
ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮತ್ತು ಸಂಸದ ಸಂಗಣ್ಣ ಕರಡಿ ಭೇಟಿಯಾಗಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಆಭರಣ ವ್ಯಾಪಾರಿ ವಿಜಯ ಕುಮಾರ ರಾಯಕರ, ನಗರ ಸಭೆಯ ಹಿರಿಯ ಸದಸ್ಯ ಮನೋಹರ ಸ್ವಾಮಿ ಮುದೇನೂರು ಹಿರೇಮಠ,ಖಾಲಿ ಚೀಲ ವ್ಯಾಪಾರಿ ವಿಶ್ವನಾಥ,ಉದ್ಯಮಿ ಮುಷ್ಟಿ ವಿರುಪಾಕ್ಷಪ್ಪ ಹಾಗೂ ವೈದ್ಯರು, ಔಷಧ ವ್ಯಾಪಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಅಶೋಕಸ್ವಾಮಿ ಹೇರೂರ ಮತ್ತು ರಾಜಶೇಖರ ಹಿಟ್ನಾಳ ಅವರ ಎರಡನೇ ಭೇಟಿ ಇದಾಗಿದ್ದು , ಸಂಗಣ್ಣ ಕರಡಿಯವರು ಅಶೋಕಸ್ವಾಮಿ ಹೇರೂರ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಹಿಟ್ನಾಳ ಮತ್ತೊಮ್ಮೆ ಹೇರೂರ ಅವರ ಸಂಸ್ಥೆಗೆ ಭೇಟಿ ನೀಡಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದವರನ್ನು ಕೋರಿದರು.
Kalyanasiri Kannada News Live 24×7 | News Karnataka
