Breaking News

ಹೇಳಿದಂತೆ ನಡೆಯುವ ಪಕ್ಷ ಕಾಂಗ್ರೇಸ್ ಪಕ್ಷ ನಿಯೋಜಿತ ಅಭ್ಯರ್ಥಿ ಕೆ.‌ರಾಜಶೇಖರ ಹಿಟ್ನಾಳ

As mentioned, the running party is Congress Party nominated candidate K. Rajasekhara Hitna

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕುಷ್ಟಗಿ: ಹೇಳಿದಂತೆ ನಡೆಯುವ ಪಕ್ಷ ಕಾಂಗ್ರೇಸ್ ಪಕ್ಷ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಪರ ಪಕ್ಷವಾಗಿದೆ ಎಂದು ಕಾಂಗ್ರೇಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ.‌ರಾಜಶೇಖರ ಹಿಟ್ನಾಳ ಹೇಳಿದರು.

ಪಟ್ಟಣದ ಅಮರೇಗೌಡ ಪಾಟೀಲ್ ಬಯ್ಯಾಪೂರು ನಿವಾಸದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜಿಪಿಯವರು ಕಾರ್ಪೋರೆಟ್ ಕಂಪನಿಗಳನ್ನು ಉದ್ದಾರ ಮಾಡಿದ್ದಾರೆ 

 ಆದರೆ ಜನ ಸಾಮಾನ್ಯರನ್ನು ಅಭಿವೃದ್ಧಿ ಮಾಡುವದಿಲ್ಲ. ನಮ್ಮ‌ ಹಿರಿಯ ನಾಯಕರು ನನ್ನ ಮೇಲೆ ಅಭಿಮಾನ ಇಟ್ಟು ಪಕ್ಷದ ಟಿಕೇಟ್ ನೀಡಿದ್ದಾರೆ. 

ನಿಮ್ಮ ಮತಗಳನ್ನು ನನಗೆ ಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕು. 2014 ರಲ್ಲಿ ಬಸವರಾಜ ಹಿಟ್ನಾಳ ನನ್ನ ತಂದೆಯವರು ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಅದರಂತೆ ನಾನು ಸಹ 

2019 ರಲ್ಲಿ  ಕಡಿಮೆ‌ ಅಂತರದಿಂದ ಸೋತಿದ್ದೇನೆ. ಈ ಸಲ ಆಗಾ ಆಗುವುದು ಬೇಡ. ನನ್ನ ಗೆಲ್ಲಿಸಬೇಕು ಎಂದರು.

ಬಸವರಾಜ ರಾಯರಡ್ಡಿ ಮಾತನಾಡಿ,   ನಮ್ಮ ದೇಶಕ್ಕೆ ಒಳ್ಖೆಯದು ಮಾಡಲು ಕಾಂಗ್ರೆಸ್ ಬೆಂಬಲಿಸಬೇಕು.

ಎಲ್ಲರೂ ಪರೀಕ್ಷೆಗೆ‌ ಒಳಪಟ್ಟಿದ್ದಾರೆ.‌ ದೇಶದಲ್ಲಿ  ಪಾರ್ಟಿ ಅಂದರೆ ನೀತಿ, ತತ್ವಗಳು ಇರುತ್ತವೆ ನಾವುಗಳು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.‌ದೇಶದಲ್ಲಿ ಆಣೆಕಟ್ಟು ಕಟ್ಟಿದವರು ಕಾಂಗ್ರೆಸ್ ನವರು.‌ ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ.

ದೇಶದ ಮುಂದಿನ ಆರ್ಥಿಕತೆ ಉಳಿಯಬೇಕಾದರೆ ದೇಶದಲ್ಲಿ ಕಾಂಗ್ರೇಸ್ ಉಳಿಯಬೇಕು.

ಜನರನ್ನು ಬೇದರಿಸುವ ಮೂಲಕ‌ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಕಾಂಗ್ರೇಸ್ ಬದ್ದತೆಯ ಪಕ್ಷ.

ರಾಜಶೇಖರ ಹಿಟ್ನಾಳಗೆ ಆಶೀರ್ವಾದ ಇರಲಿ ಬಹುಮತ ಅಂತರದಿಂದ ಗೆಲ್ಲಿಸಬೇಕು ಎಂದರು.

ಅಮರೇಗೌಡ ಪಾಟೀಲ್ ಬಯ್ಯಾಪೂರು ಮಾತನಾಡಿ,   

ಕಾಂಗ್ರೇಸ್ ‌ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ವನ್ನು ತಂದು ಕೊಟ್ಟಿದೆ.‌ಸಾಮಾಜಿಕ ನ್ಯಾಯವನ್ನು ನೀಡಿದೆ. ಕಾಂಗ್ರೇಸ್ ಪಕ್ಷದ ಸಾಧನೆಗಳನ್ನು ಮೆಲುಕು ಹಾಕಬೇಕು. ಆಡಳಿತದ ದೃಷ್ಟಿಯಿಂದ ಕಾಂಗ್ರೇಸ್ ನನ್ನು ಬೆಂಬಲಿಸಬೇಕು. ಸರ್ವರಿಗೂ ಸಮಪಾಲು, ಸಮಬಾಳು ಕೊಡುವ ಪಕ್ಷ ಕಾಂಗ್ರೇಸ್ ಪಕ್ಷ ಎಂದರು.

