Breaking News

ಎಡವಿದಾಕ್ಷಣ ಅಕ್ಕಪಕ್ಕದಲ್ಲಿ ಇರೋರು ದೂರವಾಗಿದ್ದರು ತಾನು ನಂಬಿದ ಪ್ಯಾನ್ಸ್ ಕೈ ಬೀಡಲಿಲ್ಲ..

Screenshot 2024 06 28 18 12 52 55 A23b203fd3aafc6dcb84e438dda678b6 276x300

ಹನುಮೇಶ್ ಗುಂಡೂರು ವಕೀಲರು

ಜಾಹೀರಾತು

ಎಡವಿದಾಕ್ಷಣ ಅಕ್ಕಪಕ್ಕದಲ್ಲಿ ಇರೋರು ದೂರವಾಗಿದ್ದರು ತಾನು ನಂಬಿದ ಪ್ಯಾನ್ಸ್ ಕೈ ಬೀಡಲಿಲ್ಲ..
ದರ್ಶನ್ ತುಳಿದು ಬೆಳೆಯಲಿಲ್ಲ ಜೊತೆಯಲ್ಲಿ ಸೇರಿಸಿಕೊಂಡು ಬೆಳೆಸಿ ಬೆಳೆದ ನಟ.
ಮನುಷ್ಯನ ಜೀವನದಲ್ಲಿ ತಪ್ಪು ಆಗೋದ ಸಹಜ ಅಂಗುಲಿಮಾಲನೆ ತಪ್ಪು ಮಾಡಿ ಬುದ್ದನ ಬೋಧನೆಯಿಂದ ಶುದ್ಧ ನಾ ನಿದರ್ಶನವಾಗಿ ನಿಂತಿವೆ.
ಬಸವಣ್ಣವರ ಸಮತೆಯ ತತ್ವದಿಂದ ಸುಳ್ಳೆ ಸಂಕವ್ವನೆ ಶರಣೆಯಾದ ಸಾಕ್ಷಿ ನಮ್ಮ ಮುಂದೆ ಶೋಷಿತ ಅಶಕ್ತ ನಿರಾಶ್ರಿತರ ಅಭಿವೃದ್ಧಿ ಗೆ ದುಡಿದ ಎನ್ನುವ ಕಾರಣಕ್ಕಾಗಿ ಅದೇ ಜನಗಳ ಮದ್ಯೆ ಏಸುವಿನ ಜೀವಂತ ಶಿಲುಬೆಗೆ
ಏರಿಸಿದ ಪ್ರಸಂಗ ನಡೆಯಿತು.
ದರ್ಶನ್ ಅವರು ಇಡೀ ಕನ್ನಡ ಚಿತ್ರರಂಗದಲ್ಲಿ ಯಾವುದೇ ರೀತಿಯ ಜಾತಿ ಜಾಡು ನಂಟು ಇಲ್ಲದೇ ಹಿಂದೂ, ಮುಸ್ಲಿಂ,ಕ್ರೈಸ್ತ, ಜೈನ್ ಮತ್ತು ತಳಸಮಯದಾಯಗಳ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ ಏಕೈಕ ಕನ್ನಡ ನಟ ಎಂದರೆ ದರ್ಶನ್.
ನಾನು ಕನ್ನಡ ಚಿತ್ರರಂಗದಲ್ಲಿ ಮಾತ್ರ ನಟಿಸುವೆ
ಬೇರೆ ಭಾಷೆಯ ಸಿನಿಮಾದಲ್ಲಿ ನಟನೆ ಮಾಡೋದಿಲ್ಲ ಘೋಷಿಸಿಕೊಂಡ ಕನ್ನಡದ ಏಕೈಕ ನಟ.
ಎಲ್ಲರ ತರಹ ಪರಿಭಾಷೆಯಲ್ಲಿ ನಟನೆ ಮಾಡಲಿಲ್ಲ.
