Breaking News

ತಿಪಟೂರು ತಾಲೂಕಿನ ತಡಸೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಲಿತ ವಿರೋಧಿ ದಿನೇಶ್‍ರವರನ್ನು ಸೇವೆಯಿಂದವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ

pratibhaṭaneA massive protest by the Karnataka Dalit Sangharsh Samiti demanding the dismissal of anti-Dalit head teacher Dineshra of Tadasur Government High School in Tipatur taluk.

ಜಾಹೀರಾತು
Screenshot 2024 03 01 19 44 55 35 6012fa4d4ddec268fc5c7112cbb265e7 300x189

ತಿಪಟೂರು:ತಾಲೂಕಿನ ಕಸಬಾ ಹೋಬಳಿಯ ತಡಸೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಿನೇಶ್ ರವರು ಇತ್ತೀಚೆಗೆ ತಡಸೂರು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸವಿಂಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಆ ಜಾಥಾ ಕಾರ್ಯಕ್ರಮಕ್ಕೆ ಬರದಂತೆ ತಡೆಹಿಡಿದು ಮತ್ತು ಬೆದರಿಸಿ,ಆ ಸವಿಂಧಾನ ಜಾಗೃತಿಯ ವೇದಿಕೆ ಕಾರ್ಯಕ್ರಮದಲ್ಲಿದ್ದ ಗಣ್ಯರು ಬಿ.ಆರ್.ಅಂಬೇಡ್ಕರ್ ಭಾವಚಿತ್ರವುಳ್ಳ ಶಾಲನ್ನು ಹಾಕಿಕೊಂಡಿದ್ದು,ಈ ಶಿಕ್ಷಕ ಆ ಶಾಲನ್ನು ಧರಿಸದೆ ಬಾಬಾ ಸಾಹೇಬ್ ರವರಿಗೆ ಅವಮಾನಿಸಿದ್ದನ್ನು ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿಯ ಬೀಜ ಬಿತ್ತರಿಸಿ, ವಿದ್ಯಾರ್ಥಿಗಳ ಮಧ್ಯೆ ಕಂದಕ ಮೂಡಿಸಿದ್ದು ಶಾಲೆಗೆ ಮಕ್ಕಳು ಹೋಗುವುದಿಲ್ಲವೆಂದು ಪೋಷಕರೆದುರು ಕಣ್ಣೀರು ಹಾಕಿದ್ದು,ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರು ಇವರನ್ನು ಸೇವೆಯಿಂದ ವಜಾ ಮಾಡಬೇಕು ಇಲ್ಲವಾದಲ್ಲಿ, ತಾಲೂಕಿನಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಮಾಡಿ, ತಿಪಟೂರ್ ಬಂದ್ ಮಾಡುತ್ತೇವೆ ತಿಳಿಸಿದರು.

ಮಾಜಿ ಜಿಪಂ ಸದಸ್ಯ ಕೊಪ್ಪ ಶಾಂತಪ್ಪ ಮಾತನಾಡಿ,ಮುಖ್ಯ ಶಿಕ್ಷಕ ದಿನೇಶ್ ರವರು ಸರಿಯಾಗಿ ಶಾಲೆಗೆ ಬರದೆ,ಈ ಶಾಲೆಯಲ್ಲಿ ಅವರ ಹೆಂಡತಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಮಹತ್ವಕಾಂಕ್ಷಿಯ ಬಿಸಿ ಊಟದ ಯೋಜನೆಯಲ್ಲಿ ಮೊಟ್ಟೆ ವಿತರಿಸದೆ,ಇಲ್ಲಿ ಹೋರಾಟದ ನಂತರ ಮೊಟ್ಟೆ ವಿತರಿಸುತ್ತಿದ್ದಾರೆ.ಮೊಟ್ಟೆ ಬದಲಿಗೆ ಕಡ್ಲೆ ಮಿಠಾಯಿ ಮತ್ತು ಬಾಳೆಹಣ್ಣು ನೀಡುತ್ತಿರುವುದು ಕಂಡು ಬಂದಿದ್ದು, ಈ ವಿಚಾರವಾಗಿ ವಿದ್ಯಾರ್ಥಿಗಳು ಕೇಳಿದಾಗ ನೀವು ಮಾಂಸಾಹಾರಿಗಳು ಕಡ್ಲೆ ಮಿಠಾಯಿ ತಿನ್ನಿ ಅಂತ ಉಡಾಫೆ ಉತ್ತರ ನೀಡಿದ್ದು,ಇದರ ಬಗ್ಗೆ ಎಸ್ಡಿಎಂಸಿಯ ಪದಾಧಿಕಾರಿಗಳು ತಾಲೂಕು ಶಿಕ್ಷಣಾಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ನಂತರ ಮೊಟ್ಟೆ ವಿತರಿಸಲು ಆದೇಶಿಸಿದ್ದು,ಈ ಮುಖ್ಯ ಶಿಕ್ಷಕನ ಕಾರ್ಯವೈಖರಿ ದಲಿತ ವಿರೋಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಛಲವಾದಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ,ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಕಂಡ ಬಂದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರುಗಳಿಗೆ ಇದೇ ರೀತಿಯ ತೊಂದರೆಗಳನ್ನು ನೀಡುತ್ತಿದು,ಗಂಡ ಮತ್ತು ಹೆಂಡತಿ ಇಬ್ಬರ ಕಿರುಕುಳದಿಂದ ಬೇಸತ್ತು ಬೇರೆ ಕಡೆ ವರ್ಗಾವಣೆ ಗೊಂಡಿರುವ ವಿಚಾರಗಳು ಸುಮಾರುಷ್ಟಿವೆ.ಸಹ ಶಿಕ್ಷಕರಿಗೆ ತುಂಬಾ ಕಿರುಕುಳ ನೀಡುತ್ತಿದಾರೆ ಎಂಬ ವಿಚಾರವಾಗಿ ಶಾಲಾ ಶಿಕ್ಷಣದ ಆವರಣದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪವನ್ ಕುಮಾರ್ ರವರು,ಈ ವಿಚಾರವಾಗಿ ಸಂಬಂಧ ಪಟ್ಟ ಇಲಾಖೆಯವರ ಜೊತೆಗೂಡಿ ಮಾತನಾಡಿ,ಕಾನೂನು ರೀತಿಯ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ರಾಘವೇಂದ್ರ ಯಗಚೀಕಟ್ಟೆ,ಗ್ರಾಪಂ ಸದಸ್ಯ ರೇಣುಕಯ್ಯ,ವಿಭಾಗೀಯ ಸಂಚಾಲಕ ಟಿ.ಕೆ.ಕುಮಾರ್, ಸಂಘಟನಾ ಸಂಚಾಲಕರಾದ ಲಿಂಗದೇವರು,ತಾತಯ್ಯ, ರಾಮನಾಯ್ಕ,ಮಹಾದೇವ್ ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್,ಕರಿಯಪ್ಪ ಚಿಕ್ಕಣ್ಣ ಮತ್ತು ಮಂಜುನಾಥ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಮುಖಂಡರುಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

About Mallikarjun

Check Also

whatsapp image 2025 11 14 at 5.38.16 pm

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ Stop the establishment of Baldota and return …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.