Various beneficiaries selected under housing scheme construct housing on time: Legislator M R Manjunath

ವರದಿ : ಬಂಗಾರಪ್ಪ ಸಿ .
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ
ಲೋಕ್ಕನಹಳ್ಳಿ, ಚಿಕ್ಕಮಾಲಾಪುರ, ಸೇರಿದಂತೆ ಇನ್ನಿತರ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಯ್ಕೆಯಾದ ವಸತಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವನ್ನು ಶಾಸಕ ಎಂ.ಆರ್. ಮಂಜುನಾಥ್ ವಿತರಣೆ ಮಾಡಿದರು.
ಲೊಕ್ಕನಹಳ್ಳಿಯ ಹಾಲಿನ ಕೇಂದ್ರದ ಆವರಣದಲ್ಲಿ, ಬಸವ ವಸತಿ, ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ (ಗ್ರಾಮೀಣ) ವಸತಿ ಯೋ ಜನೆಯಡಿ ಫಲಾನುಭ ವಿಗಳನ್ನು ಗುರುತಿಸಲಾಗಿರುವವರಿಗೆ ಆದೇಶ ಪತ್ರಗಳನ್ನು ನೀಡಿದ ನಂತರ ಮಾನಾಡಿದ ಶಾಸಕರು ಈಗಾಗಲೇ ಸರ್ಕಾರಗಳು ಗುಡಿಸಲು ಮುಕ್ತ ರಾಜ್ಯವಾಗಿಸುವ ಗುರಿಯೊಂದಿಗೆ
ಅನೇಕ ವಸತಿ ಸೌಲಭ್ಯಗಳನ್ನು ನೀಡುತ್ತಾ ಬಂದಿವೆ. ಕ್ಷೇತ್ರಕ್ಕೆ ಇನ್ನೂ 20 ರಿಂದ 25 ಸಾವಿರ ಮನೆಗಳ ಅವಶ್ಯಕತೆ ಗುಡಿಸಲು ಮುಕ್ತವಾಗಿಸಲು ನಾವೇಲ್ಲರು ಪಣ ತೊಡೋಣ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಾ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ವಸತಿ ರಹಿತರನ್ನು ಗುರುತಿಸಿ ಸೌಕರ್ಯ ಒದಗಿಸಲಾಗುವುದು. ಅಲ್ಲದೆ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಪುರ, ಗರಿಕೆಕಂಡಿ ಮುಖ್ಯ ರಸ್ತೆಗೆ 25 ಕೋಟಿ ವೆಚ್ಚದ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು ಇನ್ನುಳಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳನ್ನು ಗುಂಡಿ ಮುಕ್ತ ವಾಗಿಸಲಾಗುವುದು ಎಂದರು .
ಇದೇ ಸಮಯದಲ್ಲಿ ಸರ್ಕಾರದಿಂದ ಬಿಡುಗಡೆಗೊಂಡ ನೀರಿನ ಸಮಸ್ಯೆಗಳನ್ನು ನೀವಾರಿಸಲು ಪ್ರತಿ ಪಂಚಾಯತಿ ಯಿಂದ ದೂರು ನೀಡುವ ದೂರವಾಣಿಯನ್ನು ಸಾರ್ವಜನಿಕರಿಗೆ ನೀಡಲಾಯಿತು . 08224220130..8277506000
ಇದೇ ಸಂದರ್ಭದಲ್ಲಿ ತಾಪಂ ಇಒ ಉಮೇಶ್, ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒ, ಅರ್ಹ ವಸತಿ ಫಲಾನುಭವಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.