Dalit Kundu submitted a request to Sulya Taluk Collector to hold a shortage meeting

ಸುಳ್ಯ: ದಲಿತ ಕುಂದು ಕೊರತೆ ಸಭೆ ನಡೆಸಲು ಸುಳ್ಯ ತಹಿಶೀಲ್ದಾರ್ ರವರಿಗೆ ಮನವಿ ವಿವಿಧ ದಲಿತ ಸಂಘಟನೆಯಿಂದ ಈ ದಿನ ಸುಳ್ಯ ತಾಲೂಕು ದಂಡಾಧಿಕಾರಿಯವರಿಗೆ ದಲಿತ ಕುಂದುಕೊರತೆ ಸಭೆ ನಡೆಸಲು ಪತ್ರ ಮುಖೇನ ಮನವಿ ಸಲ್ಲಿಸಲಾಯಿತು.ಈ ಸಂದರ್ಬದಲ್ಲಿ .ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ.ಸುಳ್ಯ ಶಾಖೆಯ ಪದಾಧಿಕಾರಿಗಳು, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ.ಪಲ್ಲತ್ತಡ್ಕ, ತಾಲೂಕು ಮುಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತ್ತಡ್ಕ,ಆದಿ ದ್ರಾವಿಡ ಸುಳ್ಯ ತಾಲೂಕು ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಡಿ.ಪಿ.ದೊಡ್ಡೇರಿ,ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ.ಸುಳ್ಯ ತಾಲೂಕು ಮುಗೇರ ಯುವ ವೇದಿಕೆ ಗೌರವಾಧ್ಯಕ್ಷರಾದ ಪ್ರಕಾಶ್ ಪಿ.ಎಸ್.ಪಾತೆಟ್ಟಿ ಉಪಸ್ಥಿತರಿದ್ದರು. ಸಭೆಯನ್ನು ಆದಷ್ಟು ಬೇಗ ನಡೆಸುವುದಾಗಿ ಸುಳ್ಯ ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್ ಸರ್ ಭರವಸೆ ನೀಡಿದ್ದಾರೆ.
Kalyanasiri Kannada News Live 24×7 | News Karnataka
