
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಚೇರಿಯಲ್ಲಿ ರಾಜ್ಯ ಸಮ್ಮೇಳನದ ಪೋಸ್ಟರ್ ಪರಪತ್ರ ಬಿಡುಗಡೆ ಮಾಡಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಎ. ದೇವದಾಸ್ ಅವರು ಜಿಲ್ಲೆಯ ಮುಖಂಡರನ್ನುದ್ದೇಶಿಸಿ ಮಾತನಾಡಿದರು
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಬಂದಿಲ್ಲ . ಸಾಕಷ್ಟು ಬಡ ಕಾರ್ಮಿಕರ ಮಕ್ಕಳು ಶಾಲೆ ಪೀಸ್ ಕಟ್ಟದೆ ಕಷ್ಟ ಅನುಭವಿಸುತ್ತಿದ್ದಾರೆ.
ಕಾರ್ಮಿಕರಿಗೆ ಮೀಸಲಾದ ಆರೋಗ್ಯ ಸೌಲಭ್ಯ ಮದುವೆ ಸೌಲಭ್ಯ, ವಸತಿ, ಇನ್ನಿತರ ಸಹಾಯಧನ ಕಟ್ಟಡ ಕಾರ್ಮಿಕರಿಗೆ ಸರಿಯಾಗಿ ತಲುಪುತ್ತಿಲ್ಲ.
ಅಕ್ರಮ ಕಟ್ಟಡ ಕಾರ್ಮಿಕರ ಕಾಡುಗಳನ್ನು ರದ್ದು ಮಾಡದೆ ಕಾರ್ಮಿಕರಲ್ಲದವರೂ ಸೌಲಭ್ಯ ಪಡೆಯುತ್ತಿರುವುದು ನಿರ್ಲಕ್ಷ ಎದ್ದು ಕಾಣುತ್ತಿದೆ.
ನಿಜವಾದ ಕಟ್ಟಡ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕೆಂದರೆ ಒಂದು ನೈಜ್ಯ ಕಟ್ಟಡ ಕಾರ್ಮಿಕ ಸಂಘವನ್ನು ಸೇರಬೇಕು. ನಿರಂತರ ರಾಜೀರಹಿತ ಹೋರಾಟವನ್ನು ಕಟ್ಟಬೇಕು. ಅಂತ ಒಂದು ಹೋರಾಟವನ್ನು ಕಟ್ಟಿ ಬೆಳೆಸುತ್ತಿರುವ ಎ ಐ ಯು ಟಿ ಯು ಸಿ ಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಸಮ್ಮೇಳನ ಜುಲೈ 9 ನೇ ತಾರೀಕಿನಂದು ಧಾರವಾಡದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ, ವಿವಿಧ ತಾಲೂಕಿನ ಮುಖಂಡರುಗಳಾದ ಸುರೇಶ, ಹುಲುಗಪ್ಪ, ನಾಗ