Breaking News

ಡಾ. ಮಾತೆ ಮಹಾದೇವಿ ಜಯಂತಿ, 5ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ

Dr. Mata Mahadevi Jayanti, 5th Lingaikya Commemoration Program

ಜಾಹೀರಾತು

ಗಂಗಾವತಿ, 18: ರವಿವಾರ ನಗರದ ಬಸವಮಂಟಪದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದವರು ಅಯೋಜಿಸಿದ್ದ ಡಾ. ಮಾತೆ ಮಹಾದೇವಿಯವರ 78ನೇ ಜಯಂತಿ, 5ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ದಲ್ಲಿ ಪೂಜ್ಯ ಬಸವರಾಜ ವೆಂಕಟಪೂರ ಶರಣರು ಮಾತನಾಡಿ ವಿಶ್ವದ ಮೊದಲ ಮಹಿಳಾ ಜಗದ್ಗುರು ಲಿಂ. ಜಗದ್ಗುರು ಡಾ.ಮಾತೆ ಮಹಾದೇವಿ ಅವರು ನಾಡಿನಾದ್ಯಂತ ಬಸವಾದಿ ಶರಣರು ಮಾಡಿ ರುವ ಕ್ರಾಂತಿಯ ಬಗ್ಗೆ ಜತೆಗೆ ಶರಣರು ರಚಿಸಿದ ಮಾನವೀಯ ಮೌಲ್ಯವುಳ್ಳ ವಚನ ಸಾಹಿತ್ಯ ಮತ್ತು ಬಸವ ತತ್ವ ಮನೆ-ಮನೆಗೆ ತಲುಪಿಸಿದ್ದಾರೆ. ಹೀಗಾಗಿ ಅವರು ಮಾಡಿದ ಕಾರ್ಯ, ಸಾಧಿಸಿದ ಸಾಧನೆ ಎಂದಿಗೂ ಮರೆಯುವಂತಿಲ್ಲ ಎಂದರು.

ನಗರದ ಬಸವ ಬಸವ ಮಂಟಪದಲ್ಲಿ ಆಯೋ ಜಿದ್ದ ಕಾರ್ಯಕ್ರಮ ವನ್ನು ಮಾತಾಜಿಯವರ ಭಾವಚಿತ್ರ ಕ್ಕೆ ಪೋಜೆ ಪರಮ ಪೂಜ್ಯ ಶ್ರೀ ನಿರಂಜನ ಸ್ವಾಮೀಜಿ ಸಲ್ಲಿಸಿ ಮಾತನಾಡಿ 12ನೇ ಶತಮಾನದ ನಂತರ ಬಸವ ತತ್ವಕ್ಕೆ ಜೀವ ತುಂಬಿದ ಶ್ರೇಯಸ್ಸು ಲಿಂ. ಡಾ.ಮಾತೆ ಮಹಾದೇವಿ ತಾಯಿ ಅವರಿಗೆ ಸಲ್ಲುತ್ತದೆ. ಶರಣರ ಆಶಯದಂತೆ ಸಮಾಜದಲ್ಲಿನ ಮೂಢ ನಂಬಿಕೆಗಳನ್ನು ತೆಗೆದು ಭಕ್ತರಲ್ಲಿ ಬಸವ ತತ್ವದ ಪ್ರಜ್ಞೆ ಬಿತ್ತಿದ್ದರು. ನಮ್ಮ ಜೀವನದಲ್ಲಿ ಉಸಿರು ಇರೋವರೆಗೂ ಮಾತಾಜಿ ಅವರು ಕಲಿಸಿಕೊಟ್ಟ ಬಸವತತ್ವಶಾಶ್ವತವಾಗಿಉಳಿಸಿಕೊಳ್ಳಬೇಕು.ಅದರಂತೆಯೇ ಸಾಗಬೇಕುಎಂದರು. ಮಾತನಾಡಿದ ಅವರು, ಡಾ.ಮಾತೆ ಮಹಾದೇವಿ ತಾಯಿ ಅವರು ಬಸವ ತತ್ವ, ಶರಣ ಸಾಹಿತ್ಯ, ಶರಣರ ಬಗ್ಗೆ ಅಪಾರವಾದ ಗೌರವವಿ ಟ್ಟು ಕೊಂಡು ಬಾಳಿ ಬದುಕಿದರು. ಎಂದರು.

ಷಟಸ್ಥಲ ಧ್ವಜಾರೋಹಣ ಹಂದ್ರಾಳದ ಶರಣೆ ಶಿವ ಗಂಗಮ್ಮ ನವರು ನೆರವೇರಿಸಿದರು.

