
ಗಂಗಾವತಿ: ಉಡುಮಕಲ್ ಗ್ರಾಮದ ಪುರಾಣ ಪ್ರವಚನಕಾರಾದ ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಇವರು ಕಳೆದ ಮಾರ್ಚ್-೩೧ ರಂದು ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಪುರಾಣ ಪ್ರವಚನಕಾರರಿಗೆ ಪುರಾಣ ಪ್ರವೀಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ತಾಲೂಕಿನ ಬಸಾಪಟ್ಟಣ ಗ್ರಾಮದ ಶ್ರೀ ಶರಣಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಬಸನಗೌಡ್ರು ಮಾತನಾಡಿ, ಶ್ರೀ ಶರಣಬಸವೇಶ್ವರ ೩೧ನೇ ವರ್ಷದ ಮಹಾರಥೋತ್ಸವದ ಪ್ರಯುಕ್ತ, ಶರಣಬಸವೇಶ್ವರರ ಪುರಾಣ ಪ್ರವಚನ ಸೇವೆ ನಡೆದಿದ್ದು, ಪುರಾಣದಲ್ಲಿ ೨೧ ದಿನಗಳ ಪುರಾಣ ಪ್ರವಚನ ಹಾಗೂ ಸಂಗೀತ ಸೇವೆ ನೀಡಿದ ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಉಡುಮಕಲ್ ಕಳೆದ ವರ್ಷಗಳಿಂದ ನಡೆಯುತ್ತಿರುವ ಪುರಾಣ ಪ್ರವಚನದಲ್ಲಿ ಸೇವೆ ನೀಡುತ್ತಾ ಬಂದಿದ್ದು, ಇದರ ಸವಿನೆನಪಿಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.ಶಿವಲಿಂಗಯ್ಯ ಶಾಸ್ತ್ರಿಗಳು ಯವರು ನಾಡಿನಾಧ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಪುರಾಣ ಪ್ರವಚನ ಜೊತೆಗೆ ಹಲವಾರು ನಾಟಕ ಮತ್ತು ಶಾಲಾ ಕಾಲೇಜುಗಳಲ್ಲಿ ತಮ್ಮ ಸಂಗೀತ ಸೇವೆಯನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಹಲವಾರು ಸಂಗೀತದ ಬಗ್ಗೆ ಹಲವಾರು ಗ್ರಾಮದಲ್ಲಿ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಗೀತ ಕ್ಷೇತ್ರಕ್ಕೆ ಸಾಧನೆ ಮಾಡಿದ್ದಾರೆ. ಆ ಮೂಲಕ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ, ಕುಟುಂಬದ ಗೌರವವನ್ನು ಎತ್ತಿಹಿಡಿದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭಧಲ್ಲಿ ಸಮಿತಿಯ ಸದಸ್ಯರಾದ ಮಲ್ಲಯ್ಯಸ್ವಾಮಿ ನೆಲ್ಲೂರು, ಮಲ್ಲಪ್ಪ ಬಾಳೆಕಾಯಿ, ವಿರುಪಾಕ್ಷಿಗೌಡ, ಭೀಮಣ್ಣ ಮಾಸ್ತರ, ತಿಮ್ಮಣ್ಣ, ಶಿವಮೂರ್ತಯ್ಯಸ್ವಾಮಿ, ಚನ್ನಯ್ಯಸ್ವಾಮಿ, ಮಾದಿನಾಳ ಗೌಡ್ರು, ಪುರಾಣ ಪ್ರವಚನಕಾರರಾದ ಶಿವಲಿಂಗಯ್ಯ ಶಾಸ್ತ್ರಿ, ಗವಾಯಿಗಳಾದ ಡಾ.ತಿಮ್ಮಣ್ಣ ಭೀಮರಾಯ, ದೇವಸ್ಥಾನದ ಅರ್ಚಕರಾದ ಮಾರ್ಕಂಡಯ್ಯಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.