Breaking News

ಮೋದಿಮತ್ತೆಪ್ರಧಾನಿಯಾಗಬೇಕು ದೇಶ & ರೈತರಿಗೆ ಒಳ್ಳೆಯದಾಗಲಿ ಪಾದಯಾತ್ರೆ ಮೂಲಕ ಪೂಜೆ: ಶತಾಯಿಸಿ ಪಾರ್ವತಮ್ಮ

Modi should be Prime Minister again May it be good for country & farmers Worship through padayatra: Shataisi Parvathamma

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ :ಬಂಗಾರಪ್ಪ ಸಿ .
ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಹಬ್ಬದಂದು ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿರುವುದು ವಾಡಿಕೆ , ಮಾದಪ್ಪನ ಸನ್ನಿದಿಗೆ ಪಾದಯಾತ್ರೆಯ ಮುಖಾಂತರ ಹರಕೆ ಮಾಡಿಕೊಳ್ಳುವುದು ಭಕ್ತನಿಗೂ ಭಗವಂತನಿಗೂ ಇರುವ ಸಂಭಂದ ಆದರೆ ಇಲ್ಲೋಬ್ಬ ಶತಾಯಿಸಿ ವೃದ್ದೆಯೊಬ್ಬರು ತಾಳಬೆಟ್ಟದಿಂದ ಸರಿ ಸುಮಾರು 18km ದೂರ ಪಾದಯಾತ್ರೆ ಮಾಡಿ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹಾರೈಸಿದ್ದಾರೆ.
ಇವರು ಮೂಲತಹ ತಿಪಟೂರು ಮೂಲದವರು 102 ವರ್ಷದ ವೃದ್ಧೆ ಪಾರ್ವತಮ್ಮ ನಿಷ್ಕಲ್ಮಷ ಹಾರೈಕೆಯಿಂದ ಮಾದಪ್ಪನ ಬೆಟ್ಟ ಹತ್ತಿದ್ದು ಪೂಜೆ ಸಲ್ಲಿಸಿರುವ ವಿಡಿಯೋ ವೈರಲ್ಲಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ. ಮೋದಿ ಪ್ರಧಾನಿಯಾಗ ಬೇಕು, ದೇಶಕ್ಕೆ ಒಳ್ಳೆಯದಾಗಬೇಕು, ಮಳೆ, ಬೆಳೆಯಾಗಿ ರೈತರನ್ನು ದೇವರು ಕೈ ಹಿಡಿಯಬೇಕು ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗಬೇಕು ಎಂದು ವೃದ್ದೆ ಪಾರ್ವತಮ್ಮ ಮಾದಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ. 5_6 ವರ್ಷದಿಂದ ಪಾದಯಾತ್ರೆ ಮೂಲಕ ಬೆಟ್ಟ ಹತ್ತುತಿದ್ದು 102 ವರ್ಷದ ಇಳಿವಯಸ್ಸಿನ ವೃದ್ಧೆಯ ಸಾಹಸಕ್ಕೆ ಮಾಯ್ಕಾರ ಮಾದಪ್ಪನೇ ನಿಜಕ್ಕೂ ಮರುಳಾಗಬೇಕು ಎಂದು ಭಕ್ತರು ಹರಸಿದ್ದಾರೆ .

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *