Villagers struggle for treatment in the hospital that opens without a doctor.
ವರದಿ : ಬಂಗಾರಪ್ಪ ಸಿ.
ಹನೂರು :ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಅನಾರೋಗ್ಯಕ್ಕೀಡಾದರೆ ಸಮಸ್ತೆಗಳಾಗಬಾರದೆಂದು ಸರ್ಕಾರವು ಲಕ್ಷಾಂತರ ಹಣ ವ್ಯಯಿಸುವಾಗ ಕೂಡ್ಲೂರಿನ ಗ್ರಾಮದ ವ್ಯಕ್ತಿಯು ಅನಾರೋಗ್ಯದ ನಿಮಿತ್ತವಾಗಿ ಆಸ್ಪತ್ರೆಗೆ ದಾಖಲಾಗಲು ಬಂದಾಗ ರಾತ್ರಿ ವೇಳೆ ಬಾಗಿಲು ಮುಚ್ಚಿದ ಪರಿಣಾಮದಿಂದ ಹೊಟ್ಟೆ ನೋವಿನಿಂದ ನರಳಿ ಚಿಕಿತ್ಸೆ ಸಿಗದೇ ಪರದಾಡಿದ ಘಟನೆ ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಗೌಡೆಗೌಡ ತಿಳಿಸಿದರು .
ಹನೂರು ಪಟ್ಟಣದಲ್ಲಿ ಮಾದ್ಯಮದವರ ಜೋತೆಯಲ್ಲಿ ಮಾತನಾಡಿದ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಇಂತಹ ಘಟನೆ ಜರುಗಿದೆ. ಕೂಡ್ಲೂರು ಗ್ರಾಮದ ಅಣ್ಣಮಲೈ ಎಂಬ ನಿವಾಸಿ ಹೊಟ್ಟೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಾಗ ರಾತ್ರಿ ಬಾಗಿಲು
ಮುಚ್ಚಿದ ಪರಿಣಾಮ ಅತ್ತ ಚಿಕಿತ್ಸೆಯು ಸಿಗದೇ ಇತ್ತ
ತುರ್ತು ವಾಹನವು ಇಲ್ಲದೆ ಫೋನಿನ ನೆಟ್ವರ್ಕ್ ಸಹ ಸಿಗದಿದ್ದರ ಪರಿಣಾಮವಾಗಿ ಸಮಸ್ಯೆಯೆಗೆ ಪರಿಹಾರ ಸಿಗದೇ ಪರದಾಡಿದ್ದಾನೆ ಈ ಕೂಡಲೆ ಸಂಭಂದಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ವಿಷಯವಾಗಿ ಮಾತನಾಡಿದ ಗ್ರಾಮದ ರೈತ ಮುಖಂಡ ವೆಂಕಟೇಶ್ ನಮ್ಮದು ಗಡಿಗ್ರಾಮ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಜೆ 5ಕ್ಕೆ ಬಾಗಿಲು ಮುಚ್ಚಿದರೆ ಮರುದಿನ ಬೆಳಗ್ಗೆ 10 ಗಂಟೆಗೆ ಮಾತ್ರ ತೆರೆಯುತ್ತಾರೆ. ಇಲ್ಲಿ ವೈದ್ಯಾಧಿಕಾರಿಗಳು ಇಲ್ಲ, ಆರೋಗ್ಯ ಸಿಬ್ಬಂದಿ ಸಹ ಇಲ್ಲದೆ ಬಾಗಿಲು ಮುಚ್ಚುತ್ತಿದ್ದು ರಾತ್ರಿ ವೇಳೆ ಈ ಭಾಗದಲ್ಲಿ ಕಾಡುಪ್ರಾಣಿಗಳ
ಹಾವಳಿಯಿಂದ ಇಲ್ಲಿನ ಗ್ರಾಮಸ್ಥರು ತುರ್ತು ಸಂದರ್ಭದಲ್ಲಿ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ ಕೂಡಲೇ ಸಂಬಂಧಪಟ್ಟ ಹಿರಿಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಗಡಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದರು . ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರೈತ ಮುಖಂಡರು ಹಾಜರಿದ್ದರು .