ನಾನು ಬಹುತೇಕ ದರ್ಶನ ಸಿನಿಮಾಗಳನ್ನು ನೋಡುತ್ತಲೇ ಬಂದಿದಿನಿ ಇಡೀ ತನ್ನ ಸಿನಿಮಾದಲ್ಲಿ ಕನ್ನಡ ಭಾಷೆ ಬಗ್ಗೆ ಹೆಚ್ಚು ಮಾತನಾಡುತ್ತಾ ತಾಯಿ ಭಾಷೆ ಮುಖ್ಯ ಎನ್ನುತ್ತಲೇ ರೈತರ, ಕಾರ್ಮಿಕರ,ಆಟೋದರ,ಕೂಲಿಕಾರರ, ಹಿಂದೂ ಮುಸ್ಲಿಂ ಭಾವೈಕ್ಯತೆ ಸೌಹಾರ್ದತೆ ಬಗ್ಗೆ ಹೆಚ್ಚು ಹೆಚ್ಚು ಇವರ ಸಿನಿಮಾದಲ್ಲಿ ನಾವು ಕಾಣಬಹುದು.
ಸ್ಥಳಿಯ ಉದ್ಯಮ ಸ್ಥಳಿಯ ದುಡಿಮೆ ಬಗ್ಗೆ ಹೆಚ್ಚು ಇವರ ಸಿನಿಮಾದಲ್ಲಿ ಕಾಣಬಹುದು.
ಲಾಂಗ್ ಮಚ್ಚು ಅಲ್ಲಲ್ಲಿ ಜಳಪಿಸುವ ಕಮರ್ಷಿಯಲ್ ಸಿನಿಮಾಗಳ ಇವೆ ಆದರೆ ಅವರ ಸಂಭಾಷಣೆಯಲ್ಲಿ ಆಟೋ ಡ್ರೈವರ್ ,ಕೂಲಿ,ರೈತ, ಶೋಷಿತ ಜನರ ಸಂಭಾಷಣೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತವೆ.
ಇಡೀ ಕನ್ನಡ ಚಿತ್ರರಂಗದ ನಟರು ಇವತ್ತು ತಮ್ಮ ತಮ್ಮ ಜಾತಿ ನಂಟಿನ್ನ ಅಂಟಿಕೊಂಡಿದ್ದಾರೆ ಅಥವಾ ಅವರದೇ ಜಾತಿವರು ನಟ ನಮ್ಮ ಜಾತಿಯವನು ಎನ್ನುವ ಸೊಂಕು ಅಂಟಿಸಿದ್ದಾರೆ ಆದೇ ದರ್ಶನ ಅಷ್ಟೊಂದು ದೊಡ್ಡ ಪ್ರಮಾಣದ ಹೀರೋ ಆಗಿದ್ದರು ಜಾತ್ಯಾತೀತ ನಟನಾಗಿ ಮಿಂಚುತ್ತಲೇ ಇದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಯುವ ನಟರಿಗೆ ಬಹುಶ ಕನ್ನಡ ಚಿತ್ರರಂಗದಲ್ಲಿ ಯಾವೊಬ್ಬ ನಟ ಈ ಪರಿ ಬೆಳೆಸುವ ಗುಣಲಕ್ಷಣಗಳನ್ನು ಹೊಂದಿಲ್ಲ ಸಾಕಷ್ಟು ಯುವನಟರಿಗೆ ಯುವ ನಟಿಯರಿಗೆ ಸ್ವಂತ ಬ್ಯಾನರ್ ದಲ್ಲಿ ಅವಕಾಶ ನೀಡುತ್ತಲೇ ತನ್ನ ಸಿನಿಮಾದಲ್ಲಿ ಅವಕಾಶ ಮಾಡಿಕೊಡುತ್ತ ಬೆಳೆಸುತ್ತಾ ಬೆಳೆದ ದೈತ್ಯ ಕ್ಯಾಪ್ಟನ್ ಆಗಿ ಬೆಳೆದಿದ್ದು ಒಂದು ಮಹತ್ವದ ಸಾಧನೆ.
ಸಿನಿಮಾದಲ್ಲಿ ಅವಕಾಶ ಇಲ್ಲದೇ ಇರೋ ಆದೆಷ್ಟು ಪೋಷಕ ನಟರನ್ನ ತನ್ನ ಸಿನಿಮಾದಲ್ಲಿ ಅವಕಾಶ ನೀಡುತ್ತ ತನ್ನ ಕೈಲಾದ ಸಹಾಯವನ್ನು ಮಾಡುತ್ತಲೇ ಬೆಳೆದ ದರ್ಶನ್ .
ಕರ್ನಾಟಕದ ಮೂಲೆಮೂಲೆಗಳಲ್ಲಿ ಎಲ್ಲಾ ಬಗೆಯ ಕೋಟ್ಯಾಂತರ ಅಭಿಮಾನಿಗಳು ಹೊಂದಿದ್ದಾರೆ.
