Increased police security in Kuvempu Barangay, Siddapur Barangay, Jayanagar, Satyanarayanapet areas of Gangavati and forced to open outpost.
ಗಂಗಾವತಿ: ನಗರದ ಕುವೆಂಪು ಬಡಾವಣೆ, ಸಿದ್ದಾಪುರ ಬಡಾವಣೆ, ಜಯನಗರ, ಸತ್ಯನಾರಾಯಣಪೇಟೆ ಸೇರಿದಂತೆ ಪ್ರತಿಷ್ಠಿತ ಏರಿಯಾಗಳ ನಿವಾಸಿಗಳು ಕಳೆದ ಹಲವು ದಿನಗಳಿಂದ ಮನೆಗಳ್ಳರ, ದರೋಡೆಕೋರರ, ಸಮಾಜಘಾತುಕ ಕೃತ್ಯವನ್ನು ಎಸಗುವ ಹಾಗೂ ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿರುವ ಜನರುಗಳಿಂದ ತೊಂದರೆ ಅನುಭವಿಸಲಾಗುತ್ತಿದ್ದಾರೆ ಎಂದು ಕುವೆಂಪು ಬಡಾವಣೆಯ ನಿವಾಸಿ ನಾಗರಾಜ ಎಸ್. ಗುತ್ತೇದಾರ ಆತಂಕ ವ್ಯಕ್ತಪಡಿಸಿದರು.
ಅವರು ಮಾರ್ಚ್-೧೪ ಸಂಜೆ ಪೊಲೀಸ್ ಇಲಾಖೆಯ ಭದ್ರತೆಗಾಗಿ ಒತ್ತಾಯಿಸಿ ಡಿ.ವೈ.ಎಸ್.ಪಿ ಯಾದ ಶ್ರೀ ಸಿದ್ಧಲಿಂಗಪ್ಪಗೌಡ ಪಾಟೀಲ್‌ರವರಿಗೆ ಮನವಿ ಪತ್ರ ನೀಡಿ ಮಾತನಾಡಿದರು. ಸದರಿ ಕುವೆಂಪು ಬಡಾವಣೆ, ಸಿದ್ದಾಪುರ ಬಡಾವಣೆ ಮತ್ತು ಜಯನಗರ ಏರಿಯಾಗಳು ನಗರದ ಪ್ರತಿಷ್ಠಿತ ವ್ಯಾಪಾರಿಗಳು, ಉದ್ಯಮದಾರರು, ಅಧಿಕಾರಿ ವರ್ಗದ ಜನರಿಂದ ಕೂಡಿದ್ದು, ಕಳೆದ ಹಲವು ವರ್ಷಗಳಿಂದ ಕಳ್ಳತನದಂತಹ ಪ್ರಕರಣಗಳು ಇಂತಹ ಸಮುದಾಯವನ್ನೇ ದೃಷ್ಟಿಯಾಗಿಸಿಕೊಂಡು ನಡೆದಿದ್ದು ತಮ್ಮ ಇಲಾಖೆಯ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಕಾರಣ ಸದರಿ ಏರಿಯಾಗಳಿಗೆ ಗಸ್ತಿನ ಸಂಖ್ಯೆಯನ್ನು ಹೆಚ್ಚು ಮಾಡಿ ವರ್ಷಪೂರ್ತಿ ಭದ್ರತೆಯನ್ನು ನಿರಂತರವಾಗಿ ನೀಡಬೇಕಾಗಿದೆ.
