Mini Vidhana Soudhalli B.D. Make a bronze statue of Jatti: Dhruva
ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮ ಪಂಚಾಯತಿ ಯಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿ, ಜಮಖಂಡಿ – ತೇರದಾಳ ಮತಕ್ಷೇತ್ರದಿಂದ ಸ್ಪರ್ಧಿಸಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಈ ದೇಶದ ರಾಷ್ಟ್ರಪತಿಯಾಗಿ ಸೇವೆಯನ್ನು ಸಲ್ಲಿಸಿದ ಶ್ರೀ ಬಿ ಡಿ ಜತ್ತಿ ರವರ ಒಂದು ಸ್ಮಾರಕ ಕೂಡಾ ಇರದಿರುವದು ಬೇಸರದ ಸಂಗತಿಯಾಗಿದೆ.
ಜಮಖಂಡಿಯಲ್ಲಿ ಹೆಮ್ಮೆಯ ನಾಯಕ ಶ್ರೀ ಬಿ ಡಿ ಜತ್ತಿ ರವರ ಕಂಚಿನ ಪ್ರತಿಮೆಯನ್ನು ಮಿನಿ ವಿಧಾನಸೌಧದಲ್ಲಿ ಸ್ಥಾಪಿಸಬೇಕು ಎಂದು ಬಾಗಲಕೋಟೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರ್ ಬಿ ತಿಮ್ಮಾಪುರ ರವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ಕೆ ತಾವೆಲ್ಲರೂ ಹೃದಯ ಪೂರ್ವಕ ಸಮರ್ಥನೆಯನ್ನು ನೀಡುತ್ತೀರಿ ಎಂದು ಆಶಿಸುತ್ತೇನೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರು, ಜತ್ತಿ ಅವರ ಮೊಮ್ಮಗ ಧ್ರುವ ಜತ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.