Condemning Neha’s murder, Bichakatti brothers and Muslim community support declaration of April-24 Gangavati bandh.
ಗಂಗಾವತಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾಳ ಹತ್ಯೆ ಖಂಡಿಸಿ ಏಪ್ರಿಲ್-೨೪ ರಂದು ಬುಧವಾರ ಗಂಗಾವತಿ ಬಂದ್ ಹಮ್ಮಿಕೊಂಡಿದ್ದು, ಈ ಬಂದ್‌ಗೆ ಮೊಹ್ಮದ್ ಅಲ್ತಾಫ್ ಹುಸೇನ್ ಬಿಚಕತ್ತಿ ಇವರು ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಕಟಣೆಯ ಮೂಲಕ ತಿಳಿಸಿದರು.
ಮುಂದುವರೆದು ಅವರು ಮಾತನಾಡಿ, ಹುಬ್ಬಳ್ಳಿಯ ಯುವತಿ ನೇಹಾ ಹತ್ಯೆಗೈದ ಫಯಾಜ್ ಎಂಬ ಯುವಕ ಇಬ್ಬರೂ ಬಾಳಿ ಬದುಕಬೇಕಾದ ವಯಸ್ಸು. ಈ ಯುವಕ ಯುವತಿಯನ್ನು ಹತ್ಯೆಗೈದು ಜೈಲುಪಾಲು ಆಗಿದ್ದಾನೆ. ಇವರಿಗೆ ನಿರ್ಧಾಕ್ಷಿಣ್ಯವಾಗಿ ಮರಣದಂಡನೆ ಆಗಬೇಕು ಎನ್ನುವುದು ನಮ್ಮ ವಾದವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮೊಹ್ಮದ್ ಉಸ್ಮಾನ ಬಿಚಕತ್ತಿ ಮಾತನಾಡಿ, ನೇಹಾ ವಿದ್ಯಾರ್ಥಿನಿಯ ಹತ್ಯೆ ತೀವ್ರ ಖಂಡನೀಯವಾದುದು. ಆದರೆ ಇತ್ತೀಚೆಗೆ ಇನ್ನೊಂದು ಪ್ರಕರಣವೇನೆಂದರೆ, ತುಮಕೂರಿನ ದೊಡ್ಡೆಕುಣಿ ಹತ್ತಿರ ಇರುವ ಮೆಟಗಳ್ಳಿ ಪೇಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ರುಕ್ಸಾನಾ ಹಾಗೂ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಯುವಕ ಪ್ರದೀಪನಾಯಕ ಆಕೆಯನ್ನು ಪ್ರೀತಿಸಿ, ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ, ಟಾವೆಲ್‌ನಿಂದ ಕತ್ತು ಹಿಸುಕಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ, ಆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇವನಿಗೂ ಮರಣದಂಡನೆ ವಿಧಿಸಬೇಕು. ಹಾಗೆಯೇ ಬಂಟ್ವಾಳದಲ್ಲಿ ಗೌರಿ ಎನ್ನುವ ಯುವತಿಯನ್ನು ಪದ್ಮರಾಜ್ ಎಂಬ ಯುವಕ ಪ್ರೀತಿ ಮಾಡಿದ್ದ. ಆಕೆಯನ್ನು ಮದುವೆಯಾಗು ಎಂದು ಪದೇ ಪದೇ ಕೇಳಿದ್ದರಿಂದ ಚೂರಿ ಇರಿದು ಕೊಲೆ ಮಾಡಿದ್ದಾನೆ. ಹೀಗೆ ಈ ಮೂರು ಪ್ರಕರಣಗಳ ಬಗ್ಗೆ ಅವಲೋಕಿಸಿದಾಗ ಮನುಷ್ಯ ತಾನು ಗಂಡಸು ಎನ್ನುವ ಅಟ್ಟಹಾಸ ಮೆರೆದು, ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದಾನೆ. ಇಲ್ಲಿ ಜಾತಿ ಧರ್ಮದ ವಿಷಯವಿಲ್ಲ, ಇಲ್ಲಿ ರಾಜಕೀಯ ಮಾಡುವ ಬದಲು ಕೊಲೆಗೈದ ವ್ಯಕ್ತಿ ಯಾರೇ ಆಗಿರಲಿ ಅವನಿಗೆ ಮರಣ ದಂಡನೆ ಶಿಕ್ಷ ಆಗಬೇಕು ಎನ್ನುವುದು ನನ್ನ ಮತ್ತು ನಮ್ಮ ಸಮುದಾಯದ ಗುರುಹಿರಿಯರು, ಯುವಕರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.