Vishwakarma’s achievement is all-pervading” Vishwakarmanadojada.Umesh Kumar

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರದ ಕಜ್ಕೆ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅನ್ನಪೂರ್ಣೇಶ್ವರಿ,
ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ವಿನಾಯಕ ದೇವಾಲಯದ ಶಿಲಾಬಿಂಬ ಪ್ರತಿಷ್ಠೆ ಹಾಗೂ ಮಹಾ ಕುಂಬಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ,
ಶ್ರೀ ಈಶ ವಿಠಲ ದಾಸ್ ಸ್ವಾಮೀಜಿ, ರಾಜ್ಯ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ
ಡಾ. ಉಮೇಶ್ ಕುಮಾರ್, ದೇವಾಲಯ ಸಮಿತಿ ಪ್ರಮುಖರು ಹಾಗೂ ಅನೇಕ ವಿಶ್ವಕರ್ಮ ಕುಲಬಾಂಧವರು
ಈ ಸಮಾರಂಭದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಉಮೇಶ್ ಕುಮಾರ್ “ವಿಶ್ವಕರ್ಮ ಸಮಾಜದ ಸಾಧನೆಯು ಸರ್ವವ್ಯಾಪಿಯಾಗಿದ್ದು, ಅದಕ್ಕೆ ಯಾವುದೇ ಮಿತಿಯಿಲ್ಲ. ಈ ದೇವಸ್ಥಾನವನ್ನು ವಿಶ್ವಕರ್ಮ ಸಮಾಜದ ಹೆಮ್ಮೆ ಎಂದು ಕರೆಯಬಹುದು. ಈ ದೇವಸ್ಥಾನ ಅಜರಾಮರವಾಗಿ ಬೆಳೆಯಲಿ” ಎಂದು ಹಾರೈಸಿದರು.
ದೇವಾಲಯದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಶಿಲಾಮೂರ್ತಿಯನ್ನು ಅಯೋಧ್ಯೆಯ ಬಾಲರಾಮನ ಮೂರ್ತಿಯ ಶಿಲ್ಪಿ, ವಿಶ್ವಕರ್ಮ ಸಮಾಜದ ಹೆಮ್ಮೆಯ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದು, ಅತ್ಯಂತ ಅದ್ಬುತವಾಗಿ ಮೂಡಿಬಂದಿದೆ.