ತಾನು ಯಾವುದರಲ್ಲಿ ಕಡಿಮೆ ಇಲ್ಲದಂತೆ ಸಾಕಷ್ಟು ಸ್ನೇಹಿತರು ಬಳಗವನ್ನು ಹೊಂದಿದದ್ದರು ರಾಜಕೀಯವಾಗಿಯೂ ಎಲ್ಲ ಪಕ್ಷದ ನಾಯಕರು ಜೊತೆಯಲ್ಲಿ ಸಲುಗೆಯ ಗೆಳತನವಿತ್ತು.
ಕಾಟೇರ್ ನಂತಹ ಸಿನಿಮಾ ಮಾಡೋಕೆ ಕನ್ನಡದಲ್ಲಿ ತಾಕತ್ತು ದೈರ್ಯ ಶಕ್ತಿ ,ಯುಕ್ತಿ ಬೇಕು ಇಂತಹ ಸಿನಿಮಾ ಮಾಡಲು ಇಂತಹ ದೊಡ್ಡ ನಾಯಕ ಒಪ್ಪುವುದು ಅಷ್ಟು ಸುಲಭವಲ್ಲ.
ಕಾಟೇರ್ ಸಿನಿಮಾದಲ್ಲಿ ಒಂದೊಂದು ಪಾತ್ರವು ಶೋಷಿತ ಜನರ ನೋವಿಗೆ ಮುಲಾಮು ನೀಡಲಾಗುತ್ತದೆ.
ಈ ಸಿನಿಮಾ ಹೆಚ್ಚು ಜನ್ರು ನ್ನ ಜಾಗೃತಿ ಮೂಡಿಸುವ ಕೆಲಸ ಮಾಡಿತು, ಪುರೋಹಿತ ಜಮೀನ್ದಾರಿ ಪಾಳೆಗಾರಿಕೆ ಜಾತಿವಾದಿಗಳ ಕೆಂಗಣ್ಣಿಗೆ ಗುರಿಯಾಯಿತು.
ದರ್ಶನ ಅವರ ಸರಳತೆ ಪ್ರಾಮಾಣಿಕತೆ ನೇರ ನುಡಿ ಅವರಿಗೆ ಮುಳವಾಯಿತು. ಸಾರ್ವಜನಿಕ ಜೀವನದಲ್ಲಿ ನಟನೆ ಮಾಡಲಿಲ್ಲ ನೇರಾ ನೆರವಾಗಿ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದು ಮುಳವಾಯಿತು.
ತಾನು ಕಟ್ಟಿಕೊಂಡ ಕೋಟೆಯಲ್ಲಿ ವಿಲನ್ ತರಹ ಮನಸ್ಥಿತಿ ಇರೋರು ಇದ್ದಾರೆ ಎನ್ನುವ ಅರಿವಿಗೆ ಬರಲಿಲ್ಲ.
ಅವರುಗಳು ಎಡವಟ್ಟು ಆಲೋಚನೆಯಿಂದ ಇವತ್ತು ಅವರು ಜೈಲು ಸೇರಬೇಕು ಅಯಿತು.
ಆದರೆ ತನ್ನ ಸಿನಿಮಾ ನೋಡಿ ಬೆಳೆಸಿದ ತಾನು ತನ್ನ ಸೆಲೆಬ್ರಿಟಿ ಎಂದು ಕರೆಯುವ ಯಾವೊಬ್ಬ ಪ್ಯಾನ್ಸ್ ದರ್ಶನ ಅವರನ್ನ ಬಿಟ್ಟು ಕೊಡಲಿಲ್ಲ.
ಮೊನ್ನೆ ಕೊರ್ಟ ವಿಚಾರಣೆಯ ಸಂದರ್ಭದಲ್ಲಿ ಇಡೀ ಕೊರ್ಟ ಆವರಣದ ಹೊರಗೆ ಒಳಗೆ ಕಕ್ಕಿರಿದು ಜನ ಸೇರಿತ್ತು ಕೊರ್ಟ ಕಲಾಪದ ಸಂದರ್ಭದಲ್ಲಿ ದರ್ಶನ ಅವರ ಮುಖದಲ್ಲಿ ಪಶ್ಚಾತ್ತಾಪದ ಭಾವನೆ ಇತ್ತು ಮೂರು ಎರಡೂವರೆ ತಾಸುಗಳ ವಕೀಲರ ವಾದ ಸಂದರ್ಭದಲ್ಲಿ ಅಲಿಸುತ್ತಾ ಇದ್ದ ದರ್ಶನ ಅವರಿಗೆ ಕಾನೂನು ಮೇಲಿನ ಗೌರವ ನ್ಯಾಯಂಗದ ಮೇಲೆ ನಂಬಿಕೆ ಇತ್ತು.