ಶರಣ ಕೊರ್ಲಳ್ಳಿ ವೀರಣ್ಣ ಲಿಂಗಾಯತ ಗಣ ನಾಯಕರು ಬಸವ ಧರ್ಮ ಪೀಠ ಇವರು ಮಾತನಾಡಿ

ಮಾತಾಜಿ ಸಾಧನೆ ಎಲ್ಲರಿಗೂ ಪ್ರೇರಣೆ ಮಾತಾಜೀಯವರ ನಡೆದು ಬಂದ ದಾರಿ ಮತ್ತು ಸಮಾಜದಲ್ಲಿ ಗುರು ಲಿಂಗ ಜಂಗಮಕ್ಕೆ ಸರಿಯಾದ ಅರ್ಥ ತಿಳಿಸಿ ಕೊಟ್ಟಿದ್ದು ಮಾತಾಜೀಯವರು ಎಂದು ಬಣ್ಣಿಸಿದರು, ರಾಜ್ಯ ಸರಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ಮೂಲಕ ಈ ಧರ್ಮಕ್ಕೆ ಕೇಂದ್ರ ಸರಕಾರ ಮಾನ್ಯತೆ ನೀಡಿ ಮುದ್ರೆ ಒತ್ತಬೇಕು ಎಂದರು.

ಶರಣೆ ಚನ್ನಬಸಮ್ಮಕಂಪ್ಲಿ,ಹೆಚ್ ಲಕ್ಷ್ಮಿ ಗುರು ಬಸವ ಪೂಜೆ ನೆರವೇರಿಸಿದರು,

ಈಸಂದರ್ಭದಲ್ಲಿಕೊಪ್ಪಳ ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಸತೀಶ್ ಮಂಗಳೂರು, ಲಿಂಗನೌಡರು, ಬಳ್ಳಾರಿ ಹಂದ್ರಾಳದ ಶರಣರಾದ ಬಸನಗೌಡ ಕಾರೆಕಾಲ್, ಸಿಂಧನೂರು ರಾಷ್ಟ್ರೀಯ ದಳದ ಕಾರ್ಯದರ್ಶಿ ಮಹಾದೇವಪ್ಪ ಚಿಂಚರಕಿ, ಕಂಪ್ಲಿಯ ಪಾಮಯ್ಯ ಶರಣರು, ಗಂಡ್ಲು ವದ್ದೀಗೆರಿಯ ರುದ್ರಪ್ಪ ಮತ್ತು ಸಂಗಡಿಗರು, ಹಾಗೂ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ, ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಾಲ, ಉಪಾಧ್ಯಕ್ಷರಾದ ಕೆ ವೀರೇಶ್ , ರಾಯಮ್ಮ ಕೆ ತಿಪ್ಪಮ್ಮ ರಾಮಸಾಗರ, ಇತರರುಇದ್ದರು.

ಪ್ರಸಾದ ಸೇವೆಯನ್ನು ಚನ್ನಬಸಮ್ಮಕಂಪ್ಲಿ ನಡೆಸಿಕೊಟ್ಟರು, ಸ್ವಾಗತವನ್ನು ಶರಣೆ ಬಸವ ಜ್ಯೋತಿ ಬಿ ಲಿಂಗಾಯತರವರು, ನಿರೂಪಣೆಯನ್ನು ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ವೀರೇಶ ಅಸರೆಡ್ಡಿ, ಶರಣು ಸಮರ್ಪಣೆಯನ್ನು ಶರಣ ಮಲ್ಲಿಕಾರ್ಜುನ ನಿರ್ಲೂಟಿ ಸಾ ಅರಳಹಳ್ಳಿಯವರು ಮಾಡಿದರು.

ಓಂಇವರು ಮಾತಾಜೀಯವರ ನಡೆದು ಬಂದ ದಾರಿ ಮತ್ತು ಸಮಾಜದಲ್ಲಿ ಗುರು ಲಿಂಗ ಜಂಗಮಕ್ಕೆ ಸರಿಯಾದ ಅರ್ಥ ತಿಳಿಸಿ ಕೊಟ್ಟಿದ್ದು ಮಾತಾಜೀಯವರು ಎಂದು ಬಣ್ಣಿಸಿದರು, ದಿವ್ಯ ಸಾನಿಧ್ಯವಹಿಸಿ ಮಾತಾಡಿದ ಪರಮ ಪೂಜ್ಯ ಶ್ರೀ ನಿರಂಜನ ಸ್ವಾಮೀಜಿ ಚರ ಜಂಗಮರು ನಾನು ತ್ಯಾಗ ಜೀವನ ನಡೆಸಲು ಮಾತಾಜೀಯವರ ತರಂಗಿಣಿ ಗ್ರಂಥವು ಕಾರಣ ಎಂದು ತಿಳಿಸಿದರು, ನೇತೃತ್ವ ವಹಿಸಿದ್ದ ಪೂಜ್ಯ ಬಸವರಾಜ ವೆಂಕಟಪೂರ ಶರಣರು ಮಾತಾಡಿ ಮಾತಾಜೀಯವರು ಬಸವ ಧರ್ಮಕ್ಕೆ ಸಿಕ್ಕ ಅಮೂಲ್ಯ ರತ್ನ ಎಂದು ಮನತುಂಬಿ ಮಾತಾಜೀಯವರನ್ನು ಕೊಂಡಾಡಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವು ನಡೆಯಬೇಕು ಆಗ ಮಾತ್ರ ಮಾತಾಜೀಯವರ ಸಂಕಲ್ಪ ಶಕ್ತಿಗೆ ನಾವು ಗೌರವ ನೀಡಿದಂತೆ ಎಂದು ನುಡಿದರು, ಶ್ರೀ ಗುರು ಬಸವ ಲಿಂಗಾಯ ನಮಃ 866666

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.