Breaking News

ಕ್ಷೇತ್ರದ ಜನರೆ ನಮ್ಮ ಕುಟುಂಬಕ್ಕೆ ಅಧಿಕಾರ ಅಪ್ಪ ರಾಜೂಗೌಡರ ಪುಣ್ಯಸ್ಮರಣೆಯಲ್ಲಿ :ಮಾಜಿ ಶಾಸಕ ಆರ್ ನರೇಂದ್ರ ಅಭಿಮತ .

People of Constituency, power to our family in memory of Father Raju Gowda: Former MLA R Narendra Abhima.

ಜಾಹೀರಾತು


ವರದಿ : ಬಂಗಾರಪ್ಪ ಸಿ .
ಹನೂರು:ನಮ್ಮ ಕುಟುಂಬವು ಸದಾ ಕ್ಷೇತ್ರದ ಜನರ ನೋವು ನಲಿವು ಗಳಲ್ಲಿ ಭಾಗಿಯಾಗಿದೆ ಅದೇ ರೀತಿಯಲ್ಲಿ ನಮ್ಮ ಕ್ಷೇತ್ರದ ಕಾರ್ಯಕರ್ತ ಬಂಧುಗಳು ನಮ್ಮ ಕುಟುಂಬದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿ ಮಾಜಿ ಸಚಿವ ದಿ. ಜಿ ರಾಜುಗೌಡ ರವರ 20ನೇ ಸ್ಮರಣೆ ಕಾರ್ಯಕ್ರಮದ ಸಮಯದಲ್ಲಿ ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು .
ತಂದೆಯವರ ಪುಣ್ಯ ಸ್ಮರಣ ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರನ್ನೂದ್ದೇಶಿಸಿ ಮಾತನಾಡಿದ
ಮಾಜಿ ಶಾಸಕರಾದ ಆ‌ರ್.ನರೇಂದ್ರ ಅವರು ಜಿವಿ ಗೌಡರಾದಿಯಾಗಿ ನಮ್ಮ ತಂದೆ ಯವರಾದ ದಿ. ರಾಜುಗೌಡರ ಸಹಿತ ಕ್ಷೇತ್ರಕ್ಕೆ ಶಾಸಕರಾಗಿ ಸಚಿವರಾಗಿ ಹನೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರು ಶಾಸಕರಾಗಿದ್ದ ಸಮಯದಲ್ಲಿ ಕರ್ನಾಟಕದಲ್ಲಿ ಮಾದರಿ ಮಾಡಲು ಹನೂರು ವಿಧಾನಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿಸಲು ಪಣತೊಟ್ಟ ಕ್ಷೇತ್ರದ ಉದ್ದಗಲಕ್ಕೂ ಬಡವರಿಗೆ ಸಾವಿರಾರು ನಿವೇಶನಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ ರಾಜೂಗೌಡರು ಮನೆ ಕಟ್ಟಿಸಿ ಕೊಟ್ಟಿದ್ದರು.
ಗಡಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ
ನಮ್ಮ ಕ್ಷೇತ್ರದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ವಾಗಲಿ ಎಂಬ ದೃಷ್ಟಿಯಿಂದ ಶಿಕ್ಷಣಕ್ಕೆ ಒತ್ತು ನೀಡಿ ನೂರಾರು ಶಾಲೆಗಳನ್ನು ಮಂಜೂರು ಮಾಡಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಕಲ್ಪಿಸಿಕೊಟ್ಟಿದ್ದರು. ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದ ರೈತರಿಗೆ ಉಪಯೋಗವಾಗಲೆಂದು ಗುಂಡಾಲ್ ಜಲಾಶಯ, ಉಡುತೊರೆ ಜಲಾಶಯ, ಕಿರೆಪಾತಿ, ಗೋಪಿನಾಥಂ, ಹೂಗ್ಗಂ ಜಲಾಶಯ ಸೇರಿದಂತೆ ಹಲವಾರು ಜಲಾಶಯಗಳನ್ನು ನಿರ್ಮಾಣ ಮಾಡಿದ್ದಾರೆ. ಇದೇ