ಅಷ್ಟು ದೊಡ್ಡ ನಟನಾದರೂ ತುಂಬ ಸಭ್ಯನಂತೆ ನಿಂತುಕೊಂಡಿದ್ದರು.
ಕೊರ್ಟ ನಿಂದ ವಿಚಾರಣೆ ಮುಗಿದು ಹೊರಗೆ ಬರುವಾಗ ಎಲ್ಲರೂ ಕೈಯಲ್ಲಿ ಮೊಬೈಲ್ ವಿಡಿಯೊ ಮಾಡಲು ಸಾಲುಗಟ್ಟಿ ನಿಂತಿರುವ ದೃಶ್ಯ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೋರ್ಟ್ ಆವರಣದಲ್ಲಿ ಘೋಷಣೆ ಕೂಗಿದರು.ಪೋಲೀಸರು ಲಾಠಿ ಪ್ರಹಾರ ನಡೆಸಿದರು ಅಭಿಮಾನಿಗಳು ಅಭಿಮಾನ ಕುಗ್ಗಲಿಲ್ಲ.
ಮಿಡಿಯಾಗಳಿಗೆ ದರ್ಶನ್ ಅವರು ಈ ಹಿಂದೆ ನೇರವಾಗಿ ಬೈದಿದ್ದರು ಅದನ್ನೆ ದ್ವೇಷವಾಗಿ ಮನಸ್ಸಿನಲ್ಲಿ ಮಡಗಿಟ್ಟುಕೊಂಡ ಸುದ್ದಿ ಮಾಧ್ಯಮಗಳು ಈ ಅವಕಾಶವನ್ನ ವಸ್ತ್ರವಾಗಿ ಜಳಪಿಸಿ ದರ್ಶನ ಅವರನ್ನ ವೈಯಕ್ತಿಕವಾಗಿ ತೆಜೋವಧೆ ಮಾಡಿ ಅವರ ಶಕ್ತಿ ಕುಂದಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ಟಿವಿಗಳಿಗೆ TRP ಹೆಚ್ಚು ಅಯಿತು ದರ್ಶನ ಅವರಿಂದ ಈ ಟಿವಿಗಳಿಗೆ ಹೆಚ್ಚು ಲಾಭ ಅಯಿತು ಹೊರತು.
ದರ್ಶನ ಅಭಿಮಾನಿಗಳು ಶಕ್ತಿ ಸಂಖ್ಯೆ ಕುಗ್ಗಿಸಲು ಆಗಲೇ ಇಲ್ಲ ಕೊನೆಗೆ ಮಾಧ್ಯಮಗಳು ಜನಸಾಮಾನ್ಯರಿಂದ ಹುಗಿಸಿಕೊಂಡವು.
ಕರ್ನಾಟಕದಲ್ಲಿಯೇ ಬಹುದೊಡ್ಡ ಘನಘೋರ ಘಟನೆ ಎಂದರೆ ಅದು ನೂರಾರು ಹೆಣ್ಣು ಮಕ್ಕಳ ರೇಫ್ ಮಾಡಿದ ಪ್ರಜ್ವಲ್ ರೇವಣ್ಣ ಐತಿಹಾಸಿಕ ಕ್ರಮಿನಲ್ ಪ್ರಕರಣ ಮರೆಮಾಚಿದರು.
ದರ್ಶನ್ ಅವರ ಪ್ರಕರಣ ಏಕೆ ಅಯಿತು ಏನಾಯಿತು ಎಂದು ಪೊಲೀಸ್ ತನಿಖೆಯಿಂದ ಮಾತ್ರ ಹೊರ ಬರಬೇಕು ದರ್ಶನ ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೇ ಆಗಲಿ.
