First female Jagadguru Lim. Remembering Dr. Mathe Mahadevi Mataji on the occasion of her 77th Jayanti ಡಾ...
Day: March 12, 2024
Election of Officers for Mining Society ಗಂಗಾವತಿ : ಯಾವುದೇ ಒಂದು ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಸಂಘಟಿತವಾಗಬೇಕಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶರಣಪ್ಪ ನಾಗೋಜಿ ಅವರು ಹೇಳಿದರು. ನಗರದ ಹಿರೇ ಜಂತಕಲ್ ನ ಬಸವ ಭವನದಲ್ಲಿ ಸೋಮವಾರ ಆಯೋಜಿಸಿದ ತಾಲೂಕ ಗಾಣಿಗ ಸಮಾಜದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸದೃಢ ಸಮಾಜ ನಿರ್ಮಾಣಕ್ಕೆ ಸಂಘಟನೆ ಅಗತ್ಯವಾಗಿದ್ದು, ಅನ್ಯ ಸಮುದಾಯವನ್ನು ಗೌರವಿಸುತ್ತಾ ಸಂಘಟಿತರಾಗಬೇಕು. ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಗಾಣಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಂಘಟನೆ ಇಲ್ಲವಾದ್ದರಿಂದ ಸಮಾಜ ಅಭಿವೃದ್ಧಿ ಹೊಂದುತ್ತಿಲ್ಲ. ಸಂಘಟನೆ ಅಭಾವದಿಂದ ಯುವ ಸಮೂಹ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷ ಣಿಕವಾಗಿ ಮುಂದುವರಿಯುತ್ತಿಲ್ಲ. ಸಮಾಜದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು. ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ತೋಟಪ್ಪ ಕಾಮನೂರು ಅವರು ಮಾತನಾಡಿ, ಸಮಾಜದ ಮುಖಂಡರು ಸಂಘಟನೆಯಲ್ಲಿ ತೊಡಗಬೇಕು. ಆಯ್ಕೆ ಆದ ಪದಾಧಿಕಾರಿಗಳು ಸಮಾಜ ಅಭಿವೃದ್ಧಿ ಪೂರಕ ಕಾರ್ಯಗಳನ್ನು ಮಾಡಬೇಕು. ಸರಕಾರದಿಂದ ಸಮಾಜಕ್ಕೆ ಸಿಗುವ ಸೌಲಭ್ಯಗಳನ್ನು ಸಮುದಾಯದ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು. ಈ ವೇಳೆ ಜಿಲ್ಲಾ ಘಟಕದ ಗಾಣಿಗ ಸಮಾಜದ ಗೌರವಾಧ್ಯಕ್ಷ ರುದ್ರಮುನಿ ಗಾಳಿ, ಅಖಿಲ ಭಾರತ ಗಾಣಿಗ ಸಮಾಜದ ಉಪಾಧ್ಯಕ್ಷ ಸಂಗನಗೌಡ ಪಾಟೀಲ್, ಅಖಿಲ ಭಾರತ ಗಾಣಿಗ ಸಮಾಜದ ಕಾರ್ಯದರ್ಶಿ ವೀರಣ್ಣ ಗಾಣಿಗೇರ್, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಉಮೇಶ ಸಜ್ಜನ, ಸಮಾಜದ ಹಿರಿಯರು ಹಿರೇಬಸಪ್ಪ ಸಜ್ಜನ, ಜಿ.ಶಿವಲಿಂಗಪ್ಪ, ವೈ.ಸೋಮಪ್ಪ, ಸಂಗಪ್ಪ ಸಜ್ಜನ, ಮಹಾಂತೇಶ ಸಜ್ಜನ ಕನಕಗಿರಿ, ಅಶೋಕ ಸಜ್ಜನ ಖಾಧಿ ಭಂಡಾರ ಗಂಗಾವತಿ, ಗವಿಸಿದ್ದಪ್ಪ ಸಜ್ಜನ ಹೇರೂರ, ಶ್ರೀದೇವಿ ನಾಗರಾಜ, ಶರಣಪ್ಪ ಕಲ್ಗುಡಿ ಸಿ.