Breaking News

ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಅರಳಗುಪ್ಪೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಭಾಗ್ಯಮ್ಮ(50) w/o ಲೇಟ್.ರಾಮಚಂದ್ರಯ್ಯ ಎಂಬ ರೈತ ಮಹಿಳೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು,ಮೃತ ಮಹಿಳೆ ತಿಪಟೂರಿನ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸುಮಾರು 5 ಲಕ್ಷ ಸಾಲ ಪಡೆದು ಸಾಲ ಹಿಂದಿರುಗಿಸಲಾಗದೆ, ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು,ಗಂಡ ನಿಧನರಾಗಿದ್ದು,ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಗ್ರಾಮದಲ್ಲಿ ಇದು ಮೂರನೇ ಘಟನೆ. ಇದುವರೆಗೆ ಮೂರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದು,ಸದರಿ ವಿಚಾರವಾಗಿ ಸುಮಾರು ಬಾರಿ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಹಲವು ಬಾರಿ ಮೈಕ್ರೋ ಫೈನಾನ್ಸ್ ರವರಿಗೆ ಗ್ರಾಮಸ್ಥರು ಈ ಗ್ರಾಮದಲ್ಲಿ ಸಾಲ ವಿತರಿಸಬೇಡಿ,ತುಂಬಾ ಬಡ ಕುಟುಂಬದವರು ವಾಸವಗಿದ್ದು, ಈ ಬರಗಾಲದಲ್ಲಿ ಸಾಲ ತೀರಿಸಲು ಆಗುತ್ತಿಲ್ಲ ಆದ್ದರಿಂದ ಈ ಗ್ರಾಮಕ್ಕೆ ಯಾರು ಕೂಡ ಬರದೆ ಸಾಲ ನೀಡಬಾರದೆಂದು ತಿಳಿಸಿದರೂ, ಮೈಕ್ರೋ ಫೈನಾನ್ಸ್ ಸಿಬ್ಬಂದಿಯವರು ಕಮಿಷನ್ ಆಸೆಗೋಸ್ಕರ ಸುಮಾರು ಎಂಟರಿಂದ ಹತ್ತು ಜನ ಮಹಿಳೆಯರ ಗುಂಪು ಮಾಡಿ ಸಾಲ ವಿತರಿಸುತ್ತಿದ್ದು, ಈ ಗ್ರಾಮದಲ್ಲಿ ಇನ್ನೆಷ್ಟು ಜನ ಮಹಿಳೆಯರು ಸಾವನಪುತ್ತಾರೆ ಎಂಬುದು ಗ್ರಾಮಸ್ಥರ ಅಳಲು. ಹಾಗೂ ಈಕೆಯ ಸಾವಿಗೆ ಕಾರಣರಾದ ಮೈಕ್ರೋ ಫೈನಾನ್ಸ್ ಕಂಪನಿಗಳ ಮತ್ತು ಸಿಬ್ಬಂದಿಗಳ ಮೇಲೆ ಜಿಲ್ಲಾ ಮತ್ತು ತಾಲೂಕ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ. ಈ ಪ್ರಕರಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *