Koppal Taluk Guarantee Committee: ADC issued order letter
ಕೊಪ್ಪಳ: ಕರ್ನಾಟಕ ಸರಕಾರದ ಬಹುಮುಖ್ಯ ಸಮಾಜಮುಖಿ ಯೋಜನೆಯಾದ ಗ್ಯಾರಂಟಿ ಸ್ಕೀಂಗಳ ಸಮರ್ಪಕ ಅನುಷ್ಠಾನಕ್ಕೆ ಸರಕಾರೇತರ ಸಮಿತಿ ರಚನೆ ಮಾಡಿದ್ದು ಮೂರು ಹಂತದ ಕಮಿಟಿಯಲ್ಲಿ ಕೊಪ್ಪಳ ತಾಲೂಕ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರತಿಯನ್ನು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಸದಸ್ಯರಿಗೆ ಕೊಟ್ಟರು.
ನಗರದ ಜಿಲ್ಲಾಡಳಿತ ಭವನದ ತಮ್ಮ ಕಛೇರಿಯಲ್ಲಿ ಮುನಿರಾಬಾದಿನ ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ಸ್ಯಾಮ್ಯುಯೇಲ್ ಅಧ್ಯಕ್ಷತೆಯಲ್ಲಿ ಒಟ್ಟು ೧೬ ಜನ ಸಮಿತಿಯನ್ನು ರಚಿಸಿ ಸರಕಾರದ ಮಾನ್ಯತೆಯೊಂದಿಗೆ ಆದೇಶ ನೀಡಲಾಗಿದೆ.
ರಾಜ್ಯದ ಜನತೆಗೆ ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷಿ÷್ಮÃ, ಮತ್ತು ಯುವ ನಿಧಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದು, ಸದರಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿರುತ್ತದೆ.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರತ್ಯಾಯೋಜಿಸಿ ಆದೇಶಿಸಲಾಗಿರುತ್ತದೆ. ಅದರಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಈ ಕುರಿತಂತೆ ಆದೇಶ ಹೊರಡಿಸಲು ಸೂಚಿಸಿದ್ದು, ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಎರಡು ವರ್ಷದ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿ ಆದೇಶಿಸಿದ್ದಾರೆ.
ಸಮಿತಿಗೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಣ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದು, ದೇವರಾಜ ನಡುವಿನಮನಿ, ರಾಮಣ್ಣ ಚೌಡ್ಕಿ ಹಟ್ಟಿ, ರಮೇಶ ಹ್ಯಾಟಿ ಭಾಗ್ಯನಗರ, ಜ್ಯೋತಿ ಮಂಜುನಾಥ ಗೊಂಡಬಾಳ, ಲತಾ ಗವಿಸಿದ್ದಪ್ಪ ಚಿನ್ನೂರ, ಅನ್ನದಾನಸ್ವಾಮಿ ಸಾಲಿಮಠ ಬೆಟಗೇರಿ, ಪರಶುರಾಮ ಕೊರವರ, ಅಶೋಕ ಗೋರಂಟ್ಲಿ, ಮಹಾಂತೇಶ ಹಾನಗಲ್, ಮಂಜುನಾಥ ಅಂಗಡಿ, ಎ. ಧರ್ಮರಾಜರಾವ್, ಆನಂದಪ್ಪ ಕಿನ್ನಾಳ, ಲಕ್ಷö್ಮಣ ಡೊಳ್ಳಿನ್ ಮತ್ತು ಅನ್ವರ ಹುಸೇನ್ ಗಡಾದ ಅವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ.
ಸದರಿ ಸಮಿತಿಯು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದು, ತೊಂದರೆಗಳಿದ್ದಲ್ಲಿ ಅಧಿಕಾಋಇಗಳ ಮೂಲಕ ಸರಿಪಡಿಸುವ ಮತ್ತು ಅರ್ಹತೆಯಿದ್ದೂ ಯೋಜನೆ ಲಭಿಸದಿದ್ದಲ್ಲಿ ಅವರಿಗೆ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಎಡಿಸಿ ಸಾವಿತ್ರಿ ಬಿ. ಕಡಿ ಅವರಿಂದ ಅಧ್ಯಕ್ಷ ಬಾಲಚಂದ್ರನ್, ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ, ದೇವರಾಜ ನಡುವಿನಮನಿ ಅದೇಶ ಸ್ವೀಕರಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಎಸ್.ಟಿ. ಘಟಕ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಇದ್ದರು.