Breaking News

ಸಚಿವರಿಂದ ವಿವಿಧ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ,,

ರಸ್ತೆಗಳ ಸುಧಾರಣೆ, ಶುದ್ಧಕುಡಿಯುವ ನೀರು ಪೂರೈಕೆಗೆ ಕ್ರಮ : ತಂಗಡಗಿ

ಕನಕಗಿರಿ ತಾಲೂಕಿನ ಗ್ರಾಮಗಳು ಶೇಕಡಾ ನೂರರಷ್ಟು ಒಣ ಬೇಸಾಯ ಮತ್ತು ಗ್ರಾಮೀಣ ಪ್ರದೇಶದಿಂದ ಕೂಡಿದ್ದು, ರಸ್ತೆಗಳ ಸುಧಾರಣೆಗೆ ಮತ್ತು ಶುದ್ದ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಜಾಹೀರಾತು

ಸಣ್ಣ ನೀರಾವರಿ ಇಲಾಖೆಯಿಂದ ನಬಾರ್ಡ್ ಯೋಜನೆಯಲ್ಲಿ ಮಂಜೂರಾದ 8.50 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಗುಡದೂರು ಗ್ರಾಮದಲ್ಲಿ ಗುಡದೂರು-ಮಲ್ಲಾಪುರ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭಾನುವಾರ ಸಚಿವರು ಭೂಮಿಪೂಜೆ ನೆರವೇರಿಸಿ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಸುಗಮ ಸಂಚಾರಕ್ಕಾಗಿ ಗುಡದೂರು, ಕರಡೋಣ, ಬುನ್ನಟ್ಟಿ ಮಲ್ಲಾಪುರ ಸೇರಿದಂತೆ ಈ ಭಾಗದ ಗ್ರಾಮಗಳ ಬಹು ವರ್ಷಗಳ ಬೇಡಿಕೆಯನ್ನು ಕೋಟಿಗಟ್ಟ ಲೆ ಅನುದಾನ ನೀಡುವ ಮೂಲಕ ಅಧಿಕಾರಿಗಳು ನಿಗಾವಹಿಸಿ ಗುಣ ಮಟ್ಟದ ಕಾಮಗಾರಿ ನಿರ್ವಹಿಸಬೇಕೆಂದರು.

ತುಂಗಾಭದ್ರ ಎಡದಂಡೆ ಕಾಲುವೆ ಮೂಲಕ ಜೀರಾಳ ಹಾಗೂ ಇತರೆ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೊರೈಸಲು 33 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಕಾಮಗಾರಿಗೆ ಚಾಲರ್ನೆ ನೀಡಲಾಗುವುದು.

ಕನಕಗಿರಿ-ನವಲಿ ರಾಜ್ಯ ಹೆದ್ದಾರಿಯಲ್ಲಿ 25 ಕೋಟಿರೂ. ವೆಚ್ಚದಲ್ಲಿ 12 ಕಿ.ಮೀ ನಷ್ಟು ರಸ್ತೆ ಆಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದ್ದು, ಶೀಘ್ರದಲ್ಲಿ ನೀಡಲಾಗುವುದು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜೀರಾಳ ಗ್ರಾಮದಲ್ಲಿ ಕನಕದಾಸ ಹಾಗೂ ಕನಕಾಪುರದಲ್ಲಿ ಜೀರಲಿಂಗೇಶ್ವರ ಭವನ, ಗೌರಿಪುರದಲ್ಲಿ ದ್ಯಾಮಲಾಂಬಿಕಾ ದೇವಿ ಹಾಗೂ ಹಣವಾಳ ಶರಣಬಸವೇಶ್ವರ ದೇವಸ್ಥಾನಕ್ಕೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಲಾ 25 ಲಕ್ಷ ರೂಪಾಯಿ, ಜೀರಾಳ ಹೇಮರೆಡ್ಡಿ ಮಲ್ಲನ್ನು ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ದಾರಕ್ಕೆ 15 ಲಕ್ಷ ರೂಪಾಯಿ ಅನುದಾನ, ಬೈಲಕ್ಕುಂಪುರ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ 1.4 ಕೋಟಿ ರೂಪಾಯಿ ಮತ್ತು ಕಣ್ಣೀರಮಡಗು ಗ್ರಾಮದಲ್ಲಿ 70 ಲಕ್ಷ ರೂಪಾಯಿ ಮೊತ್ತದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ವರ್ನ್ ಖೇಡ ಗ್ರಾಮದಿಂದ