ಅಲ್ಲದೇ ಮೇಲ್ಕಾಣಿಸಿದ ಏರಿಯಾಗಳ ಮಧ್ಯೆ ಶಾಶ್ವತ ಪೊಲೀಸ್ ಔಟ್‌ಪೋಸ್ಟ್ನ್ನು ತೆರೆಯುವುದು ತೀರಾ ಅವಶ್ಯವಿರುತ್ತದೆ. ಈ ಹಿಂದೆ ಮಳೆಮಲ್ಲೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಧಕ್ಕೆ ತರುವ ಪ್ರಯತ್ನಗಳಾದಾಗ ತಾತ್ಕಾಲಿಕ ಔಟ್‌ಪೋಸ್ಟ್ ಮಂಜೂರಾಗಿ ಕಾರ್ಯನಿರ್ವಹಿಸಿದ್ದು, ಅದು ಕಾರಣಾಂತರಗಳಿAದ ಮುಂದುವರೆಯಲಿಲ್ಲ. ಕಾರಣ ಗುಡ್ಡಕ್ಕೆ ಹೊಂದಿಕೊAಡು ಬಡಾವಣೆಗಳು, ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ಟೌನ್‌ಹಾಲ್ ಹಾಗೂ ಪ್ರಮುಖ ದೇವಸ್ಥಾನಗಳು ಇರುವುದರಿಂದ ಪೊಲೀಸ್ ಭದ್ರತೆಯ ಅವಶ್ಯಕತೆ ತೀರಾ ಅವಶ್ಯವಾಗಿರುತ್ತದೆ. ಆ ಕಾರಣಕ್ಕೆ ಪೊಲೀಸ್ ಔಟ್‌ಪೋಸ್ಟ್ಗೆ ಅಗತ್ಯವಿರುವ ಅಗತ್ಯವಿರುವ ಸೂಕ್ತ ನಿವೇಶನವಾಗಲಿ, ಕಟ್ಟಡವಾಗಲಿ ಅಗತ್ಯಬಿದ್ದಲ್ಲಿ ಬಡಾವಣೆಯ ನಿವಾಸಿಗಳಾದ ನಾವುಗಳು ಮಂಜೂರು ಮಾಡಿಸಲು ಶ್ರಮವಹಿಸಿ ಕಾರ್ಯನಿರ್ವಹಿಸಲು ಸಿದ್ಧರಿದ್ದು, ತಾವುಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪೊಲೀಸ್ ಔಟ್‌ಪೋಸ್ಟ್ನ್ನು ಕೂಡಲೇ ತೆರೆಯುವುದು ಅವಶ್ಯವಾಗಿದೆ. ಕುವೆಂಪು ಬಡಾವಣೆಯ ೪ ಅಡ್ಡರಸ್ತೆಗಳ ಆರಂಭದಲ್ಲಿ ಸಿ.ಸಿ ಕ್ಯಾಮೇರಾಗಳನ್ನು ಅಳವಡಿಸುವ ಮೂಲಕ ಕಾನೂನುಬಾಹಿರ ಕೃತ್ಯಗಳಾಗದಂತೆ ತಡೆಯಲು ಕ್ರಮವಹಿಸುವುದು ಸೂಕ್ತವೆನಿಸುತ್ತದೆ. ಜಯನಗರ ಮುಖ್ಯರಸ್ತೆಯಲ್ಲಿ ದಿನನಿತ್ಯ ಕಾನೂನುಬಾಹಿರ ದ್ವಿಚಕ್ರವಾಹನ ವ್ಹೀಲಿಂಗ್ ಮಾಡುತ್ತಾ, ಪುಂಡಾಟಿಕೆ ನಡೆಸುತ್ತಿದ್ದು, ಶಾಲಾ ಮಕ್ಕಳಿಗೆ ತೊಂದರೆ ನೀಡುವುದು, ಹಿರಿಯ ನಾಗರಿಕರಿಗೆ ತೊಂದರೆ ಆಗುವಂತೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುವುದು ನಿರಂತರವಾಗಿ ನಡೆಯುತ್ತಿದ್ದು, ಕುವೆಂಪು ಬಡಾವಣೆಯ ಮುಖ್ಯರಸ್ತೆಯಲ್ಲಿ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ನಿಯೋಜಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಮೇಲ್ಕಾಣಿಸಿದ ಎಲ್ಲಾ ಅಂಶಗಳು ಬಡಾವಣೆಯ ನಿವಾಸಿಗಳ ಭದ್ರತೆಗೆ ತೀರಾ ಅವಶ್ಯವಾಗಿರುವುದರಿಂದ ಮತ್ತು ಈ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಆಗಾಗ ಲೋಪವಾಗುತ್ತಿರುವುದರಿಂದ ತಕ್ಷಣವೇ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು ಬಡಾವಣೆಯ ನಿವಾಸಿಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಪತ್ರ ನೀಡುವುದರ ಮೂಲಕ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಗಾಳಿ ಶಿವಪ್ಪ, ಬಾಹುಬಲಿ, ಶೇಖರಗೌಡ್ರು, ದೇವಣ್ಣ, ಪ್ರೆಮೂರ್ತಿ ವಕೀಲರು, ಚಂದ್ರಶೇಖರ ವಕೀಲರು, ಹನುಮೇಶ ಮುಷ್ಟೂರ, ಚಂದ್ರಶೇಖರ ಆದಾಪುರ, ವಿನಾಯಕ ರಾಯಕರ್, ಡಿ. ಅಶೋಕ, ದೊಡ್ಡಯ್ಯ ಜನಾದ್ರಿ, ವೈಕುಂಠ ದರೋಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.