Breaking News

ವಿಜಯೇಂದ್ರ ಅವರ ಮಾತು ಖಂಡನೀಯ: ಮಾಯಪ್ಪ ಬಾಪಕರ

Vijayendra’s words are reprehensible: Mayappa is a sinner

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಮಖಂಡಿ: ರಾಜ್ಯದ ಏಕೈಕ ಮರಾಠಾ ಸಮಾಜದ ಸಚಿವ ಸಂತೋಷ ಲಾಡ್ ಅವರಿಗೆ ನಾಲಾಯಕ್ ಎಂದು ಕೀಳು ಭಾಷೆ ಪ್ರಯೋಗಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.‌ ವೈ. ವಿಜಯೇಂದ್ರ ಅತ್ಯಂತ ಹಗುರವಾಗಿ ಮಾತನಾಡಿದ್ದು, ಇದು ಅತ್ಯಂತ ಖಂಡನೀಯ, ಕೂಡಲೇ ಅವರು ಕ್ಷಮೆಯನ್ನು ಕೇಳಬೇಕು ಎಂದು ಮರಾಠಾ ಸಮಾಜದ ಮುಖಂಡ ಮಾಯಪ್ಪ ಮಾರುತಿ ಬಾಪಕರ ಹೇಳಿದರು.

ಸಾವಳಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಬಿ ವೈ ವಿಜಯೇಂದ್ರ ಅವರು ಸಂತೋಷ್ ಲಾಡ್ ಅವರಿಗೆ ಅವಾಚ ಶಬ್ದಗಳಿಂದ ಟೀಕೆ ಮಾಡಿದ್ದಾರೆ. ಬುದ್ಧ ಬಸವ ಅಂಬೇಡ್ಕರ್ ಅವರ ಪ್ರತಿಪಾದಕರು, ಸಚಿವ ಸಂತೋಷ್ ಲಾಡ ಅವರು ಇಡೀ ರಾಜ್ಯಕ್ಕೆ ಮಾದರಿಯಾಗುವ ಅಂತಹ ಶಾಸಕರು ನಿರಂತರವಾಗಿ ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಇಂತಹ ಅವ ಹೇಳನಕಾರಿ ಮಾತುಗಳನ್ನು ಉಗ್ರವಾಗಿ ಖಂಡಿಸಿಸುತ್ತೇವೆ. ಬಿ ಎಸ್ ಯಡಿಯೂರಪ್ಪ ಅವರಿಂದ ವಿಜಯೇಂದ್ರ ಅವರು ರಾಜಕೀಯ ಬಗ್ಗೆ ಕಲಿಯಬೇಕು ಕೂಡಲೇ ನಮ್ಮ ಸಚಿವ ಸಂತೋಷ್ ಲಾಡ್ ಅವರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಚಂದ್ರಶೇಖರ ಮಾದರ್, ರಾಜು ಭಜಂತ್ರಿ, ಗಜಾನನ್ ಮಾಳಿ, ಸಂಗಪ್ಪ ತೇಲಿ, ಉಮೇಶ್ ಮಾನೆ, ಶಿವನಿಂಗ ಬಂಡಿವಡ್ಡರ, ರಾಜು ಬಂಡಿವಡ್ಡರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *