Breaking News

ಜೈನ್ ಪಬ್ಲಿಕ್ಶಾಲೆಯಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ

Karate Belt Test at Jain Public School

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಫೆಬ್ರವರಿ-೨೪ ರಂದು ಗಂಗಾವತಿಯ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕರಾಟೆ ಬೆಲ್ಟ್ ಪರೀಕ್ಷೆಯನ್ನು ಟ್ರೆಡಿಷನಲ್ ಅಂಡ್ ಸ್ಪೋರ್ಟ್ಸ್ ಶೊಟುಖಾನ್ ಕರಾಟೆ ಡು ಅಸೋಸಿಷಿಯನ್ ಇಂಡಿಯಾ ಇವರ ನೇತೃತ್ವದಲ್ಲಿ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ೨೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಬೆಲ್ಟ್ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೈನ್ ಪಬ್ಲಿಕ್ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶಶಿಧರ್ ಉಪ್ಪಾರ್ ಮತ್ತು ಅಕಾಡೆಮಿಕ್ ಕೌನ್ಸಿಲರ್ ಶ್ರೀಮತಿ ಸೈಯದ್ ಫಬಿನಾ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ದಿನಮಾನದಲ್ಲಿ ಕರಾಟೆ ಕಲೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಮುಖ್ಯ ಅವಶ್ಯಕತೆ ಇದೆ ಇಂತಹ ಸಮರ ಕಲೆಗಳನ್ನು ಶಿಕ್ಷಣದ ಜೊತೆಗೆ ಕಲಿಯುವುದರಿಂದ ವಿದ್ಯಾರ್ಥಿಗಳು ತಮ್ಮ ಆತ್ಮಸ್ಥೆöÊರ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕರಾಟೆ ಕಲೆಯನ್ನು ವಿದ್ಯಾರ್ಥಿಗಳು ಕಲಿಯುವುದರಿಂದ ಏಕಾಗ್ರತೆ ಶಿಸ್ತು ಹೆಚ್ಚಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಪರೀಕ್ಷೆಗಾರರಾಗಿ ಆಗಮಿಸಿದಂತಹ ಶಿಹಾನ್ ಮರಿಸ್ವಾಮಿ ಹೊಸಪೇಟೆ ಮತ್ತು ಸ್ಥಳೀಯ ಖ್ಯಾತಕರಾಟೆ ತರಬೇತಿದಾರರಾದ ಡಾ. ಶಿಹಾನ್ ಜಬಿವುಲ್ಲಾ ಮತ್ತು ದೈಹಿಕ ಶಿಕ್ಷಕರಾದ ಬಾನು ಪ್ರಸಾದ್. ಕಿರಣ್ ಕುಮಾರ್ ಮತ್ತು ಜೈನ್ ಪಬ್ಲಿಕ್ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *