ಚೆಕ್ ಪೋಸ್ಟ್ ಗಳಲ್ಲಿ ಕಟ್ಟನಿಟ್ಟಿನ ಕ್ರಮಕೈಗೊಳ್ಳಿ
ಜಿ.ಪಂ. ಸಿಇಓ ರಾಹುಲ್ ರತ್ನಂ ಪಾಂಡೆಯ ಸೂಚನೆ

ಗಂಗಾವತಿ : ತಾಲೂಕಿನಲ್ಲಿ ತೆರೆಯಲಾದ ಮೂರು ಚೆಕ್ ಪೊಸ್ಟ್ ಗಳಿಗೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಬುಧವಾರ ಅವರು ಭೇಟಿ ಚೆಕ್ ಪೊಸ್ಟ್ ಗಳಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ಚಿಕ್ಕಜಂತಗಲ್, ಕಡೇಬಾಗಿಲು, ಜಂಗಮರ್ ಕಲ್ಗುಡಿ ಗ್ರಾಮದ ಚೆಕ್ ಪೋಸ್ಟ್ ಗಳಲ್ಲಿನ ಕುಡಿವ ನೀರು, ಬ್ಯಾಟರಿ, ವಿದ್ಯುತ್, ಗಾಳಿ ವ್ಯವಸ್ಥೆ ಪರಿಶೀಲಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲ ವಾಹನಗಳ ತಪಾಸಣೆ ನಡೆಸಬೇಕು ಎಂದು ಸಿಬ್ಬಂದಿಗಳಿಗೆ ಜಿ.ಪಂ. ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಸೂಚನೆ ನೀಡಿದರು.
ಈ ವೇಳೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಆರ್ ಡಬ್ಲ್ಯುಎಸ್ ಎಇಇ ವಿಜಯ ಕುಮಾರ್, ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್,
ಆನೆಗೊಂದಿ, ಜಂಗಮರ್ ಕಲ್ಗುಡಿ, ಚಿಕ್ಕಜಂತಗಲ್ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿ ಚೆಕ್ ಪೋಸ್ಟ್ ಸಿಬ್ಬಂದಿಗಳು ಹಾಜರಿದ್ದರು.
.
Kalyanasiri Kannada News Live 24×7 | News Karnataka
