13th Sneha Sammelan of Sri Basaveshwar Vidyawardaka Institute
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ13 ನೇ ವರ್ಷದ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾದೇವ ಮೇತ್ರಿ (ಕೋರೆ)ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳು ದಿನ ನಿತ್ಯ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠವನ್ನು ಕೇಳಿ ಸಮಯವನ್ನು ವ್ಯರ್ಥ ಮಾಡದೆ ಅಭ್ಯಾಸದ ಕಡೆ ಗಮನ ನೀಡಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡು ಸಂಸ್ಥೆಗೆ ಮಾದರಿ ವಿದ್ಯಾರ್ಥಿ ಆಗಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯವನ್ನು ಪ ಪೂ ಜ್ಞಾನೇಶ್ವರ ಮಹಾ ಸ್ವಾಮೀಜಿ ವಹಿಸಿದ್ದರು.ಪ್ರಧಾನ ಗುರುಗಳಾದ ಅಮರ ಕಲ್ಲೋತಿ,ಗ್ರಾಮ ಪಂಚಾಯತ ಸದಸ್ಯರಾದ ಬಾಳು ಮಗದುಮ್ಮ, ಸಿದಲಿಂಗ ಇಬ್ರಾಹಿಂಪೂರ,ಸಂತೋಷ ಕಲ್ಲೋತಿ, ಮಹೇಶ ಕೇಸ್ತಿ, ಸಿ ಆರ್ ಪಿ ಎಸ್ ಐ ಶರಣ, ಶ್ರೀಶೈಲ ಮೇತ್ರಿ,ವಿನಾಯಕ ಗುರವ, ವಿಜಯ ಮೇತ್ರಿ, ಶಿಕ್ಷಕರಾದ ಸಂತೋಷ ಕುಂಬಾರ, ಎಸ್ ಬಿ ಒಡೆಯರ, ಕೆ ಎ ಕಾಂಬಳೆ,ಎಮ್ ಎಸ್ ಭಂಡಾರಿ, ಎಮ್ ಬಿ ಪವಾರ, ದ್ರಾಕ್ಷಾಯಿನಿ ಮೆಂಡಿಗೇರಿ,ಪವಿತ್ರಾ ಮಾರಾಟೆ,ಶಿಲ್ಪಾ ಮಜಗಿ,ಪುಷ್ಪ ಮರಾಟೆ, ಪುಷ್ಪ ಗೌಡ, ಅಶ್ವಿತಾ ಹರಿಕಾಂತ, ಮುರಗೇಶ ಮಾಳಿ, ಧಾನವ ಕುಂಬಾರ ಹಾಗೂ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು