ಕುಕನೂರು : ತಾಲ್ಲೂಕಿನ ರಾಜೂರು ಗ್ರಾಮದ ಪಂಚಾಯತಿ ಗ್ರಂಥಾಲಯ ಆಧುನಿಕತೆಯ ಮೆರುಗಿನಿಂದ ಕಂಗೊಳಿಸುತ್ತಿದೆ.
ತಾಲೂಕಿನಲ್ಲಿ ಇಂತಹ ಮೂರು ವಿಷೇಶ ನೂತನ ಮಾದರಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಿದ್ದು, ಹಲವಾರು ಮಹನೀಯರ ಹಾಗೂ ವಿವಿಧ ಜ್ಞಾನ ಭಂಡಾರದ ಪುಸ್ತಕಗಳಿದ್ದು ಅವುಗಳ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಹಿರೇಮನಿ ಹೇಳಿದರು.
ಓದು ಮನುಷ್ಯನ ಜ್ಞಾನ ವಿಕಾಸದ ತೊಟ್ಟಿಲು . ಓದುಗರಿಗೆ ಸೂಕ್ತ ಸೌಕರ್ಯ ಕಲ್ಪಿಸುತ್ತಾ ಮುನ್ನೆಡೆದಿರುವ ನಮ್ಮ ಗ್ರಂಥಾಲಯವು ಪುಸ್ತಕ ಹಾಗೂ ಪತ್ರಿಕೆ ಅಭಿಮಾನಿಗಳಿಗೆ ಆಕಷ೯ಕ ವಾಗಿದೆ, ಎಲ್ಲ ವಯೋಮಾನದ ಜನರು ಪ್ರತಿನಿತ್ಯ 30 ರಿಂದ 40 ಜನರು ಬಂದು ಜ್ಞಾನದ ಹಸಿವು ತುಂಬಿಕೊಳ್ಳುತ್ತಿದ್ದಾರೆ ಎಂದರು.
ನಂತರದಲ್ಲಿ ಗ್ರಂಥ ಪಾಲಕ ನಿಂಗಪ್ಪ ಗೊಂದಿ ಮಾತನಾಡಿ, ನಮ್ಮ ಗ್ರಂಥಾಲಯವು ತಾಲ್ಲೂಕಿನಲ್ಲಿ ಮಾದರಿ ಆಗಿದೆ, ಇದರ ಪ್ರಗತಿಗೆ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಆಡಳಿತ ಮಂಡಳಿಯವರು ಸೇರಿದಂತೆ ಸ್ಥಳೀಯರ ಪ್ರೋತ್ಸಾಹವು ಇದೆ.
ನಮ್ಮ ಗ್ರಂಥಾಲಯವು ಶಾಲೆಗೆ ಹತ್ತಿರವಾಗಿರುವದರಿಂದ ನಿತ್ಯ ಆಟ ದ ವೇಳೆ ಶಾಲಾ ವಿದ್ಯಾರ್ಥಿಗಳು ಪತ್ರಿಕೆ ಹಾಗೂ ಪುಸ್ತಕ ಓದಲು ಆಗಮೆಸುತ್ತಿದ್ದು ಜ್ಞಾನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಡಿಜಿಟಲ್ ಗ್ರಂಥಾಲಯ ಸೇರಿ ಎಲ್ಲ ನಮೂನೆಯ ಪುಸ್ತಕ ಗಳ ಹಾಗೂ ಪತ್ರಿಕೆಗಳ ನೆರವು ಸ್ಥಳೀಯರಿಗೆ ಸಹಕಾರಿ ಆಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಬಾಳಪ್ಪಹಿರೆಮನಿ, ಗ್ರಾಪಂ. ಸದಸ್ಯ ಕೋಟೆಶ್ ಗುರಿಕಾರ, ಈರಪ್ಪ ತಳವಾರ, ಬಸವರಾಜ ಅಂಗಡಿ, ರುದ್ರಪ್ಪ ಭಂಡಾರಿ , ಶರಣಪ್ಪ ಗುರಿಕಾರ ಮೊದಲಾದವರು ಹಾಜರಿದ್ದರು.