I will work as your son and brother to the patients – Dr. Savadi

ಹಿಮೋಫಿಲಿಯಾ ಚಿಕಿಸ್ತಕರಿಗೆ ಉಪಯುಕ್ತ ಮಾಹಿತಿ ಕಾರ್ಯಕ್ರಮ..!
ಗಂಗಾವತಿ: 23ಇಂದು ಮಂಗಳವಾರ ವಿಶ್ವ ಹಿಮೋಫಿಲಿಯಾ ದಿನದ ಅಂಗವಾಗಿ ನಗರದ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಈಶ್ವರ ಶಿ. ಸವಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ, ನಂತರ ಮಾತನಾಡಿದ ಅವರು, ಹಿಮೋಫಿಲಿಯಾ ರೋಗಿಗಳು ತಾಲೂಕಿನದ್ಯಾಂತ 280 ಜನರಿದ್ದು, ಗಂಗಾವತಿ ಆಸ್ಪತ್ರೆ ಕೇವಲ ತಾಲೂಕ ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಅಷ್ಟೇ ಹೆಸರು ಮಾಡಲಿಲ್ಲ, ಈ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಕೂಡ ಹೆಸರು ಮಾಡಿದೆ, ಈ ಆಸ್ಪತ್ರೆ ಸಿಬ್ಬಂದಿಗಳು ತನ್ನದೇ ಸೇವೆ, ತನ್ನದೇ ಯೋಚನೆ, ತನ್ನದೇ ಯೋಜನೆ ಮೂಲಕ ಬಡವರ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆಯನ್ನು ನಮ್ಮ ಗಂಗಾವತಿ ಉಪ ವಿಭಾಗ ಆಸ್ಪತ್ರೆ, ದಿನದ 24 ತಾಸುಗಳ ಕಾಲ ಉಚಿತವಾಗಿ ಚಿಕಿತ್ಸೆಯನ್ನು ವಿವಿಧ ರೋಗಿಗಳಿಗೆ ಈಗಾಗಲೇ ನೀಡಲು ನಾವು ಸಿದ್ಧರಿದ್ದೇವೆ, ಇದರ ಸದುಪಯೋಗವನ್ನು ಪ್ರತಿಯೊಬ್ಬ ರೋಗಿಗಳು ಪಡೆದುಕೊಳ್ಳಬೇಕು, ಯಾವುದೇ ರೋಗವಿರಲಿ, ಯಾವುದೇ ಚಿಕಿತ್ಸೆ ಇರಲಿ ನಮ್ಮ ವೈದ್ಯಕೀಯ ತಂಡ ಸದಾ ತಮ್ಮ ಸೇವೆಗೆ ಸಿದ್ಧವಿದೆ, ನಮ್ಮಲ್ಲಿ ಅನಾಸೆಷನ್ ಡಾ, ಮಕ್ಕಳ ತಜ್ಞರು, ಕಿವಿ ಮತ್ತು ಗಂಟಲು, ದಂತ ವೈದ್ಯರು, ಕಣ್ಣಿನ ತಜ್ಞರು ಹೀಗೆ ಅನೇಕ ರೋಗಿಗಳಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳ ತಂಡ ನಿಮ್ಮ ಮನೆಯ ಮಗನಾಗಿ, ಸಹೋದರರಾಗಿ ಕೆಲಸ ಮಾಡಲು ಸದಾ ಸಿದ್ದರಿದ್ದೇವೆ ಎಂದು ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ ಹೇಳಿದರು.
ಎಲುಬು ಮತ್ತು ಕೀಲುಗಳ ಬಗ್ಗೆ ವಿವರವನ್ನು ನೀಡಲಾಯಿತು, ಮಧ್ಯಾಹ್ನ ಚಿಕ್ಕ ಮಕ್ಕಳ ಹಿಮೋಫೀಲಿಯಾ ಕುರಿತು ಮಕ್ಕಳ ತಜ್ಞರಾದ ಡಾ.ಅಂಬರೀಶ ಅರಳಿ 1 ಗಂಟೆಯವರೆಗೆ ಹಿಮೋಫೀಲಿಯ ಪೀಡಿತರಿಗೆ ಮಾಹಿತಿ ನೀಡಿದರು, ಹಿಮೋಫೀಲಿಯಾ ಶಿಬಿರದಲ್ಲಿ ಫಿಜಿಯೋ ಥೇರೇಪಿ ಕುರಿತು ನಯಿಮ್ ಮತ್ತು ದಂತ ವೈದ್ಯರಾದ ಡಾ.ವಿಜಯಕುಮಾರ್ ಹಲ್ಲಿನ ಬಗ್ಗೆ, ಚಿಕ್ಕ ಮಕ್ಕಳ ಅಲ್ಲಿನ ಸೂಕ್ಷ್ಮತೆಯ ಬಗ್ಗೆ, ಸ್ವಚ್ಛತೆಯ ಬಗ್ಗೆ, ರೋಗಿಗಳು ಮತ್ತು ಸಾರ್ವಜನಿಕರು ತಂಬಾಕ ಗುಟುಕವನ್ನು ಜಿಗಿಯುವುದರಿಂದ ಹಾಗೂ ಚಿಕ್ಕ ಮಕ್ಕಳು ಚಾಕ್ಲೇಟನ್ನು ಅತಿಯಾಗಿ ತಿನ್ನುವುದರಿಂದ ಏನೆಲ್ಲಾ ಕೆಟ್ಟ ಪರಿಣಾಮಗಳು ಬೀರುತ್ತವೆ ಎಂಬುವುದರ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಸಿ.ಹೆಚ್.ರಾಮಕೃಷ್ಣ, ಉಪಾಧ್ಯಕ್ಷ ಡಾ.ವಿ.ಎಲ್.ಪಾಟೀಲ್, ಕಾರ್ಯದರ್ಶಿ ಗಂಗಾಧರ, ಖಜಾಂಚಿ ಬಸವರಾಜ,ಸಿಬ್ಬಂದಿಗಳಾದ M.v.n.ಚೌದ್ರೀ ಸೇರಿದಂತೆ ಇತರರು ಇದ್ದರು