Daytime extortion at wine shop…!
ಕುಕನೂರು: ತಾಲೂಕಿನ ಕುದರಿಮೋತಿ ಗ್ರಾಮದ ಶ್ರೀ ಲಿಕ್ಕರ್ಸ್ ವೈನ್ಸ್ ಸಿ.ಎಲ್ -2, ಶಾಪ್ ಇದೆ. ಇಲ್ಲಿ ಸರ್ಕಾರದ ಅಬಕಾರಿ MRP ದರದ ಮೇಲೆ ಕನಿಷ್ಠ 40 ರೂಪಾಯಿ ಹೆಚ್ಚಿನ ದುಡ್ಡನ್ನು ಗ್ರಾಹಕರಿಂದ ಸುಲಿಗೆಯಂತೆ ಸುಲಿಯುತ್ತಿದ್ದಾನೆ ಈತನಿಗೆ ಈ ಭಾಗದ ಅಬಕಾರಿ ಅಧಿಕಾರಿಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಅವರಿಗೆ ತಿಂಗಳ ತಿಂಗಳ ಮಾಮೂಲಿ ಕೊಡುವುದಾಗಿ ಹೇಳುತ್ತಿದ್ದಾನೆ ಇಷ್ಟೊಂದು ರೇಟು ಹೆಚ್ಚಿಗೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರೆ ಗ್ರಾಹಕರಿಗೆ ಲಿಕ್ಕರ್ ಕೊಡುವುದಿಲ್ಲ ಜೊತೆಗೆ ನಾನು ಮಾರುವುದೇ ಇಷ್ಟು ಅದೇನು ಮಾಡ್ಕೋತಿಯ ಮಾಡ್ಕೋ, ಯಾರಿಗೆ ಕಂಪ್ಲೇಂಟ್ ಕೊಡ್ತೀಯ ಕೊಡು ಎಂದು ಗ್ರಾಹಕರಿಗೆ ಅವಾಜ್ ಹಾಕುತ್ತಿದ್ದಾರೆ. ದಿನನಿತ್ಯ ಒಬ್ಬ ಗ್ರಾಹಕರಿಗೆ ಯಾವುದೇ ಲಿಕ್ಕರ್ ಬಾಟಲಿಗಳನ್ನು ಖರೀದಿಸಿದರೆ ಪ್ರತಿಯೊಂದು ರೂಪಾಯಿಗಳವರೆಗೆ ಹೆಚ್ಚಿ ಪಡೆಯುತ್ತಾನೆ ಇದರ ಬಗ್ಗೆ ಅಬಕಾರಿ ಇಲಾಖೆಗಳು ಗಮನ ಹರಿಸಬೇಕಾಗಿದೆ ಜೊತೆಗೆ ಗ್ರಾಹಕರಿಗೆ ತೊಂದರೆಯನ್ನು ತಪ್ಪಿಸಬೇಕಾಗಿದೆ. ಈ ಶಾಪ್ ನಲ್ಲಿ ಗ್ರಾಹಕರಿಗೆ ಕ್ಯಾಶ್ ಕೌಂಟರ್ ನಲ್ಲಿರುವ ವ್ಯಕ್ತಿ ದುರಹಂಕಾರದಿಂದ ಪ್ರತಿಯೊಬ್ಬರಿಗೂ ಏಕವಚನದಲ್ಲಿ ಮಾತನಾಡುತ್ತಾರೆ ಮತ್ತು ಈ ಶಾಪ್ ನಲ್ಲಿ ನೀರು, ಕ್ಲಾಸ್ ಮತ್ತು ವಿಮಲ್ ಸಮೇತ ಮಾರುತ್ತಾರೆ, ಹಳ್ಳಿ ಹಳ್ಳಿಗಳಿಗೆ ಟು ವಿಲರ್ ಮೇಲೆ ತಾವೇ ಆಗಲ್ಲಿ ಹೋಗಿ ಕೊಡುತ್ತಾರೆ….ಮತ್ತು ಸುತ್ತಮುತ್ತ ಯಾವುದೇ ಸ್ವಚ್ಚತೆ ಇಲ್ಲಾ ಎಂದು ಗ್ರಾಮಸ್ಥರ ಆರೋಪ… ಹಾಗಾಗಿ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಅವರು ಕೆಟ್ಟ ಗಮನಹರಿಸಿ ಗ್ರಾಹಕರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಾಗಿದೆ ಮತ್ತು ಈ ಲಿಕ್ಕರ್ ಶಾಪ್ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿದೆ, ಗ್ರಾಮದ ಜನರಿಂದ ಪ್ರತಿಭಟನೆಗೂ ಸಜ್ಜಾಗಲು ರೆಡಿಯಾಗಿದ್ದಾರೆ ಎಂದು ತಿಳಿದು ಬಂದಿದೆ