Private bus overturns near HRG city, 10 passengers seriously injured

ಗಂಗಾವತಿ: ತಾಲೂಕಿನ ಹೇಮಗುಡ್ಡದ ಎಚ್ ಆರ್ ಜಿ ನಗರದ ಹತ್ತಿರ ಹೈದರಾಬಾದಿನಿಂದ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ 10ಪ್ರಯಾಣಿಕರು ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ಬೆಳ್ಳಿಗ್ಗೆ 7 ಗಂಟೆಗೆ ಜರುಗಿದೆ.
ಹೈದರಾಬಾದಿನಿಂದ ಬೆಳಗಾವಿಗೆ ಹೊರಟಿದ್ದ ಬಸ್ಸು ಗುರುವಾರ ಬೆಳಿಗ್ಗೆ ಎಚ್ ಆರ್ ಜಿ ನಗರದ ಹತ್ತಿರ ಹೋಗುವ ಸಂದರ್ಭದಲ್ಲಿ ಎದುರಿಗೆ ಬಂದ ಬೋಲೆರೋ ವಾಹನ ಅಪಘಾತ ತಪ್ಪಿಸಲು ಬಸ್ ಚಾಲಕ ಪಕ್ಕಕ್ಕೆ ಬಸ್ಸನ್ನು ಚಲಿಸಿದ್ದರಿಂದ ಬಸ್ ಪಲ್ಟಿಯಾಗಿದೆ.ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 10 ಜನರಿಗೆ ತೀವ್ರ
ಗಾಯಗಳಾಗಿವೆ. 8 ಜನರಿಗೆ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಉಳಿದ ಇಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಮತ್ತು ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಗಳು ಆಗಮಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.