Breaking News

ಕುಮಾರಿ ಅನುಶ್ರೀ ಹತ್ಯೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮನವಿ

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಳೆದವಾರ ಕುಮಾರಿ ಅನುಶ್ರೀ ಎಂಬ ಬಾಲಕಿಯನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕಿನ್ನಾಳ ಗ್ರಾಮಸ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕರಕುಶಲತೆಯಲ್ಲಿ ದೇಶದಲ್ಲೆ ಹೆಸರು ಮಾಡಿರುವ ಕಿನ್ನಾಳ ಗ್ರಾಮದಲ್ಲಿ ಪುಟ್ಟ ಬಾಲಕಿ ಹತ್ಯೆಯಾಗಿರುವುದು ಈಡಿ ಗ್ರಾಮಸ್ಥರ ನಿದ್ದೇಗೆಡಿಸಿದೆ. ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿರುವ ಗ್ರಾಮದಲ್ಲಿ ಇಂತಹ ಕೃತ್ಯ ನಡೆದಿರುವುದು ಗ್ರಾಮಸ್ಥರ ಮಾನಸಿಕ ನೆಮ್ಮದಿ ಹಾಳುಗೆಡವಿದೆ. ಇತ್ತೀಚೆಗೆ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗ¼ ಸಂಖ್ಯೆ ಹೆಚ್ಚುತ್ತಿದ್ದು. ಇವುಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಮ್ಮ ಗ್ರಾಮದ ಘನತೆಗೆ ಪೆಟ್ಟು ಬೀಳಲಿದೆ.
ದಿ: ೧೯-೦೪-೨೦೨೪ ರಂದು ಕಾಣೆಯಾದ ಬಾಲಕಿ ಅನಿಶ್ರೀ ಮಡಿವಾಳರ ಶವವಾಗಿ ಪತ್ತೆಯಾಗಿದ್ದು ನಮ್ಮ ಗ್ರಾಮಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ಆದಷ್ಟು ಬೇಗ ಈ ಕೃತ್ಯಕ್ಕೆ ಕಾರಣ ಆದವರನ್ನು ಪತ್ತೆಹಚ್ಚಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು.
ಕಿನ್ನಾಳ ಗ್ರಾಮದಲ್ಲಿ ಅಕ್ರಮ ಮರುಳು ಸಾಗಾಣಿಕೆ ಪ್ರಾರಂಬವಾದ ಬಳಿಕ ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳಾದ ಡ್ರಗ್ಸ್ ಮಾಪಿಯಾ, ಗಾಂಜಾ ಸೇವನೆ ಮತ್ತು ಸಲಿಂಗ ಕಾಮಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸುಮಾರು ೧೬-೨೫ ವರ್ಷದ ಯುವಕರು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೂಡಲೆ ಇಂತವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಿನ್ನಾಳ ಗ್ರಾಮಸ್ಥರಾದ ಬಾಷಾ ಹಿರೇಮನಿ, ಬಸವರಾಜ ಚಿಲವಾಡಗಿ ಅನೀಲ ಬೋರಟ್ಟಿ, ಮಂಜು ಉದ್ದಾರ, ಮಂಜುನಾಥ ಗೊಂಡಬಾಳ, ವಿರೇಶ ತಾವರಗೇರಿ, ಇತರರು ಇದ್ದರು.
ಪೊ ನೋ: ೯೯೧೬೭೨೪೧೯೦, ೯೧೬೪೮೧೭೦೮೬,

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *