
ಕುಕನೂರು : ಕುಕನೂರು ತಾಲೂಕಿನ ಕೋನಾಪೂರ ಶಾಲೆಯ ಆವರಣದ ಅಡಿವಿ ಔಡಲ ಕಾಯಿಯನ್ನು ತಿಂದು ಸುಮಾರು 35 ರಿಂದ 40 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ನಡೆದಿದ್ದು ಕೋನಾಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಮಕ್ಕಳನ್ನು ಹತ್ತಿರದ ತಾಲೂಕಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು.

ಶಾಲೆಯ ಒಟ್ಟು 72 ಮಕ್ಕಳಲ್ಲಿ ಬರೋಬ್ಬರಿ 45 ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿ ಮೂವರು ಮಕ್ಕಳಿಗೆ ಗಂಭೀರ ಸ್ಥಿತಿ ಕಂಡ ಕಾರಣ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ಇದ್ದು, ವಿದ್ಯಾರ್ಥಿಗಳ ಪಾಲಕರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ ಎಚ್ ಪ್ರಾಣೇಶ. ಉಪ ತಹಶೀಲ್ದಾರ ಮುರಳೀಧರ ರಾವ್, ಅಕ್ಷರದಾಸೋಹ ಉಪ ನಿರ್ದೇಶಕ ಎಫ್ ಎಂ ಕಳ್ಳಿ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು. ಈ ಸಮಯದಲ್ಲಿ ಶಾಲಾ ಶಿಕ್ಷಕರು ಆಸ್ಪತ್ರೆ ಯಲ್ಲಿಯೇ ಇದ್ದರು.
Kalyanasiri Kannada News Live 24×7 | News Karnataka
