
ಗಂಗಾವತಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ರಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ
ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ
ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಹೇಳಿಕೆ ಜೆಡಿಎಸ್ ಪಕ್ಷ ಮಹಿಳೆಯರ ಕುರಿತು ಹೊಂದಿರುವ
ಅಭಿಪ್ರಾಯವಾಗಿದೆ ಕುಟುಂಬದ ಸಮಾಜದ ಕಣ್ಣನ್ನು ತರಿಸುವ ಮಹಿಳೆಯನ್ನು ಕುರಿತು ಈಗಾಗಲೇ
ದಾರಿ ತಪ್ಪಿರುವ ಕುಮಾರಸ್ವಾಮಿ ಅವರ ಹೇಳಿಕೆ ಖಂಡನೀಯ ಎಂದು ಸಿಐಟಿಯು ಜಿಲ್ಲಾಧ್ಯಕ್ಷ
ಹಾಗೂ ಸಿಪಿಐಎಂ ಪಕ್ಷದ ಮುಖಂಡ ಎಮ್ .ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ಸಾಮಾಜಿಕ ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಶಕ್ತಿ
ಯೋಜನೆಯನ್ನು ಮಹಿಳೆಯರಿಗಾಗಿ ಘೋಷಣೆ ಮಾಡಿದೆ ರಾಜ್ಯದ ಮಹಿಳೆಯರು ಉಚಿತವಾಗಿ ಕೆ ಎಸ್
ಆರ್ ಟಿ ಸಿ ಬಸ್ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಜೊತೆಗೆ ಪ್ರತಿ ತಿಂಗಳು 2000
ಹಣವನ್ನು ಪಡೆದು ತಮ್ಮ ಕುಟುಂಬದ ಖರ್ಚಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ
ಸಂದರ್ಭದಲ್ಲಿ ಬಿಜೆಪಿ ಸಹವಾಸ ಮಾಡಿರುವ ಕುಮಾರಸ್ವಾಮಿ ಮಹಿಳೆಯರ ಚರಿತ್ರೆಯ ತೇಜವುದೇ
ಮಾಡುವ ಹೇಳಿಕೆ ನೀಡಿರುವುದು ಖಂಡನೀಯ, ಪ್ರತಿ ಸಂದರ್ಭದಲ್ಲಿ ಮಹಿಳೆಯರ ಗೌರವಕ್ಕೆ
ಧಕ್ಕೆ ತರುವ ರೀತಿಯಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಜಾತ್ಯಾತೀತ ಎಂದು ಹೇಳುತ್ತಾ ಜಾತಿವಾದಿಗಳ ಜೊತೆಯಲ್ಲಿ ಲೋಕಸಭಾ ಚುನಾವಣೆಯ ಕೈಜೋಡಿಸಿ
ಕೋಮುವಾದಿ ಆಗಿರುವ ಕುಮಾರಸ್ವಾಮಿ ಮಹಿಳೆಯರ ಕುರಿತು ಆಡಿರುವ ಮಾತುಗಳನ್ನು ವಾಪಸ್
ಪಡೆದು ಬಹಿರಂಗ ಕ್ಷಮೆ ಯಾರಿಸಬೇಕು. ಜೊತೆಗೆ ಮಂಡ್ಯ ಹಾಸನ, ಕೋಲಾರದಲ್ಲಿ ಮಹಿಳೆಯರು
ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಳ್ಳಬೇಕು.
ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕುಮಾರಸ್ವಾಮಿ ಹೇಳಿಕೆಯಿಂದ ರಾಜ್ಯದ
ಮಹಿಳೆಯರ ಮಾನ ಹರಾಜಾಗಿದ್ದು ಇದನ್ನು ಜೆಡಿಎಸ್ ಮತ್ತು ಬಿಜೆಪಿ ಅವರು ಸಮರ್ಥಿಗಳು
ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ ಈ ಎರಡು ಪಕ್ಷಗಳಿಗೆ ಮಹಿಳೆಯರ ಮೇಲೆ
ಗೌರವವಿಲ್ಲ , ಹೇಳಲು ಮಾತ್ರ ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ಸ್ವರ್ಗ
ಇರುತ್ತದೆ ಅಥವಾ ದೇವರು ನೆಲೆಸುತ್ತಾರೆ ಎಂದು ಹೇಳುವ ಇವರು ಗ್ಯಾರಂಟಿ ಯೋಜನೆಗಳ
ಪಡೆದು ಮಹಿಳೆ ದಾರಿ ತಪ್ಪುತ್ತಿದ್ದಾಳೆ ಎಂದು ಹೇಳುತ್ತಿರುವುದು ನಾಟಕವಾಗಿದೆ.
ಆದ್ದರಿಂದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಪಕ್ಷದ ಅಭ್ಯರ್ಥಿಗಳನ್ನು
ತಿರಸ್ಕಾರ ಮಾಡುವ ಮೂಲಕ ತಮ್ಮ ಶಕ್ತಿಯನ್ನು ತೋರಿಸಬೇಕು. ನಮ್ಮ ಪಕ್ಷ ಈಗಾಗಲೇ
ಮನೆಮನೆಗೂ ಈ ವಿಷಯವನ್ನು ತಿಳಿಸಿ ಎನ್.ಡಿ.ಎ ಮೈತ್ರಿಕೂಟಕ್ಕೆ ಸೋಲಾಗುವಂತೆ
ಪ್ರತಿಭಟನೆ ನಡೆಸಲಾಗುತ್ತಿದೆ .
ರಾಜ್ಯದ ಮಹಿಳೆಯರ ಕ್ಷಮೆ ಕೇಳದಿದ್ದರೆ ಸಿಪಿಐ ಮತ್ತು ಸಂಘಟನೆಯಿಂದ ಪ್ರತಿಭಟನೆ
ಹಮ್ಮಿಕೊಳ್ಳಲಾಗುತ್ತದೆ ಎಂದು ನಿರುಪಾದಿ ಬೆಣಕಲ್ ತಿಳಿಸಿದ್ದಾರೆ
Kalyanasiri Kannada News Live 24×7 | News Karnataka
