Breaking News

ಜೆ.ಡಿ.ಎಸ್ ಪಕ್ಷದ ಕೊಪ್ಪಳ ಜಿಲ್ಲಾ ರೈತ ವಿಭಾಗದ ನೂತನ ಅಧ್ಯಕ್ಷರಾಗಿ ಬಸವರೆಡ್ಡಿ ಕೇಸರಹಟ್ಟಿ ನೇಮಕ

Basavareddy Kesarhatti has been appointed as the new president of Koppal District Farmers Division of JDS Party

ಜಾಹೀರಾತು

.

ಗಂಗಾವತಿ: ಸುಮಾರು ವರ್ಷಗಳಿಂದ ಜೆ.ಡಿ.ಎಸ್ ಪಕ್ಷದಲ್ಲಿ ಎಲೆಮರಿ ಕಾಯಿಯಂತೆ ದುಡಿದು, ಪ್ರಾಮಾಣಿಕವಾಗಿ, ನಿಷ್ಠೆಯಿಂದ ಪಕ್ಷದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನನ್ನನ್ನು ಗುರುತಿಸಿ ಪಕ್ಷದಲ್ಲಿ ಕೊಪ್ಪಳ ಜಿಲ್ಲೆಯ ರೈತ ವಿಭಾಗದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಬಸವರೆಡ್ಡಿ ಕೇಸರಹಟ್ಟಿ ಸಂತಸ ವ್ಯಕ್ತಪಡಿಸಿದರು.
ರೈತ ಕುಟುಂಬದಿAದ ಬಂದ ನನಗೆ ಜೆ.ಡಿ.ಎಸ್ ಪಕ್ಷದ ಜಿಲ್ಲಾ ರೈತವಿಭಾಗದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದಕ್ಕೆ ಪಕ್ಷದ ರಾಷ್ಟಾçಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡ ಅಪ್ಪಾಜಿರವರಿಗೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಕುಮಾರಸ್ವಾಮಿ ಅಣ್ಣನವರಿಗೆ, ಶ್ರೀಮತಿ ಅನಿತಾ ಕುಮಾರಸ್ವಾಮಿ ಅಕ್ಕನವರಿಗೆ, ನಿಖಿಲ್ ಕುಮಾರಸ್ವಾಮಿ ಅಣ್ಣನವರಿಗೆ, ಸನ್ಮಾನ್ಯ ಶ್ರೀ ಹೆಚ್.ಡಿ ರೇವಣ್ಣರವರಿಗೆ. ಶ್ರೀಮತಿ ಭವಾನಿ ಅಕ್ಕನವರಿಗೆ, ಶ್ರೀ ಪ್ರಜ್ವಲ್ ರೇವಣ್ಣರವರಿಗೆ. ಶ್ರೀ ಸಿ.ವಿ ಚಂದ್ರಶೇಖರ ಅಣ್ಣನವರಿಗೆ, ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ್ ಎಸ್. ಭೂಮರೆಡ್ಡಿ ಅಣ್ಣನವರಿಗೆ, ರಾಜ್ಯ ಯುವ ಕಾರ್ಯದರ್ಶಿಯಾದ ಶ್ರೀ ರಾಜು ನಾಯಕ್ ಅಣ್ಣನವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ನನ್ನನ್ನು ಪಕ್ಷ ಗುರುತಿಸಿ ಜವಾಬ್ದಾರಿ ಸ್ಥಾನ ನೀಡಿದ್ದಕ್ಕೆ ಪಕ್ಷದ ಜಿಲ್ಲಾ ಘಟಕದ ಹಾಗೂ ರಾಜ್ಯ ಘಟಕದ ಸಲಹೆ, ಸೂಚನೆ ಮೇರೆಗೆ ಪಕ್ಷಕ್ಕೆ ಹಾಗೂ ರೈತರಿಗೆ ಒಳ್ಳೆಯ ಕೆಲಸಗಳಾಗುವಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.