ಗಂಗಾವತಿ: ಉದ್ಯೋಗ ಸೃಷ್ಟಿ, ಸ್ಕಿಲ್ ಇಂಡಿಯಾ, ಅಂಗನವಾಡಿ ಮುಚ್ಚುವ ಇರಾದೆ, ಖಾಸಗಿ ಕರಣಕ್ಕೆ ಆದ್ಯತೆ, ಬಡವರಿಗಿಂತ ಕೆಲವರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು ರೂಪಿಸುವ ಸರಕಾರದ ವಿರುದ್ಧ ಬೆಳಕು ಚೆಲ್ಲುವ ಸದುದ್ದೇಶದಿಂದ ಏ.೨೮ ಭಾಣುವಾರ ಬೆಳಗ್ಗೆ ೧೦.೦೦ ಗಂಟೆಗೆ ನಗರದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ವಿದ್ಯಾರ್ಥಿ ಯುವ ಜನರ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಚಲನಚಿತ್ರ ಖ್ಯಾತ ಖಳ ನಟ ಪ್ರಕಾಶ್ ರೈ ಸೇರಿದಂತೆ ಪ್ರಮುಖ ವಿದ್ವಾಂಸರು ಆಗಮಿಸಲಿದ್ದಾರೆ ಎಂದು ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೆಷನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಪೀರ್ ಲಟಿಗೇರಿ ತಿಳಿಸಿದರು.
ಅವರು, ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದರು ಎರಡು ಕೋಟಿ ಉದ್ಯೋಗ ಒಟ್ಟು ಹತ್ತು ಕೋಟಿ ಉದ್ಯೋಗ ಎಲ್ಲಿ..?, ಹಭ ಹೆಂಡ ಜಾತಿ ಹೆಸರಿನ ಮೇಲೆ ಆಗುವ ಚುನಾವಣೆಯಿಂದ ಜನರನ್ನು ಜಾಗೃತಿಗೊಳಿಸಿ ಸಂವಿಧಾನ ಉಳಿಸುವ ಜಾತ್ಯಾತೀತಗೆ ಆದ್ಯತೆ ನೀಡುವವರಿಗೆ ಮತ ಹಾಕಿ, ಶಿಕ್ಷಣ ವ್ಯಾಪಾರೀಕರಣವಾಗಿದೆ ಬಡವರು ಉನ್ನತ ಶಿಕ್ಷಣ ಪಡೆಯುವಂತಿಲ್ಲ ಇಂಥ ಸ್ಥಿತಿ ನಿರ್ಮಾಣವಾಗಿದೆ, ಟಿಪ್ಪು ಬಗ್ಗೆ ಅನೇಕ ವಿದ್ವಾಂಸರು ಬೆಳಕು ಚೆಲ್ಲಿದರೂ ಅನಗತ್ಯ ಆತನ ಒಂದೆರೆಡು ತಪ್ಪುಗಳನ್ನೇ ಎತ್ತಿ ಹಿಡಿದು ಒಳ್ಳೆಯ ಕೆಲಸಗಳನ್ನು ಮರೆಮಾಚುವ ಐತಿಹಾಸಿಕ ತಪ್ಪು ತಪ್ಪುಗಳನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಒಂದು ಸಮುದಾಯದ ಒಬ್ಬ ವ್ಯಕ್ತಿ ಮಾಡಿದ ದುಷ್ಕೃತ್ಯಕ್ಕೆ ಇಡೀ ಸಮಾಜವನ್ನೇ ಹೊಣೆ ಮಾಡುವುದು ಎಷ್ಟು ಸರಿ?, ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಒಂದಡೆಯಾದರೆ, ಸ್ಕಾಲರ್‌ಶೀಪ್, ಫೆಲೋಶಿಪ್ ಗಳನ್ನು ಹಂತಹAತವಾಗಿ ನಿಲ್ಲಿಸುತ್ತಾ ಬರಲಾಗುತ್ತಿದೆ, ಪರೀಕ್ಷಾ ಶುಲ್ಕಾ, ಬೋಧನಾ ಶುಲ್ಕಗಳ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡಲಾಗುತ್ತಿದೆ, ಬಡವರ ಪರ ಇರುವ ಜನಪ್ರತಿನಿಧಿಗಳನ್ನು ಬೆಂಬಲಿಸುವAತೆ ಸಮಾವೇಶದಲ್ಲಿ ಕರೆ ನೀಡಲಾಗುತ್ತಿದೆ. ಒಟ್ಟು ಹದಿನಾಲ್ಕು ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ಸಮಾವೇಶದಲ್ಲಿ ವಿಸ್ತೃತ ಚರ್ಚೆ ಮಾಡಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗಲೀಸಬೇಕೆಂದು ಪೀರ್‌ಸಾಬ್ ಮನವಿ ಮಾಡಿದರು. ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದುರುಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಜಮಾತೆ ಏ ಇಸ್ಲಾಮಿಕ್ ಹಿಂದ್ ರ್ಸಂಘಟನೆಯ ಗಂಗಾವತಿ ತಾಲೂಕಾ ಅಧ್ಯಕ್ಷರಾದ ಅಬ್ದುಲ್ ಖುದ್ದೂಸ್, ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್‌ನ ಆಸೀಫ್ ಅಲಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನಾಸೀರ್ ಆಹ್ಮದ್, ಪಗ್ರತಿ ಇತರರಿದ್ದರು.
K.28PÉÌ UÀAUÁªÀwUÉ £Àl ¥ÁæPÁ±ï gÉÊ
£ÀUÀgÀzÀ°è «zÁåyð AiÀÄĪÀ d£ÀgÀ ¸Áé©üªÀiÁ¤ ¸ÀªÀiÁªÉñÀ: ¦Ãgï¸Á¨ï