ಶಿವರಾಜ ತಂಗಡಗಿ ಮಾತನಾಡಿ, ಎಲ್ಲಾ ಕಡೆ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತ‌‌ಬಂದಿದೆ. ಈ ಚುನಾವಣೆ ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ ನಡೆಯುತ್ತಿದೆ. ಸಾಮಾನ್ಯ ಜನರ, ಬಡವರ, ರೈತರಪರವಾದ ಪಕ್ಷ ಕಾಂಗ್ರೇಸ್ ಪಕ್ಷ.‌ ಸುಳ್ಳು ಹೇಳುವವರ ಸಂಖ್ಯೆ ಹೆಚ್ಚಳವಾಗಿದೆ‌. ಬಿಜೆಪಿ ಮಿತ್ರರು ತಮ್ಮ‌ಕೆಲಸದ ಮುಗಿದ ನಂತರ ನಮ್ಮ‌ಕುತ್ತಿಗೆ ಕೋಯುತ್ತಾರೆ. ‌ ಸುಳ್ಳು ಬಿಜೆಪಿ ಯವರ ಮನೆ ದೇವರು. ಅತಿ ಹೆಚ್ಚು ಮೋದಿ ಮೋದಿ‌ ಎಂದು ಹೋಗಳಿದ ಸಂಗಣ್ಣ ಅವರಿಗೆ ಬಿಜೆಪಿಯವರು ಇಟ್ಟ ಬಿಟ್ಟರು.  ಅತಿ ಮೋದಿ ಹೊಗಳ ಬ್ಯಾಡೋ ಸಂಗಣ್ಣ ಸಾಹೇಬರು ಎಂದು ಹೇಳಿದ್ದೆ ಅವರು ಮೋದಿ  ಹೋಗಳಿದಕ್ಕೆ  ಅವರಿಗೆ ಇಟ್ಟ ಬಿಟ್ಟರು. ಬಿಜೆಪಿಯವರು ಸಂವಿಧಾನವನ್ನು ತಿದ್ದುವ ಮೂಲಕ ಅವರು ರಾಜನೀತಿ ಅನುಸರಿಸುತ್ತಾರೆ ಆಗಾಗಿ ಅವರಿಗೆ ಬೆಂಬಲಿಸಬೇಡಿ.‌

ಅಂಜನಾದ್ರಿಗೆ 100 ಕೋಟಿ ರೂ ಕೊಟ್ಟಿದ್ದು ಕಾಂಗ್ರೇಸ್ ನವರು.  ಸುಳ್ಳು ಹೇಳುವದರಲ್ಲಿ ಬಿಜೆಪಿಯವರು ನಿಸ್ಮಿರು. ‌ಕುಷ್ಟಗಿ ಯವರು ಹೆಣದ ಮೇಲೆ ರೊಕ್ಕ ಮಾಡಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ವಿರುದ್ದ ಕಿಡಿ ಕಾರಿದರು. ಮಂತ್ರಿ ಇರಬಹುದು ನಾನು ಆದರೆ ಅಮರೇಗೌಡ್ರು, ರಾಯರಡ್ಡಿ ಸಾಹೇಬರು ಮಾರ್ಗದರ್ಶನದಲ್ಲಿ‌‌ ಕೆಲಸ ಮಾಡುವೆ‌ ಎಂದರು.

ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ,  ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು, ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ಹಾಗೂ ಮಾಜಿ ಶಾಸಕ‌ ಹಸನಸಾಬ ದೋಟಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಚಂದ್ರಶೇಖರ ನಾಲತವಾಡ, ಕೃಷ್ಣ ಇಟ್ಟಂಗಿ, ಮಾಲತಿ ನಾಯಕ, ಬಸವರಾಜ, ಡಾ. ಶ್ಯಾಮಿದ್ ಸಾಬ ದೋಟಿಹಾಳ, ವಸಂತ ಕುಷ್ಟಗಿ, ದೊಡ್ಡಯ್ಯ ಗದ್ದಡಕಿ, ಶರಣಪ್ಪ ಪರಕಿ, ಅಮರೇಗೌಡ ಪಾಟೀಲ್ ವಕೀಲರು, ಜಿಪಂ‌ಮಾಜಿ ಅಧ್ಯಕ್ಷ ಪ್ರಕಾಶ ರಾಠೋಡ್, ಶಂಕರಗೌಡ, ಮಹಾಂತೇಶ ಅಗಿಸಿಮುಂದಿನ್, ಶಕುಂತಲಾ‌ ಸೇರಿದಂತೆ ಕಾರ್ಯಕರ್ತರು ಇದ್ದರು.

About Mallikarjun

Check Also

screenshot 2025 09 06 17 53 55 14 6012fa4d4ddec268fc5c7112cbb265e7.jpg

ಲಿಂ ಹಾನಗಲ್ ಕುಮಾರಶಿವಯೋಗಿಗಳ 158ನೇ ಜಯಂತಿ  ಕಾರ್ಯಕ್ರಮದ ಆಹ್ವಾನ ಕರಪತ್ರ ಬಿಡುಗಡೆ

Invitation leaflet released for the 158th Jayanti program of Lim Hanagal Kumara Shivayogi   ಸೆ. …

Leave a Reply

Your email address will not be published. Required fields are marked *