishya Samaj and Nava Vrindavan Bhajan Board.
ಗಂಗಾವತಿ: ನಗರದ ಹೀರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜ ಮತ್ತು ನವ ವೃಂದಾವನ ಭಜನಾ ಮಂಡಳಿ ನೇತೃತ್ವದಲ್ಲಿ ರವಿವಾರದಂದು ಮೂರನೇ ವರ್ಷದ ಮಂತ್ರಾಲಯ ಪಾದಯಾತ್ರೆ ಶ್ರದ್ಧಾ ಭಕ್ತಿಯಿಂದ ಜರಗಿತು.
ಈ ಸಂದರ್ಭದಲ್ಲಿ ರೈತ ಶರಣಪ್ಪ ಎಂಬ ವ್ಯಕ್ತಿ ೨೫ ಕೆಜಿ ಅಕ್ಕಿಯನ್ನು ತೊಂಡಿಹಾಳ ಗ್ರಾಮದಿಂದ ತಲೆ ಮೇಲೆ ಹೊತ್ತು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಪಾದಯಾತ್ರೆಯ ಮೂಲಕ ಮಂತ್ರಾಲಯಕ್ಕೆ ಮುಂದಾಗಿರುವುದು ಆ ರೈತನಲ್ಲಿರುವ ರಾಯರ ಭಕ್ತಿ ವಿಶೇಷವಾಗಿ ಕಂಡುಬAದಿತು.
ಈ ಸಂದರ್ಭದಲ್ಲಿ ಬೆಳಿಗ್ಗೆ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ರಾಯರ ಅನುಗ್ರಹದಿಂದ ಮೂರನೇ ವರ್ಷದ ಮಂತ್ರಾಲಯದ ಪಾದಯಾತ್ರೆ ಸಮಾಜದ ಸರ್ವ ಭಕ್ತರ ಸಹಕಾರದ ಮೇರೆಗೆ ಆಯೋಜಿಸಲಾಗಿದ್ದು ಭಕ್ತಾದಿಗಳು ಏಕಾಗ್ರತೆ ರಾಯರ ಸ್ಮರಣೆ ತಮ್ಮ ಇಷ್ಟಾರ್ಥ ಸಂಕಲ್ಪಕ್ಕೆ ಮುಂದಾಗಬೇಕೆAದು ಕರೆ ನೀಡಿದರು. ಹಾಗೆ ರಾಜ್ಯದಲ್ಲಿ ಮಳೆ, ಬೆಳೆ, ಸುಖ, ಶಾಂತಿ, ಸಮೃದ್ಧಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಲಾಗುವುದು ಎಂದು ಹೇಳಿದರು.
ಗುರು ಭೀಮ್ ಭಟ್ಜ ಜೋಶಿ ಮಾತನಾಡಿ ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಸನ್ನಿಧಿಗೆ ಪಾದಯಾತ್ರೆ ನಡೆಸುವುದರ ಮೂಲಕ ಸಮಾಜ ಬಾಂಧವರಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸಲಾಗುತ್ತದೆ. ತೊಂಡಿಹಾಳ ಗ್ರಾಮದ ರೈತ ಶರಣಪ್ಪ ೨೫ ಕೆಜಿ ಅಕ್ಕಿಯನ್ನು ತಲೆಯ ಮೇಲೆ ಹೊತ್ತು ರಾಯರಿಗೆ ಸಮರ್ಪಿಸಿರುವುದು ಅವರಲ್ಲಿನ ಭಕ್ತಿ ಕಾಣಬಹುದಾಗಿದೆ ಎಂದು ತಿಳಿಸಿದರು. ಜೊತೆಗೆ ಮೊದಲನೇ ದಿನ ಎಂ. ಸೂಗೂರುನಲ್ಲಿ ವಿಶ್ರಾಂತಿ, ಎರಡನೇ ದಿನ ಸಿರುಗುಪ್ಪದಲ್ಲಿ ವಿಶ್ರಾಂತಿ. ಮೂರನೇ ದಿನ ಬೀರಹಳ್ಳಿನಲ್ಲಿ ವಿಶ್ರಾಂತಿ, ನಾಲ್ಕನೇ ದಿನ ಕೋಶಿಗಿಯಲ್ಲಿ ವಿಶ್ರಾಂತಿ, ಐದನೇ ದಿನ ಶ್ರೀ ರಾಯರ ಸನ್ನಿಧಿಗೆ ತೆರಳಿ ಭಕ್ತಿಯನ್ನು ಸಮರ್ಪಿಸೋಣ ಎಂದು ಹೇಳಿದರು. ಬಳಿಕ ಶ್ರೀ ರಾಯರ ಮಂತ್ರಘೋಷ ಹಾಗೂ ಭಜನೆ ಮೂಲಕ ೧೫೦ ಕ್ಕೂ ಅಧಿಕ ಜನ ಇದ್ದರೂ. ಮುಂದೆ ಮಂತ್ರಾಲಯ ತಲುಪುವಷ್ಟರಲ್ಲಿ ಸುಮಾರು ೪೦೦ ಜನ ಸೇರುವ ಸಂಭವ ಇದೆ ಎಂದು ಹೇಳಿ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ, ದಮ್ಮೂರು ರಾಜಕುಮಾರ್, ಆನೆಗುಂದಿ ಗೋಪಾಲ ಶ್ರೇಷ್ಠಿ, ಜಿ.ಆರ್.ಎಸ್ ಸತ್ಯನಾರಾಯಣ, ಹಣವಾಳ ಚಂದ್ರಶೇಖರ ಶ್ರೇಷ್ಠಿ, ಲಿಂಗಪ್ಪ ಜನಾದ್ರಿ, ಪ್ರಹ್ಲಾದ ಬೆನ್ನೂರ್, ದಮ್ಮೂರು ಸುರೇಶ, ದರೋಜಿ ವೆಂಕಟೇಶ, ದರೋಜಿ ಮಲ್ಲಿಕಾರ್ಜುನ, ಈಶ್ವರ ಶ್ರೇಷ್ಠಿ, ಜಗದೀಶ ಶ್ರೇಷ್ಠಿ, ಟಿ. ಗಂಗಾಧರ, ಮುರಳಿ ಕಂಪ್ಲಿ ಸೇರಿದಂತೆ ನವ ವೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ದಮ್ಮೂರು ರುಕ್ಮಿಣಿ ಮತ್ತು ವಾಸವಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಮಂಜುಳ ದಮ್ಮೂರು, ಮಹಿಳಾ ಮಂಡಳಿಯ ಸದಸ್ಯರು ಮತ್ತು ಗಂಗಾವತಿ ತಾಲೂಕಿನ ಸುತ್ತಾಮುತ್ತಲಿನ ಸಮಾಜ ಭಾಂದವರು ಭಾಗವಹಿಸಿದ್ದರು.