ಕಾಮಗಾರಿಗೆ ಚಾಲನೆ ಕನಕಗಿರಿ-ತಾವರಗೇರಾ ಮುಖ್ಯ

ರಸ್ತೆವರೆಗೆ ಡಾಂಬರೀಕರಣಕ್ಕೆ 2 , ವಡಕಿ ಕಲ್ಯಾಣ ಗ್ರಾಮದಿಂದ ನವಲಿ-ಕನಕಗಿರಿವರೆಗೆ ರಸ್ತೆ ಡಾಂಬರೀಕರಣಕ್ಕೆ 1.24 ಕೋಟಿ ರೂಪಾಯಿ, ಉಮಳಿ ಕಾಟಾಪುರದಿಂದ ಗುಡದೂರು-ಕೆ. ಮಲ್ಲಾಪುರ ಗ್ರಾಮದವರೆಗೆ ರಸ್ತೆ ಡಾಂಬರೀಕರಣಕ್ಕೆ ಕೋಟಿ, ಜೀರಾಳದಿಂದ ಹೊಸ ಜೀರಾಳ ಕಲ್ಗುಡಿ ವರೆಗೆ ರಸ್ತೆ ಡಾಂಬರೀಕರಣಕ್ಕೆ 1.90 ಕೋಟಿ ರೂಪಾಯಿ ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 5ರಿಂದ 6 ಕೋಟಿ ರೂಪಾಯಿ ಅನುದಾನ ಮಂಜೂರಿಯಾಗಿದೆ .

ಕನಕಾಪುರದಿಂದ ವನಗಡ್ಡಿ ಹಾಗೂ ವರ್ನ್ ಖೇಡ ಗ್ರಾಮದ ರಸ್ತೆ ಡಾಂಬರೀಕರಣಕ್ಕೂ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು. ಶಾಲಾ ದುರಸ್ತಿ, ಹೊಸ ಕೊಠಡಿಗಳ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ತರಗತಿ ಆರಂಭ ಹಾಗೂ ಕಂಪ್ಯೂಟರ್ ಒದಗಿಸಲು ತಾಲ್ಲೂಕಿಗೆ 25 ಕೋಟಿ 1.50

ತಾಲ್ಲೂಕಿನ ಗೌರಿಪುರ, ಹುಲಿಹೈದರ ಹಾಗೂ ಜೀರಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೆಯೆ ಕ್ಷೇತ್ರದ ವಿವಿಧ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ವಿಜಯಕುಮಾರ, ತಾ.ಪಂ. ಪ್ರಭಾರ ಇಒ ಕೆ. ರಾಜಶೇಖರ, ಗ್ರೇಡ್ -2 ತಹಶೀಲ್ದಾರ್ ವಿ. ಎಚ್. ಹೊರಪೇಟೆ, ಪಿಐ ಫೈಜುಲ್ಲಾ, ಅಧಿ ಕಾರಿಗಳಾದ ವಿಜಯಕುಮಾರ, ರಾಜೇಂದ್ರಪ್ರಸಾದ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಕಟ್ಟಿಮನಿ(ಜೀರಾಳ), ಶರಣಮ್ಮ ಕೆಲ್ಲೂರು (ಹುಲಿಹೈದರ), ಹಿರೇ ಹನುಮಂತಪ್ಪ (ಕರಡೋಣ), ರೇಣುಕಮ್ಮ (ಮುಸಲಾಪುರ), ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಮುಖಂಡರಾದ ಸಿದ್ದಪ್ಪ ನೀರ್ಲೂಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣಕಲ್ಲೂರು, ಪ್ರಮುಖರಾದ ಶರಣಬಸಪ್ಪ ಭತ್ತದ, ವೀರೇಶ ಸಮಗಂಡಿ, ಹನುಮೇಶ ಮುರುಡಿ, ಬಸಂತಗೌಡ, ರಾಮನಗೌಡ ಬುನ್ನಟ್ಟಿ ಹೊನ್ನೂರುಸಾಬ ಮೇಸ್ತ್ರಿ, ಮಲ್ಲಿಕಾರ್ಜುನಗೌಡ, ಗಂಗಾಧರಗೌಡ, ನಾಗಪ್ಪ ಹುಗ್ಗಿ ಇತರರು ಇದ್ದರು.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.