Breaking News

ಮೈನಹಳ್ಳಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ* 

Mainahalli Sri Shivasharani Buddamma Devi Jatra Mahotsav* 

ಕೊಪ್ಪಳ: ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದ ಶ್ರೀ ಶಿವಶರಣಿ ಬುಡ್ಡಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಇದೇ ದಿನಾಂಕ 26.5.2024 ರಿಂದ 29.05.2024ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ 

 ದಿನಾಂಕ: 26-5 -2024 ರವಿವಾರ ರಾತ್ರಿ 9:30ಕ್ಕೆ ಲಘು ರಥೋತ್ಸವ ಜರಗಲಾಗುವುದು ದಿನಾಂಕ 27.05.2024 ಸೋಮವಾರ ಸಾಯಂಕಾಲ ಮಹಾರಥೋತ್ಸವ ಜರಗಲಾಗುವುದು ದಿ. 28.05.2024 ಮಂಗಳವಾರದಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಾತ್ರಿ 8:00 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಮತ್ತು ಗಂಗಿ ಮಾಳಮ್ಮನವರ ವಿವಾಹ ಕಾರ್ಯಕ್ರಮ ತದನಂತರ ರಾತ್ರಿ ಶ್ರೀ ಗದುಗಿನ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ವೇದಮೂರ್ತಿ ಬೆಟ್ಟದಯ್ಯ್ ಶಾಸ್ತ್ರಿಗಳಿಂದ ಶಿವ ಕೀರ್ತನ ಹಾಗೂ ಹಾಸ್ಯ ರಸಮಂಜಾರಿ ಕಾರ್ಯಕ್ರಮ ದಿನಾಂಕ 29-5-2024 ಬುಧವಾರ ಸಾಯಂಕಾಲ 5:30ಕ್ಕೆ ಕಡುಬಿನ ಕಾಳಗ ಕಾರ್ಯಕ್ರಮ ಇರುತ್ತದೆ

 27-5-2024 ಸೋಮವಾರ ಮಹಾ ರಥೋತ್ಸವ ದಿನದಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಕಲಾ ನಾಟ್ಯ ಸಂಘ ಮೈನಹಳ್ಳಿ ಇವರಿಂದ ಅಗಡಿಯವರ ಬಂಧುಗಳ ಬಯಲು ಜಾಗದಲ್ಲಿ ಶ್ರೀ ಬನಶಂಕರಿ ಡ್ರಾಮಾ ಸೀನ್ಸ್ ಬೇವೂರು ಇವರ ಹಾಕಿದ ಭವ್ಯರಂಗ ಸಜ್ಜೆಕೆಯಲ್ಲಿ ಶ್ರೀ ಗುರು ಪಂಚಾಕ್ಷರಿ ವಾದ್ಯವೃಂದ ಶ್ರೀ ಗವಿಶ್ ಹಾಗೂ ಸಂಗಡಿಗರು ಬಸಪಟ್ಟಣ ಇವರ ಸಂಗೀತ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಸುಂದರ ಸಾಮಾಜಿಕ ನಾಟಕ ಎಸ್ ಎಸ್ ಗಡದ್ ಸಾಕಿನ್ ಮಂಡಲಗಿರಿ ಇವರ ವಿರಚಿತ ಧನಿಕರ ದೌರ್ಜನ್ಯ ಅರ್ಥಾತ್ ಅಣ್ಣನ ಕಣ್ಣೀರು ಎಂಬ ಸುಂದರ ಕ್ರಾಂತಿಕಾರಿ ಸಾಮಾಜಿಕ ನಾಟಕ ರಾತ್ರಿ 10:30 ಕ್ಕೆ ಪ್ರದರ್ಶನಗೊಳ್ಳಲಿದೆ 

 ಶ್ರೀ ಶಿವಶರಣೆ ಬುಡ್ಡಮ್ಮ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಶ್ರೀ ಶಿವಶರಣೆ ಬುಡ್ಡಮ್ಮ ದೇವಿ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About Mallikarjun

Check Also

ಆನೆಗುಂದಿಯಲ್ಲಿ ಹೈಟೆಕ್ ಮಾದರಿಯ ರುದ್ರಭೂಮಿಉದ್ಘಾಟನೆ

ಗಂಗಾವತಿ: ಆನೆಗುಂದಿಯಲ್ಲಿ ನರೇಗಾ ಹಾಗೂ ೧೫ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಶ್ರೀಮತಿ ಲಲಿತಾರಾಣಿರವರ ಮಾರ್ಗದರ್ಶನದಲ್ಲಿ ಹೈಟೆಕ್ ಆಗಿ ನಿರ್ಮಾಣಗೊಂಡಿರುವ ರುದ್ರಭೂಮಿಗೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.