Special therapy camp program for children at Tibha School
ಗಂಗಾಮತಿ,ಜುಲೈ8: ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪ್ರತಿಭಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕಿಲ್ಲಾ ಏರಿಯಾ ಗಂಗಾವತಿ ಇವರ ಸಹಯೋಗದೊಂದಿಗೆ
ಉಚಿತ ಆರೋಗ್ಯ ತಪಾಸಣಾ ಮತ್ತು ಉಚಿತ ಔಷಧಿ ವಿತರಣಾ ಶಿಬಿರವನ್ನು ದಿನಾಂಕ 07-07-2024 ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ನಗರದ ಪ್ರತಿಭಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕಿಲ್ಲಾ ಏರಿಯಾ, 7ನೇ ಕ್ರಾಸ್, ಗಂಗಾವತಿ ನಗರದಲ್ಲಿ ನವಜಾತ ಶಿಶುಗಳ ಹಾಗೂ ಚಿಕ್ಕಮಕ್ಕಳ ಸುಪ್ರಸಿದ್ದ ತಜ್ಞ ವೈದ್ಯರಾದ
ಡಾ॥ಅರಳಿ ಅಮರೇಶ ವೈದ್ಯರು ಮತ್ತು ಬೆಂಗಳೂರಿನ “ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ”ಯಲ್ಲಿ ಒಂದು ವರ್ಷದ PICU ಫೆಲೋಷಿಪ್ (ಮಕ್ಕಳ ತೀವ್ರ ನಿಘಾ ಘಟಕ) ಪೂರೈಸಿದ ನಗರದ ಪ್ರಪ್ರಥಮ ಏಕೈಕ ನವಜಾತ ಶಿಶುಗಳ ಹಾಗೂ ಚಿಕ್ಕಮಕ್ಕಳ ತಜ್ಞ ವೈದ್ಯರಾಗಿರುತ್ತಾರೆ. ಇವರು ನವಜಾತ ಶಿಶುಗಳ ಹಾಗೂ ಚಿಕ್ಕಮಕ್ಕಳ ಎಲ್ಲಾ ರೀತಿಯ ಸಮಸ್ಯೆಗಳಿಗೆ ಯೋಗ್ಯ ಚಿಕಿತ್ಸೆಯನ್ನು ನೀಡಿದರು. ಮಕ್ಕಳ ಲಾಲನೆ ಪಾಲನೆ ಪೋಷಣೆ ಯಾವ ರೀತಿ ಮಾಡಬೇಕು ಮಕ್ಕಳನ್ನು ಯಾವ ರೀತಿ ವಹಿಸಬೇಕು ಎಂಬ ಮಾಹಿತಿಯನ್ನು ಸಹ ಪಾಲಕರಿಗೆ ಡಾ. ಅಮರೇಶ ಮಾಹಿತಿ ನೀಡಿದರು.ಶಿಬಿರದಲ್ಲಿ ಎರಡು ನೂರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಶ್ರೀಮತಿ ಡಾ|| ಉಷಾ ಅರಳಿ ಅಮರೇಶ ಚರ್ಮರೋಗ, ಕಾಸ್ಕೆಟಾಲಾಜಿಸ್ಟ್ ಮತ್ತು ಕೂದಲು ಕಸಿ ಶಸ್ತ್ರಚಿಕಿತ್ಸಕರು, ಇವರು ಬೆಂಗಳೂರಿನ ಸುಪ್ರಸಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಫೆಲೋಶಿಪ್ ಪೂರೈಸಿದ ಗಂಗಾವತಿ ನಗರದ ಏಕೈಕ ಚರ್ಮರೋಗ, ಕಾಸ್ಟೆಟಾಲಾಜಿಸ್ಟ್ ಮತ್ತು ಕೂದಲು ಕಸಿ ಶಸ್ತ್ರಚಿಕತ್ಸಕರು ಇವರು ಮಕ್ಕಳು, ಮಹಿಳಾ ಹಾಗೂ ಪುರುಷರಿಗೆ ಎಲ್ಲಾ ರೀತಿಯ ಚರ್ಮ ರೋಗ ಹಾಗೂ ಕೂದಲು ಸಮಸ್ಯೆಗಳಿಗೆ ಯೋಗ್ಯ ಚಿಕಿತ್ಸೆ ಮಾಹಿತಿ ನೀಡಿದರು. ಸಿದ್ದಿಕೇರಿ, ಈದ್ದಾಕಾಲೋನಿ, ವಕೀಲ ಗೇಟ್, ಕಿಲ್ಲಾ ಏರಿಯಾ, ಬಸವಣ್ಣ ಸರ್ಕಲ್, ಕಟಗರ ಓಣಿ, ಬಳಿಗೇರ ಓಣಿ, ಮಹಾವೀರ ಸರ್ಕಲ್, ಜೈನ್ ಕಾಲೋನಿ, ವಾಲ್ಮೀಕಿ ಸರ್ಕಲ್‌ನ ಸಮಸ್ತನಾಗರೀಕರು ಹಾಗೂ ಶಿಶು ಪಾಲಕರು ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಂಡರು.
ಮುಖ್ಯ ಅತಿಥಿಗಳು ಚಂದ್ರಶೇಖರ ಶೆಟ್ಟಿ ತಾಲೂಕ ಅಧ್ಯಕ್ಷರು, ಕ.ರ.ವೇ.
ಶ್ರೀಮತಿ ಪುಟ್ಟಮ್ಮ ಹನುಮಂತಪ್ಪ ಗಿಡ್ಡಿ ಅಧ್ಯಕ್ಷರು, ಪ್ರ.ಪ್ರಾ. ಹಾಗೂ ಪ್ರೌ.ಜಾ, ಅರುಣ ಹೆಚ್. ಗಿಡ್ಡಿ ಮುಖ್ಯೋಪಾಧ್ಯಾಯರು, ಪ್ರ.ಪ್ರಾ. ಹಾಗೂ ಪ್ರೌ, ಶಾಲೆ, ಅಬ್ದುಲ್ ಬದ್ದೂಸ್ ಅಧ್ಯಕ್ಷರು, ಜಮಾಜ್-ವಿ-ಸ್ವಾಮಿ ಹಿಂದ್, ರಾಜಾ ಎಚ್ ಆರ್ ಎಸ್ ಅಧ್ಯಕ್ಷರು,
ವಿನೋದ್ ಅಮರಾವತಿ ಅಧ್ಯಕ್ಷರು, ಕ.ರ.ವೇ ನಗರ ಘಟಕ, ಶರಬೂಜಿ ರಾವ್ ಗಾಯಕವಾಡ, ಶ್ರೀಮತಿ ಈರಮ್ಮ ಸಿದ್ದರಾಮಪ್ಪ, ಮಹ್ಮದ ಉಸ್ಕಾನ್ ಅಚ್ಚಗತ್ತಿ, ಅಬ್ದುಲ್ ಜಬ್ಬಾರ್ ಬಿಚ್ಚಗತ್ತಿ, ಮಹೇಶ ಸ್ವಾಮಿಗಳು, ಮತ್ತು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸುಧಾರಕ ಸಮಿತಿಯ, ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.