Breaking News

ಭಾರತ ಹುಣ್ಣಿಮೆ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ವಿಶೇಷಪೂಜೆ,ಪ್ರತಿಯೊಬ್ಬರೂಆಧ್ಯಾತ್ಮಿಕವಾಗಿದೇವರಲ್ಲಿಪಾಲಕರಲ್ಲಿನಂಬಿಕೆಯುಳ್ಳವರಾಗಬೇಕು

Bharat Full Moon Special Pooja at Shri Renuka Yallamma Temple, Everyone Should Be Spiritually Believing in God and Guardians

ಜಾಹೀರಾತು


ಗಂಗಾವತಿ: ಪ್ರತಿಯೊಬ್ಬರೂ ದೇವರು ಹಾಗೂ ಪಾಲಕರಲ್ಲಿ ನಂಬಿಕೆಯುಳ್ಳವರಾಗುವಂತೆ ರಾಷ್ಟ್ರೀಯ ಪಟ್ಟಣ ಸೌಹಾರ್ದ ಸಹಕಾರಿ ಮಹಾಮಂಡಳದ ರಾಜ್ಯದ ನೂತನ ನಿರ್ದೇಶಕ ಕೆ.ಕಾಳಪ್ಪ ಹೇಳಿದರು.
ಅವರು ಇಸ್ಲಾಂಪೂರ ಅಂಗಡಿ ಸಂಗಣ್ಣ ಕ್ಯಾಂಪಿನಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಭಾರತ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ವಿಶೇಷ ಪೂಜಾ ಹಾಗೂ ಸನ್ಮಾನ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಕಳೆದ ೭೦ ವರ್ಷಗಳಿಂದ ಅಂಗಡಿ ಸಂಗಣ್ಣಕ್ಯಾಂಪ್ ನಲ್ಲಿ ರೇಣುಕಾ ಯಲ್ಲಮ್ಮ ಉದ್ಭವವಾಗಿ ನೆಲೆಸಿದ್ದು ಈ ಭಾಗದ ಭಕ್ತರ ಬೇಡಿಕೆ ಈಡೇರಿಸುತ್ತಿದ್ದಾಳೆ.ನಗರದ ಆರಾಧ್ಯ ದೈವ ಶ್ರೀ ಚನ್ನಬಸವಸ್ವಾಮಿ ಆಶೀರ್ವಾದ ದಿಂದ ಸಿಬಿಎಸ್ ಬ್ಯಾಂಕ್ ಮೂಲಕ ದೆಹಲಿಯಲ್ಲಿ ರಾಷ್ಟ್ರೀಯ ಸೌಹಾರ್ದತಾ ಸಹಕಾರಿ ಮಹಾಮಂಡಳದ ರಾಜ್ಯ ನಿರ್ದೇಶಕರನ್ನಾಗಿ ಎರಡು ಭಾರಿ ಆಯ್ಕೆಯಾಗಲು ರಾಜ್ಯದ ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್, ಮಾಜಿ ಎಂ.ಮಲ್ಲಿಕಾರ್ಜುನ, ಕೆ.ಸಿ.ಕೊಂಡಯ್ಯ ಸೇರಿ ಎಲ್ಲಾ ಹಿರಿಯ ಸಹಕಾರಿ ಧುರೀಣರು ಕಾರಣರಾಗಿದ್ದು ಸಹಕಾರಿ ಕ್ಷೇತ್ರ ರಾಜ್ಯದಲ್ಲಿ ಬೆಳವಣಿಗೆ ಕಾರ್ಯ ಮಾಡಲಾಗುತ್ತದೆ ಎಂದರು.
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿ ನೂತನ ಅಧ್ಯಕ್ಷ ಬಸವರಾಜ ರಾಮತ್ನಾಳ,ಉಪಾಧ್ಯಕ್ಷ ಸಿಂಗನಾಳ ಕುಮಾರೆಪ್ಪ ಇವರನ್ನುಸನ್ಮಾನಿಸಲಾಯಿತು. ದೇವಸ್ಥಾನದ ಮುಖ್ಯಸ್ಥರಾದ ಗಂಗಮ್ಮ ತಾಯಿ,ದೇವಾಲಯದಪದಾಧಿಕಾರಿಗಳಾದ ಕೆ.ನಿಂಗಜ್ಜ,ಅಶೋಕ ಗೌಡ,ಲಕ್ಷ್ಮಣ ಗೌಡ,ಸಂಜೀವಕುಮಾರ ನೇಕಾರ,ವಿರೇಶ ಮಳ್ಳಿ, ನೀಲಕಂಠ ಗಿಟ್ಗಿ,ನಾಗರಾಜ ಮೇದಾರ್,ಪ್ರಸಾದ,ಪರಶುರಾಮ ಇಟಗಿ,ನೀಲಕಂಠಪ್ಪ ಮೆಟ್ರಿ, ಬಸವರಾಜ ಶಿಡ್ಲಗಟ್ಟಿ, ನಿವೃತ್ತ ಎಎಸ್ ಐ ಚಂದ್ರಶೇಖರ,ಶಾವಿ ತಿಪ್ಪಣ್ಣ,ಶಿವರಾಜ ನಾಯಕ,ಕೋಟಿ ರಾಮ್,ಮಹಾಲಿಂಗಪ್ಪ ಸೌದ್ರಿ,ನಾಗರಾಜ ಕುರುಗೋಡು,ಮಸ್ಕಿ ಶೇಖರಪ್ಪ,ಕುಡತಿನಿ ವೆಂಕಟೇಶ ಸೇರಿ ಅನೇಕರಿದ್ದರು.
.

About Mallikarjun

Check Also

ಕಂದಾಯ ದಿನಾಚರಣೆ ಕಾರ್ಯಕ್ರಮ

Revenue Day Program ಕೊಟ್ಟೂರು:. ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ …

Leave a Reply

Your email address will not be published. Required fields are marked *