ಬಿ.ಎಸ್. ಶಿವಪುತ್ರಪ್ಪ ಗುಡ್ಡದ ಕ್ಯಾಂಪ್, ಹಾಗೂ ಗಾಣಿಗ ಸಮಾಜದ ನಗರ ಘಟಕದ ಪದಾಧಿಕಾರಿಗಳು ಇದ್ದರು. ತಾಲೂಕು ಅಧ್ಯಕ್ಷರಾಗಿ ಶಿವಪುತ್ರಪ್ಪ ನೇಮಕ ಪದಾಧಿಕಾರಿಗಳ ನೇಮಕ: ಗಂಗಾವತಿ ತಾಲೂಕಾ ಗಾಣಿಗ ಸಮಾಜದ ನೂತನ ಗೌರವಾಧ್ಯಕ್ಷರಾಗಿ ಶ್ರೀದೇವಿ ನಾಗರಾಜ, ತಾಲೂಕಾಧ್ಯಕ್ಷರಾಗಿ ಶಿವಪುತ್ರಪ್ಪ ಗುಡ್ಡದಕ್ಯಾಂಪ್ ವಡ್ಡರಹಟ್ಟಿ, ಉಪಾಧ್ಯಕ್ಷರಾಗಿ ಶರಣಪ್ಪ ಕಲ್ಗುಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ ಮಾಲಿಪಾಟೀಲ್ ಜಂಗಮರ ಕಲ್ಗಡಿ, ಖಜಾಂಚಿ ಚಂದ್ರಪ್ಪ ಸೊಕ್ಕೆ, ಸದಸ್ಯರಾಗಿ ಮಲ್ಲಿಕಾರ್ಜುನ ಜೋಗಿನ ಜ.ಕಲ್ಗುಡಿ, ಶರಣಬಸವ ಹುನಗುಂದ ಗಂಗಾವತಿ, ಗವಿಸಿದ್ದಪ್ಪ ಸಜ್ಜನ ಹೇರೂರು, ಶರಣಪ್ಪ ಕುದುರಕೊಟಗಿ ಬಸಾಪಟ್ಟಣ, ನಾಗೇಶ ಹುಣಿಸಿಹಾಳ ಹಣವಾಳ, ಬಸಪ್ಪ ಬಚ್ಚಿನಾಳ ಅಯೋದ್ಯ, ಶಂಕ್ರಪ್ಪ ಕುರಹಟ್ಟಿ ಶರಣಬಸವೆಶ್ವರ ನಗರ, ಭುವನೇಶಪ್ಪ ಹಿರೆಜಂತಕಲ್, ವಿಜಯಕುಮಾರ ಕುಷ್ಟಗಿ, ಎಂ.ನಾಗರಾಜ ಹಿರೇಜಂತಕಲ್, ಶಶಿಕುಮಾರ ಗಡ್ಡಿ, ಮುದಿಯಪ್ಪ ಬಾಬುರೆಡ್ಡಿಕ್ಯಾಂಪ್, ನಾಗರಾಜ ಗಡ್ಡಿ ಹಿರೇಜಂತಕಲ್, ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ರತ್ನಮ್ಮ ಚೆನ್ನಬಸಪ್ಪ ಹಿರೇಜಂತಕ್ ಇವರನ್ನು ಆಯ್ಕೆ ಮಾಡಲಾಯಿತು.
Villagers struggle for treatment in the hospital that opens without a doctor. ವರದಿ : ಬಂಗಾರಪ್ಪ ಸಿ.ಹನೂರು :ಗ್ರಾಮೀಣ...
Another name for development is Dru Vanarayan, who is first in the commemoration of the year, Narendra...
There is a need to inculcate humane values in the minds of children – Netrajaguru’s Math ಗಂಗಾವತಿ:ಮಕ್ಕಳಲ್ಲಿ...
Ishtalinga is the symbol of the universe ಯಲಬುರ್ಗಾ ತಾಲೂಕಿನ ಶರಣ ಗ್ರಾಮ ಗುಳೆ ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ರಾಷ್ಟ್ರೀಯ...
Against Tipatur MLA by Lokeshwar fans and Congress workers displeasure ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್ ಗುಡ್ಡದಪಾಳ್ಯ ತಾತನ ಮನೆ...











