Breaking News

ಬಿಚ್ಚದ ಬುತ್ತಿಗಳು ಬತ್ತಿದ ನದಿಗಳು

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನಿಂದ ಕೃಷಿ ವಿಸ್ತರಣಾ ವಿಭಾಗದ ವಾರ್ಷಿಕ ತಾಂತ್ರಿಕ ಸಭೆಯನ್ನು ಮುಗಿಸಿ ವಯಾ ದಡೆಸಸೂಗುರಿನ ಮೂಲಕ ಬಳ್ಳಾರಿ ಕಡೆ ತುಂಗಭದ್ರೆಯ ಸೇತುವಿನ ಮೇಲೆ ಬಸ್ಸು ನಡೆದಾಗ ಕಂಡುಬಂದಿದ್ದು ಎಲ್ಲಾ ಜೀವರಾಶಿಗಳಿಗೆ ನೀರು ಕೊಡುವ ತುಂಗಭದ್ರೆ, ತನಗೆ ನೀರಿಲ್ಲದೆ ನೀರಿನ ಆಹಕಾರದಿಂದ, ನೀರಡಿಕೆಯಿಂದ ಅವಳ ಬಾಯಿ ಒಣಗಿ ನಿಂತು ಜೀವ ಕಳೆದುಕೊಳ್ಳುವ ಹಂಚಿನಲ್ಲಿ, ಹಂಚಿನಂತೆ ಕಾದು, ಅವಳಿಗೆ ತಾಗಿದ ತಾಪಮಾನದ ಒಣ ಗಾಳಿ ಬಸ್ಸಿನಲ್ಲಿ ಕುಂತ ನನ್ನ ದೇಹದ ರಕ್ತಕ್ಕೆ ಬೆಂಕಿ ಅತ್ತಿದಂತಾಯಿತು.
ಜಗದ್ಗುರು ಜಗ್ಗಿ ವಾಸುದೇವರ ಪ್ರಕಾರ 2030ರ ಇಸುವಿಗೆ ನಮ್ಮ ದೇಶದಲ್ಲಿ ತಾಪಮಾನ ಹೆಚ್ಚಾಗಿ, ತುಂಬಿ ಹರಿಯುವ ಎಲ್ಲಾ ನದಿಗಳು ಆಕಾರ ಕಳೆದುಕೊಂಡು, ನೀರಿನ ಆಹಕಾರದಿಂದ ಜನಗಳು ಗುಂಪು ಗುಂಪಾಗಿ ಸಾಯುತ್ತಾರೆ ಎಂದು ಸೇವ್ ಸೊಯಲ್ ಎಂಬ ಅಭಿಯಾನದ ಮುಖಾಂತರ ಜಲವಿಲ್ಲದಿದ್ದರೆ ಜೀವ ರಾಶಿಗಳ ಕುಲವೆಲ್ಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಜಲ ಸಂಕಷ್ಟದ ಬೀಜವನ್ನು ಪ್ರತಿಯೊಬ್ಬರಲ್ಲಿ ಬಿತ್ತಿದ್ದಾರೆ. ಹೌದು ಮಳೆ ಇಲ್ಲದೆ ಗುಡ್ಡದಲ್ಲಿರಿಯುವ ನೀರಿನ ಜರಿಗಳಿಲ್ಲ ಕೊಳ್ಳಗಳಿಲ್ಲ ತುಂಬಿ ಹರಿಯುವ ಹಳ್ಳಗಳಿಲ್ಲ ಆ ದಡ ಈ ದಡ ಸೋಶಿ ಹರಿಯುವ ನದಿಗಳಿಲ್ಲ.
ಹಳ್ಳ ಕೊಳ್ಳಗಳಲ್ಲಿ ಬದುಕುವ ಜಲ ಜೀವಿಗಳಿಗೆ ಬದುಕಿಲ್ಲ, ನದಿಗಳಲ್ಲಿ ಬದುಕುವ ಲಕ್ಷ ಲಕ್ಷ ಜಲ ಕುಲಗಳು ಸಾವು ಹೊಂದಿದವಲ್ಲ, ಇದಕ್ಕೆಲ್ಲ ಕಾರಣ ಮಳೆ ಇಲ್ಲ, ಮಳೆ ಬಾರದೇ ಇರುವ ಕಾರಣ ಸ್ವಾರ್ಥ ಮನುಷ್ಯ ಜೀವಿಯ ಅತಿ ಆಸೆಯ ಊರಣ.
ಬತ್ತಿ ಹೋದ ಹಳ್ಳಗಳು ಕೊಳ್ಳಗಳು ನದಿಗಳು ಬಾವಿಗಳು ಕೆರೆಗಳು ಕೃಷಿ ಹೊಂಡಗಳಿಗೆ ಪುನರ್ಜೀವನ ಕೊಡಬೇಕಾದರೆ ಅವುಗಳೆಲ್ಲವೂ ತುಂಬಿ ಹರಿಯಬೇಕಾದರೆ ದೇಶದ ಒಟ್ಟು ಜನಸಂಖ್ಯೆ 140 ಕೋಟಿ, ಪ್ರತಿಯೊಬ್ಬರೂ ಎರಡು ಮರಗಳ ಸಸಿಗಳನ್ನು ನಾಟಿಸಿದರೆ ಬತ್ತಿ ಹೋಗಿರುತಕ್ಕಂತಹ ಎಲ್ಲವೂ ತುಂಬಿ ಹರಿಯುವುದಕ್ಕೆ ಸಾಧ್ಯ. ಇಂತಹ ಪರಿಸರವನ್ನು ಸಂರಕ್ಷಿಸುವ ಕಾನೂನುಗಳನ್ನು ಸರ್ಕಾರದ ಮಟ್ಟದಲ್ಲಿ ಆದರೆ ಮಾತ್ರ ಜೀವರಾಶಿಗಳಿಗೆ ಬದುಕಿನ ದಾರಿದೀಪ ಇಲ್ಲವಾದರೆ ಬೆಳಕೆಂಬ ಅರಿವಿನ ಅಭಾವದಿಂದ ಈ ಭೂಮಿ ಮೇಲೆ ಬದುಕುವ ಪ್ರತಿಯೊಂದು ಜೀವರಾಶಿಗಳಿಗೆ ಬೆಳಕಿನ ದಾರಿದೀಪ ಕಾಣದೆ ಬದುಕೆಂಬುದೇ ಕತ್ತಲೆಯಾಗುವುದರಲ್ಲಿ ಸಂದೇಹವೇ ಇಲ್ಲ.

ಜಾಹೀರಾತು

ಲೇಖನದ ಮೂಲ: ಬಳ್ಳಾರಿ ಕಡೆಗೆ ಬಸ್ಸಿನಲ್ಲಿ ದಡೇಸುಗೂರಿನ ತುಂಗಭದ್ರ ಸೇತುವೆ ಮುಖಾಂತರ ಪ್ರಯಾಣ ಬೆಳೆಸಿದಾಗ ಕಂಡುಬಂದಿದ್ದು ಬತ್ತಿ ಹೋದ ತುಂಗಭದ್ರೆಯ ಚಿತ್ರಣ ಸದರಿ ಚಿತ್ರಣದ ಆಧಾರದ ಮೇಲೆ ಬಸ್ಸಿನ ಪ್ರಯಾಣದ ಅವಧಿಯಲ್ಲಿ ಈ ಲೇಖನವನ್ನು ರಚಿಸಲಾಗಿದೆ

ರಚನೆ:
ಡಾ. ನಾಗೇಶ್ ಬಸಪ್ಪ ಜಾನೇಕಲ್

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.