Free compulsory education for girls: Pallavi Adapura Abhimat
ನವಲಿ: ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಗ್ರಾಮ ಪಂಚಾಯತ ನವಲಿ ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮಿಣಾಭಿವೃದ್ಧಿ ಸಂಸ್ಥೆ, ಮಹಿಳಾ ಸಬಳಿಕರಣ ಸಂಸ್ಥೆ ಮಹಿಳಾ ಸಬಲೀಕರಣ ಸಂಸ್ಥೆ ಕೊಪ್ಪಳ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಸಹ ಭಾಗಿತ್ವದೊಂದಿಗೆ ಹಮ್ಮಿಕೊಂಡಿದ್ದ ಅಂತರಾಷ್ಟೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಬಳಿಕರಣ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಕುಮಾರಿ ಪಲ್ಲವಿ ಆದಾಪೂರ ಇಂದಿನ ಆಧುನಿಕ ಯುಗದಲ್ಲು ಗ್ರಾಮಿಣ ಪ್ರದೇಶದ ಮಹಿಳೆಯರು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಹೊಂದಬೇಕಾಗಿದೆ. ಒಂದು ಗ್ರಾಮ ಅಭಿವೃದ್ದಿ ಹೊಂದಬೇಕಾದರೆ ಆ ಗ್ರಾಮದ ಮಹಿಳೆ ಸಬಲತೆ ಹೊಂದಿದಾಗ ಮಾತ್ರ ಸಾಧ್ಯ ನಗರ ಪ್ರದೇಶದ ಮಹಿಳೆಯರು ಸಮಾನ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ, ಹೆಣ್ಣು ಮಕ್ಕಳಿಗೆ ಸರಕಾರಗಳು ಖಡ್ಡಾಯವಾದ ಉಚಿತ ಶಿಕ್ಷಣ ನೀಡಬೇಕು ಮತ್ತು ಸ್ವಯಂ ಉದ್ಯೋಗ ತರಬೇತಿಗಳನ್ನು ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು ನಂತರ ಸೇಲ್ಕೂ ಫೌಂಡೆಶನ್ ನ ಸಿದ್ದನಗೌಡ ಪಾಟೀಲ್ ಮಾತನಾಡಿ ಸೋಲಾರ್ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು, ನವಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಈರಣ್ಣ ನಕ್ರಳ್ಳಿ ಮಾತನಾಡಿ ಮಹಿಳೆಯರಿಗೆ ಗ್ರಾಮ ಪಂಚಾಯತಿಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು,
ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸಂಗೀತಾ ಈಡಿಗೇರ್ ಕಾರ್ಯದರ್ಶಿ ಶ್ರೀಮತಿ ಸುಮಾ ಹಿರೇಮಠ, ಅಂಗನವಾಡಿ ಹಿರಿಯ ಕಾರ್ಯಕರ್ತರಾದ ಶ್ರೀಮತಿ ವಿಜಯಲಕ್ಷ್ಮೀ ಉಪ್ಪಳ, ಶ್ರೀಮತಿ ಶಾಂತ ನಾಯಕ, ಶ್ರೀಮತಿ ಶೇಖರಮ್ಮ ಉಪ್ಪಾರ ಹಾಗೂ ಸಂಸ್ಥೆಯ ಮುಖ್ಯಸ್ಥರು, ಮಹಿಳಾ ಸಂಘದ ಸದಸ್ಯರು, ಸಂಜೀವಿನಿ ಸಿಬ್ಬಂದಿಗಳು, ಮತ್ತು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು