Breaking News

ಭಾನಾಪೂರ ಮೇಲ್ಸೆತುವೆ ಪೂರ್ಣಗೊಳ್ಳುವದು ಯಾವಾಗ,,,,,?

When will the Bhanpur flyover be completed?

ಆಮೆಗತಿಯಲ್ಲಿ ಸಾಗಿದ ಮೇಲ್ಸೆತುವೆ ಕಾಮಗಾರಿ : ವಾಹನ ಸವಾರರ ಪರದಾಟ,,,

ವರದಿ : ಪಂಚಯ್ಯ ಹಿರೇಮಠ,,,

ಕೊಪ್ಪಳ : ಕರಡಿ ಸಂಗಣ್ಣನವರು ಸಂಸದರಿದ್ದಾಗ ಪ್ರಾರಂಭಗೊಂಡ ಮೇಲ್ಸೆತುವೆ ಕಾಮಗಾರಿ ಎರಡು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಪರದಾಡುತ್ತಾ ಭಾನಾಪೂರ ಗ್ರಾಮವನ್ನು ದಾಟಿ ಪರ ಗ್ರಾಮಗಳಿಗೆ ಪ್ರಯಾಣಿಸುವ ಪರಸ್ಥಿತಿ ನಿರ್ಮಾಣವಾಗಿದೆ.

ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಸುಮಾರು ಎರಡು ವರ್ಷಗಳಿಂದ ಮೇಲ್ಸೆತುವೆಯ ಪಕ್ಕದಲ್ಲಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಸಾರಿಗೆ ಇಲಾಖೆಯ ವಾಹನ ಇನ್ನೂಳಿದಂತೆ ಹಲವಾರು ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವದರಿಂದ , ದ್ವಿಚಕ್ರ ವಾಹನ ಸವಾರರು ಹಾಗೂ ಪಾದಾಚಾರಿಗಳು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ಕಾರಣ ರಸ್ತೆ ನಿರ್ಮಾಣ ನೆಪದಲ್ಲಿ ಬಿದ್ದಿರುವ ಜಲ್ಲಿ ಕಲ್ಲುಗಳಿಂದ ಹಲವಾರು ಜನಗಳು ಬಿದ್ದು ಗಾಯಗೊಂಡ ಪ್ರಸಂಗಗಳು ನಡೆದಿವೆ ಹಾಗೆಯೇ ಯಾವಾಗ ಯಾರನ್ನು ಬಿಳಿಸುತ್ತವೇಯೋ ಗೊತ್ತಿಲ್ಲಾ,,,?

ಆದರೆ ಕಾಮಗಾರಿಯನ್ನು ಕೈಗೆತ್ತಿಕೊಂಡ ಗುತ್ತಿಗೆದಾರರು ಇದೇ ಮಾರ್ಗದಲ್ಲಿ ಪ್ರತಿ ನಿತ್ಯ ಸಂಚರಿಸಿದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುವದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಕೇವಲ ಕಾಟಾಚಾರಕ್ಕೆ ಧೂಳು ಹಾರಬಾದೆಂದು ರಸ್ತೆಗೆ ನೀರು ಸಿಂಪರಣೆ ಮಾಡಿ ಕುಳಿತುಕೊಳ್ಳುತ್ತಿರುವ ಗುತ್ತಿಗೆದಾರರು, ರಸ್ತೆಯ ಮೇಲಿನ ಜಲ್ಲಿ ಕಲ್ಲುಗಳಿಗೆ ಮುಕ್ತಿ ಹಾಡಿ ನಿಧಾನವಾಗಿ ಮೇಲ್ಸೆತುವೆ ನಿರ್ಮಾಣ ಮಾಡಲಿ ಎನ್ನುವದು ವಾಹನ ಸವಾರರ ಅಭಿಪ್ರಾಯವಾಗಿದೆ.

ಇತ್ತೀಚಿಗೆ ನಡೆದ ಎಂ ಎಲ್ ಎ ಹಾಗೂ ಎಂಪಿ ಚುನಾವಣೆಗೆ ಇದೇ ರಸ್ತೆ ಮಾರ್ಗವಾಗಿ ಅನೇಕ ಬಾರಿ ಜನ ಪ್ರತಿನಿಧಿಗಳು ಓಡಾಡಿದರು ಸಹಿತ ಅವರು ಈ ರಸ್ತೆಯಲ್ಲಿ ಬಗ್ಗೆ ಕಾಳಜಿ ವಹಿಸಲಿಲ್ಲಾ ಕಾರಣ ಅವರು ಎಸಿಯಲ್ಲಿ ಓಡಾಡುತ್ತಾರೆ, ಅವರಿಗೆ ಸಾರ್ವಜನಿಕರ ಸಂಕಷ್ಟ ಹೇಗೆ ತಾನೇ ಗೊತ್ತಾಗುತ್ತದೆ ಎಂದು ಭಾನಾಪೂರ ಗ್ರಾಮದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವದು ಕೇಳಿ ಬಂದಿತು,,,

ಇನ್ನೂ ಮೇಲಾದರೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ರಸ್ತೆಯಲ್ಲಿನ ಜಲ್ಲಿಕಲ್ಲುಗಳಿಗೆ ನಾಂದಿ ಹಾಡಿ ಸಂಚಾರಕ್ಕೆ ಅನುವು ಮಾಡಿ ನಿಧಾನವಾಗಿ ಮೇಲ್ಸೆತುವೆ ಮೂಲಕ ಸಂಚಾರಕ್ಕೆ ಅನೂಕೂಲ ಕಲ್ಪಿಸಲಿ ಎನ್ನುವದು ವಾಹನ ಸವಾರರ ಅಭಿಪ್ರಾಯವಾಗಿದೆ,,,,

,,,,,,,,**ಕೊಪ್ಪಳ ಯಲಬುರ್ಗಾ ಮಾಗ೯ದ ಭಾನಾಪುರ ಮೇಲ್ಸೇತುವೆ ನಿರ್ಮಾಣ ನಿಧಾನವಾಗಿ ನಡೆದಿದ್ದು , ತಗ್ಗು ದಿನ್ನೆ ಗಳಿಂದ ದಾಟ ಬೇಕೆಂದರೆ ಎಲ್ಲ ವಯೋಮಾನದ ಜನರು ತೊಂದರೆಗೆ ಕಾರಣ ವಾಗಿದೆ. ಈ ಕುರಿತು ಮೇಲಧಿಕಾರಿ ಹಾಗು ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ.ನೂತನ ಸಂಸದ ರಾಜಶೇಖರ್ ಹಿಟ್ನಾಳ್ ಅವರು ಕೂಡಲೇ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ನಮ್ಮ ಒತ್ತಾಯ.

About Mallikarjun

Check Also

ಎನ್.ಆರ್.ಕಾಲೋನಿಯ ಆಚಾರ್ಯ ಪಾಠಶಾಲಾದಲ್ಲಿ ವೈಭವದಿಂದ ಜರುಗಿದ ಸಮ್ಮಿಲನ ಕಾರ್ಯಕ್ರಮ

ಬೆಂಗಳೂರು, ಜೂ, 30; ಎಪಿಎಸ್ ಶೈಕ್ಷಣಿಕ ಟ್ರಸ್ಟ್ ನ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.