ಕ್ಷೇತ್ರಕ್ಕೆ
ನಾನು ಸಹ 15 ವರ್ಷಗಳ ಕಾಲ ಶಾಸಕನಾಗಿ ನಮ್ಮ ತಂದೆಯವರ ಹಾದಿಯ ಲ್ಲಿಯೇ ಕ್ಷೇತ್ರವನ್ನು ಬೆಳೆಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಸರ್ಕಾರದವತಿಯಿಂದ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ. ಹನೂರು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ನಮ್ಮ ತಂದೆಯವರು ಕನಸು ಕಂಡಿದ್ದರು ಅವರ ಕನಸನ್ನು ನಾನು ನನಸು ಮಾಡಿದ್ದೇನೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹನೂರು ಕ್ಷೇತ್ರದ ಜನರಿಗೆ ಸ್ಪಂದಿಸುತ್ತಿದ್ದೇನೆ. ಪ್ರತಿ ಬಾರಿಯು ಚುನಾವಣೆಯಲ್ಲಿ ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಮಾಡಿ ಅವರ ಹೆಗಲಿಗೆ ಹೆಗಲು ಕೊಟ್ಟು ಕಷ್ಟ ಸುಖಗಳಲ್ಲಿ ಸ್ಪಂದಿಸುತ್ತಿದ್ದೇನೆ. ನಮ್ಮ ಕುಟುಂಬದ ಮೇಲೆ ಹನೂರು ಕ್ಷೇತ್ರದ ಜನತೆ ಇಟ್ಟಿರುವ ನಂಬಿಕೆಗೆ ಎಂದೂ ದ್ರೋಹ ಬಗೆಯುವುದಿಲ್ಲ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾಜಿ ಸಚಿವ ದಿ.ರಾಜುಗೌಡರ ನೂರಾರು ಅಭಿಮಾನಿಗಳು ಸಮಾಧಿ ಜಾಗಕ್ಕೆ ಬಂದು ಪೂಜೆ ಸಲ್ಲಿಸಿದರು.
ಪುಣ್ಯ ಸ್ಮರಣ ಸಮಯದಲ್ಲಿ ಮಾಜಿ ಶಾಸಕ ಆರ್ ನರೇಂದ್ರ ರವರ ಪತ್ನಿ ಆಶಾ ನರೇಂದ್ರ,ಯುವ ಮುಖಂಡರಾದ ನವನೀತ್ ಗೌಡ, ಪುತ್ರಿ ನಿಖಿತಾಗೌಡ, ಎಂ ಸಿ ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ . ಹಿರಿಯ ವಕೀಲರಾದ ಎಸ್ ನಾಗರಾಜುರವರ ಕುಟುಂಬ ವರ್ಗ ,ಜಗದಿಶ್ ,ಸತೀಶ್ ,ನಟರಾಜು ,ಚೇತನ್ ದೊರೈರಾಜು ,ರಾಮಲಿಂಗಮ್ ,
ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಗಿರೀಶ್, ಹರೀಶ್, ಸುದೇಶ್ ಮಾಜಿ ಉಪಾಧ್ಯಕ್ಷ ಬಸವರಾಜು.ಮುಖಂಡರಾದ ಹೊನ್ನೇಗೌಡ. ಮಾದೇಶ್, ಎಲ್ ರಾಜೇಂದ್ರ, ಕೊಪ್ಪಳಿ ಮಹಾದೇವ ನಾಯಕ . ಎಲ್ ನಾಗೇಂದ್ರ, ಲಿಂಗರಾಜು, ಮಾದೇವ, ರಾಮಲಿಂಗಣ್ಣ, ಅರುಣ್.ಸಿದ್ದಲಿಂಗೇಗೌಡ, ಮಂಗಲ ಪುಟ್ಟರಾಜು, ವಿಧಾನಸಭಾ ಕ್ಷೇತ್ರದ ರಾಜೂಗೌಡರ ಅಭಿಮಾನಿಗಳು ದೊಡ್ಡಿಂದುವಾಡಿ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.