ದರ್ಶನ ಸಹೋದ್ಯೋಗಿಗಳ ಕ್ರೂರವಾಗಿ ನಡೆದುಕೊಂಡಿದ್ದರೆ ಅವರಿಗೆಲ್ಲ ಶಿಕ್ಷೆ ಪಶ್ಚಾತ್ತಾಪ ಆಗಲಿ ಕಾನೂನನ್ನು ನಾವು ಗೌರವಿಸೋಣ.
ಪ್ರಮುಖವಾಗಿ ರೇಣುಕಾಸ್ವಾಮಿ ತಪ್ಪು ಕುರಿತು ಅಷ್ಟೊಂದು ಪ್ರಚಾರ ಮಾಡಲಿಲ್ಲ ಈ ಜಾತಿವಾದಿ ವ್ಯವಸ್ಥೆ ಈ ರೇಣುಕಾಸ್ವಾಮಿ ತನ್ನ ಅಂಗಾಂಗಗಳ ಪೊಟೊ ಅಶ್ಲೀಲ ಮೆಸೆಜ್ ಗಳ ನಂತಹ ದೊಡ್ಡ ತಪ್ಪು ಬಗ್ಗೆ ಎಲ್ಲೂ ಯಾರು ಉಸಿರು ಎತ್ತಲಿಲ್ಲ ಬದಲಾಗಿ ರೇಣುಕಾಸ್ವಾಮಿ ಜಾತಿ ಸರ್ವಶ್ರೇಷ್ಠ ಅವರೊಬ್ಬ ವೆಜೆಟರಿಯನ್ ಅದು ಇದು ಎಂದು ರೇಣುಕಾಸ್ವಾಮಿ ಒಬ್ಬ ಸಚ್ಚಾರಿತ್ರ ಮತ್ತು ಒಳ್ಳೆಯ ವ್ಯಕ್ತಿ ಎಂದು ಸರ್ಟಿಫಿಕೇಟ್ ನೀಡಿತು.
ಇನ್ನೂ ಕೊಲೆ ತನಿಖೆ ಹಂತದಲ್ಲಿ ಇರುವಾಗ ದರ್ಶನ್ ಮಾತ್ರ ಅಪರಾಧಿ ಅವರಿಗೆ ಶಿಕ್ಷೇ ಆಗಬೇಕು ಎಂದು ಮಾಧ್ಯಮಗಳು ಜಡ್ಜಮೆಂಟ್ ಶರಾ ಬರೆದು ಹಾಕಿದವು.
ದರ್ಶನ ಅವರ ಬೆಳವಣಿಗೆ ಸಹಿಸದ ಎಲ್ಲಾ ಶಕ್ತಿಗಳು ಪರಸ್ಪರ ಒಟ್ಟಾಗಿ ಅವರ ತಪ್ಪಿಗಾಗಿ ಕಾಯುತ್ತಾ ಕುಳಿತಿಹೊಂದಿದ ಈ ಪ್ರಕರಣದಿಂದ ಅವರಿಗೆ ಖುಷಿಯಾಗಿದೆ.
ದರ್ಶನ್ ಅವರಿಗೆ ತಾನು ತಪ್ಪು ಮಾಡಿದ ಎನ್ನುವ ಪಶ್ಚಾತ್ತಾಪವಿದೆ ತಿದ್ದಿಕೊಳ್ಳಲು ಅವಕಾಶ ಇದೆ ಮುಂದೆ ಮತ್ತೆ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಒಳ್ಳೆಯ ಸಿನಿಮಾಗಳ ಮಾಡಲಿ ಎನ್ನುವುದು ನಮ್ಮ ಆಶಯ.
ದರ್ಶನ್ ತನು ಮನ ಧನ ಎಲ್ಲವೂ ದಾರೆ ಎಳೆದು ಬೆಳೆಸಿದ ಯುವನಟ ನಟಿಯರು ಪೋಷಕ ನಟರು ಇವತ್ತು ದೂರವಾಗಿದ್ದಾರೆ.
ಆದರೆ ತಾನು ನಂಬಿದ ಸೆಲೆಬ್ರಿಟಿ ಶಕ್ತಿ ಕುಗ್ಗಲಿಲ್ಲ ನಟನಾಗಿ ಸಂಪಾದಿಸಿದ ಅಭಿಮಾನಿಗಳು ಕೈ ಬೀಡಲಿಲ್ಲ.
~ಹನುಮೇಶ್ ಗುಂಡೂರು ವಕೀಲರು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.